ETV Bharat / state

ತುಮಕೂರಿನಲ್ಲಿ ಶಾಲಾ ವಾಹನ ಪಲ್ಟಿ: 10 ಮಕ್ಕಳಿಗೆ ಗಾಯ

author img

By

Published : Oct 21, 2021, 2:12 PM IST

Updated : Oct 21, 2021, 2:24 PM IST

ತುಮಕೂರಿನ ಕೊರಟಗೆರೆಯಲ್ಲಿ ಶಾಲಾ ವ್ಯಾನ್​ ಪಲ್ಟಿಯಾಗಿ 10 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

accident
accident

ತುಮಕೂರು: ಶಾಲಾ ವಾಹನ ಪಲ್ಟಿಯಾದ ಹಿನ್ನೆಲೆ 10 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಕೊರಟಗೆರೆಯಲ್ಲಿ ನಡೆದಿದೆ.

ಇದು ಎಸ್​ವಿಜಿ ಶಾಲೆಗೆ ಸೇರಿದ ವ್ಯಾನ್​ ಎನ್ನಲಾಗಿದ್ದು, ಗಾಯಗೊಂಡ ವಿದ್ಯಾರ್ಥಿಗಳನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೊರಟಗೆರೆಯಲ್ಲಿ ಶಾಲಾ ವಾಹನ ಪಲ್ಟಿ

ಚಾಲಕ ಮದ್ಯ ಸೇವನೆ ಮಾಡಿ ಅತಿವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದ್ದು, ಅಪಘಾತ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated :Oct 21, 2021, 2:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.