ETV Bharat / state

ಭದ್ರಾವತಿಯ ವಿಐಎಸ್ಎಲ್​ ಶತಮಾನೋತ್ಸವ ಸಂಭ್ರಮ.. ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರು ಭಾಗಿ

author img

By ETV Bharat Karnataka Team

Published : Nov 4, 2023, 9:43 AM IST

Updated : Nov 4, 2023, 10:34 AM IST

VISL Factory Centenary
ಶತಮಾನೋತ್ಸವ ಸಂಭ್ರಮದಲ್ಲಿ ಭದ್ರಾವತಿಯ ವಿಐಎಸ್ಎಲ್  ಕಾರ್ಖಾನೆ

VISL factory centenary: 100 ನೇ ವರ್ಷದ ಹೂಸ್ತಿಲಲ್ಲಿ ಇರುವ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯ ಸವಿನೆನಪಿಗಾಗಿ ಶಿವಮೊಗ್ಗದಲ್ಲಿ ಇಂದು ಮತ್ತು ನಾಳೆ ಎರಡು ದಿನ ಶತಮಾನೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಶತಮಾನೋತ್ಸವದ ಅಧ್ಯಕ್ಷ ನಟ ದೊಡ್ಡಣ್ಣ ಮಾಧ್ಯಮದವರ ಜೊತೆ ಮಾತನಾಡಿದರು.

ಶಿವಮೊಗ್ಗ: 100 ನೇ ವರ್ಷದ ಹೂಸ್ತಿಲಲ್ಲಿ ಇರುವ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯ ಸವಿನೆನಪಿಗಾಗಿ ಇಂದು (ನ. 4 ಮತ್ತು 5) ಎರಡು ದಿನ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ಮೈದಾನದಲ್ಲಿ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ನವೆಂಬರ್ 4 ರಂದು ಬೆಳಗ್ಗೆ ನಡೆಯುವ ಕಾರ್ಯಕ್ರಮವನ್ನು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಹದ್ದೂರ್​ ಅವರು ಉದ್ಘಾಟಿಸುವರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಠದ ಡಾ ನಿರ್ಮಲಾನಂದ ಸ್ವಾಮೀಜಿ ಹಾಗೂ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಕೇಂದ್ರದ ವಿವಿಧ ಸಚಿವರು ಭಾಗವಹಿಸಲಿದ್ದಾರೆ. ನಂತರ ನಾರಾಯಣ ಹೃದಯಾಲಯದ ನಿರ್ದೇಶಕ ಡಾ ಸಿ ಎನ್ ಮಂಜುನಾಥ್, ಕೆಎಲ್​ಇ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ಹಾಗೂ ವಿಆರ್​ಎಲ್​ ಸಂಸ್ಥೆ ಮುಖ್ಯಸ್ಥ ವಿಜಯ್​ ಸಂಕೇಶ್ವರ್ ಅವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ನಾಳೆ ನಡೆಯುವ ಮಧ್ಯಾಹ್ನದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮಂತ್ರಿಮಂಡಲದ ವಿವಿಧ ಸಚಿವರು ಭಾಗವಹಿಸಲಿದ್ದಾರೆ. ಭಾನುವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇಂದು ಸಂಜೆ ವಿಐಎಸ್ಎಲ್​ನ ಶತಮಾನೋತ್ಸವ ಅಂಗವಾಗಿ ಭದ್ರಾ ನದಿಯ ಸಂಗಮೇಶ್ವರ ಮಂಟಪದಲ್ಲಿ ಭದ್ರಾರತಿ ಕಾರ್ಯಕ್ರಮ ಜರುಗಲಿದೆ.

ಸಾವಿರಾರು ಜನರಿಗೆ ಅನ್ನ ನೀಡಿದ ಕಾರ್ಖಾನೆ: ವಿಶ್ವಶ್ವೇರಾಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯ ಕುರಿತು ಸಂಸದ ಬಿ ವೈ ರಾಘವೇಂದ್ರ ಮಾತನಾಡಿ, ವಿಶ್ವಶ್ವೇರಾಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆ ಈ ಭಾಗದ ಜನರ ಜೀವನಾಡಿಯಾಗಿದೆ. ಇದೊಂದು ಐತಿಹಾಸಿಕ ಕಾಯಕ್ರಮ. ಶತಮಾನೋತ್ಸವ ಕಾರ್ಯಕ್ರಮ ನಟ ದೊಡ್ಡಣ್ಣ ನೇತೃತ್ವದಲ್ಲಿ ಜರುಗುತ್ತಿದೆ. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ವಿಶೇಷವಾಗಿ ಖ್ಯಾತ ಉದ್ಯಮಿಗಳಿಗೆ ಸನ್ಮಾನವನ್ನು ಸಹ ಹಮ್ಮಿಕೊಳ್ಳಲಾಗಿದೆ.

ಸಾವಿರಾರು ಜನರಿಗೆ ಅನ್ನ ನೀಡಿದ ಕಾರ್ಖಾನೆ ಇದಾಗಿದೆ. ಕಾರ್ಖಾನೆಯಲ್ಲಿ ಶಿವಮೊಗ್ಗ, ಭದ್ರಾವತಿ ಜನರ ಬದುಕಿದೆ. ಇದಕ್ಕೆ ಜೀವ ತುಂಬುವ ಕೆಲಸ ಮಾಡಲಾಗುತ್ತಿದೆ. ಇದು ಈಗ ರೋಗಗ್ರಸ್ಥ ಕಾರ್ಖಾನೆಯಾಗಿದೆ. ಈಗ ಅನೇಕ ಶ್ರೀಗಳ ಪಾದಸ್ಪರ್ಶದಿಂದ ಕಾರ್ಖಾನೆ ಚೆನ್ನಾಗಿ ಮುಂದಿನ ದಿನಗಳಲ್ಲಿ ನಡೆಯುವಂತೆ ಆಗಬೇಕೆಂದು ಆಶಾಭಾವನೆ ವ್ಯಕ್ತಪಡಿಸಿದರು.

ಶತಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷ ನಟ ದೊಡ್ಡಣ್ಣ ಮಾತನಾಡಿ, ಎರಡು ದಿನ ವಿಐಎಸ್ಎಲ್ ನ ಶತಮಾನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಲಿದೆ. ಸಾಂಸ್ಕೃತಿಕ ಸೇರಿ ಎಲ್ಲ ಕಾಯಕ್ರಮಗಳನ್ನು ಅದ್ಧೂರಿಯಾಗಿ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಇದನ್ನೂಓದಿ:ಮುಂದಿನ ವರ್ಷ ನಡೆದುಕೊಂಡು ಬರುವಷ್ಟು ಶಕ್ತಿ ಕೊಡು ತಾಯಿ.. ಹಾಸನಾಂಬೆಗೆ ದೇವೇಗೌಡರ ಪ್ರಾರ್ಥನೆ

Last Updated :Nov 4, 2023, 10:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.