ETV Bharat / state

ವಿಪಕ್ಷ ನಾಯಕನ ಆಯ್ಕೆ ಮಾಡದಿರುವ ಗತಿ ರಾಷ್ಟ್ರೀಯ ಪಕ್ಷ ಬಿಜೆಪಿಗೆ ಬಂದಿದ್ದು ದೌರ್ಭಾಗ್ಯ: ಚಲುವರಾಯಸ್ವಾಮಿ

author img

By

Published : Jul 21, 2023, 11:06 PM IST

Updated : Jul 22, 2023, 6:29 AM IST

Agriculture Minister Chaluvaraya Swamy spoke to reporters.
ಕೃಷಿ ಸಚಿವ ಚಲುವರಾಯ ಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನ ಮುಗಿಯಲು ಬಂದರೂ, ವಿಪಕ್ಷ ನಾಯಕನ ಆಯ್ಕೆ ಇನ್ನೂ ಆಗಿಲ್ಲ. ಇದು ಒಂದು ರಾಷ್ಟ್ರೀಯ ಪಕ್ಷದ ದೌರ್ಭಾಗ್ಯ ಎಂದು ಸಚಿವ ಚಲುರಾಯಸ್ವಾಮಿ ಟೀಕಿಸಿದರು.

ಶಿವಮೊಗ್ಗ: ಅಧಿವೇಶನದ ವೇಳೆಯಲ್ಲಿ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ವಿಪಕ್ಷ ನಾಯಕನ ನೇಮಕ ಮಾಡದಿರುವುದು ದೌರ್ಭಾಗ್ಯ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಆರೋಪಿಸಿದ್ದಾರೆ. ಶಿವಮೊಗ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಸುದ್ದಿಗಾರೂಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನ ಮುಗಿಯಲೂ ಬಂದರೂ, ವಿಪಕ್ಷ ನಾಯಕನ ಆಯ್ಕೆ ಇನ್ನೂ ಆಗಿಲ್ಲ. ವಿಪಕ್ಷ ನಾಯಕ ಇಲ್ಲದೇ ಸದನ ನಡೆದಿದೆ. ವಿರೋಧ ಪಕ್ಷದ ನಾಯಕ ಇಲ್ಲದೇ ಇರುವ ಗತಿ ರಾಷ್ಟ್ರೀಯ ಪಕ್ಷಕ್ಕೆ ಬಂದಿದೆ ಎಂದು ಬಿಜೆಪಿ ವಿರುದ್ಧ ಲೇವಡಿ ಮಾಡಿದರು.

ಅಧಿವೇಶನ ನಡೆಯುವ ವೇಳೆಯಾದರೂ ಸಹ ತಮ್ಮ ಪಕ್ಷದ ನಾಯಕನನ್ನು ಘೋಷಣೆ ಮಾಡದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ರಾಜ್ಯ ಸರ್ಕಾರ ರೈತರಿಗೆ 5 ಲಕ್ಷ ರೂ ಬಡ್ಡಿ ರಹಿತ ಸಾಲ ಕೊಡುತ್ತಿದೆ. ಆ ಮೂಲಕ ರೈತರಿಗೆ ಸರ್ಕಾರ ಧೈರ್ಯ ತುಂಬುತ್ತಿದೆ. ಹಾವೇರಿ ಜಿಲ್ಲೆಯಲ್ಲಿ 6 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದನ್ನು ವಿಪಕ್ಷಗಳು 18 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸದನದಲ್ಲಿ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಸದನದಲ್ಲಿ ಪ್ರಮುಖ ಚರ್ಚೆ ನಡೆಯುವ ವೇಳೆ ಬಿಜೆಪಿ ದೂರ ಉಳಿದಿದೆ. ಇದು ತಪ್ಪು ಎಂದು ಹೇಳಿದರು.

ಕುಮಾರಸ್ವಾಮಿ ಪೆನ್ ಡ್ರೈವ್ ವಿಚಾರ: ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಪೆನ್ ಡ್ರೈವ್ ಬಿಡುಗಡೆ ಮಾಡಲು ಬೇಡ ಅಂದವರು ಯಾರು ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು. ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆರೋಪ : ಭ್ರಷ್ಟಾಚಾರ ಆರೋಪ ಸತ್ಯಕ್ಕೆ ದೂರವಾದುದು, ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದೂವರೆ ತಿಂಗಳು ಆಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಹೇಗೆ ವರ್ಗಾವಣೆ‌ ಆಗಿದೆಯೋ ಅದೇ ರೀತಿ ವರ್ಗಾವಣೆ ನಡೆತಿದೆ ಎಂದು ಸ್ಪಷ್ಟಪಡಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಎರಡು ಪಕ್ಷಗಳು ಸೋತು ಸುಣ್ಣವಾಗಿವೆ.‌ ಇದರಿಂದ ಬಿಜೆಪಿ, ಜೆಡಿಎಸ್ ಮೈತ್ರಿಗೆ ಮುಂದಾಗಿವೆ. ಈ ಮೈತ್ರಿ ಬಗ್ಗೆ ನನಗೆ ನಂಬಿಕೆ ‌ಇಲ್ಲ. ಕುಮಾರಸ್ವಾಮಿ ‌ಮಾತಿನ ಮೇಲೆ ನಂಬಿಕೆ ‌ಇಲ್ಲ. ಮೈತ್ರಿಯನ್ನು ದೇವೇಗೌಡರು ಸ್ಪಷ್ಟಪಡಿಸಬೇಕು. ಪೆನ್ ಡ್ರೈವ್ ಹೇಳಿಕೆಯಂತೆ ಮೈತ್ರಿ ವಿಚಾರದಲ್ಲಿ ಕುಮಾರಸ್ವಾಮಿ ಉಲ್ಟಾ ಹೊಡೆದರು ಎಂದು ಸಚಿವರು ಕುಟುಕಿದರು.

ಬೆಳೆ ವಿಮೆ ವಿಚಾರ: ರಾಜ್ಯದಲ್ಲಿ 1,500 ಕೋಟಿ ರೂ. ಬೆಳೆ ವಿಮೆಗೆ ಮೀಸಲು ಇಡಲಾಗಿದೆ. ಕೃಷಿ ಇಲಾಖೆಯಿಂದ 900 ಕೋಟಿ ರೂ‌. ಮೀಸಲು ಇಡಲಾಗಿದೆ. ತೋಟಗಾರಿಕೆ ಇಲಾಖೆಯಿಂದ 600 ಕೋಟಿ ಮೀಸಲು ಇಡಲಾಗಿದೆ. ಬೆಳೆ ವಿಮೆಗೆ 6 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ.‌ ತೋಟಗಾರಿಕೆ ನಮ್ಮ ವ್ಯಾಪ್ತಿಗೆ ಬಾರದೇ ಇದ್ದರೂ ಸಹ ನಾವು ತೋಟಗಾರಿಕಾ ಸಚಿವ ಮಲ್ಲಿಕಾರ್ಜುನ್ ಹಾಗೂ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪನವರು ಕುಳಿತು ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

ಇದನ್ನೂಓದಿ: ವನ್ಯಜೀವಿಗಳಿಂದ ಜೀವಹಾನಿ: ತಕ್ಷಣ ಪರಿಹಾರಕ್ಕೆ ಸಚಿವ ಖಂಡ್ರೆ ಸೂಚನೆ

Last Updated :Jul 22, 2023, 6:29 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.