ETV Bharat / state

ಮಾತ್ರೆ ಸೇವಿಸಿ ಮಲಗಿದ್ದ ಯುವಕ ಸಾವು...ಮಣಿಪಾಲ್ ವೈದ್ಯರ ನಿರ್ಲಕ್ಷ್ಯ ಆರೋಪ

author img

By

Published : Sep 27, 2019, 6:21 PM IST

ಅಜಯ್ ಸಿಂಗ್(23) ಮೃತ ಯುವಕ

ಶಿವಮೊಗ್ಗ ವಿದ್ಯಾನಗರ ನಿವಾಸಿ, ಅಜಯ್ ಸಿಂಗ್(23) ಮೃತ ಯುವಕ. ಅಜಯ್ ಸಿಂಗ್​​ ಕಳೆದ ಎರಡು‌ ದಿನದ ಹಿಂದಷ್ಟೆ ಬಲ ತೋಳಿಗೆ ಆಪರೇಷನ್ ​ ಮಾಡಿಸಿಕೊಂಡಿದ್ದ. ನಂತರ ಅಲ್ಲಿನ ವೈದ್ಯರು ಅಜಯ್ ಸಿಂಗ್​​ರನ್ನು ಡಿಸ್ಚಾರ್ಜ್​ ಮಾಡಿಸಿ ಕಳುಹಿಸಿ ಕೊಟ್ಟಿದ್ದರು. ಮಣಿಪಾಲದಿಂದ ಬಂದ ನಂತರ ಅಜಯ್ ಸಿಂಗ್, ಮನೆಯಲ್ಲಿ ಎರಡು ಬಾರಿ ವಾಂತಿ ಮಾಡಿ ಕೊಂಡಿದ್ದಾನೆ.

ಶಿವಮೊಗ್ಗ: ಯುವಕನೊಬ್ಬ ಇಂದು ಮುಂಜಾನೆ ಮೃತ ಪಟ್ಟಿದ್ದು, ಮಣಿಪಾಲ್ ವೈದ್ಯರ ನಿರ್ಲಕ್ಷ್ಯದಿಂದಲೇ ಮೃತಪಟ್ಟಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ.

ಶಿವಮೊಗ್ಗ ವಿದ್ಯಾನಗರ ನಿವಾಸಿ, ಅಜಯ್ ಸಿಂಗ್(23) ಮೃತ ಯುವಕ. ಅಜಯ್ ಸಿಂಗ್​​ಗೆ ಕಳೆದ ಎರಡು‌ ದಿನದ ಹಿಂದಷ್ಟೆ ಮಣಿಪಾಲ್ ವೈದ್ಯ ಡಾ. ಕಿರಣ್ ಆಚಾರ್ಯ ಎಂಬುವವರು ಬಲ ತೋಳಿಗೆ ಆಪರೇಷನ್ ಮಾಡಿದ್ದರು. ಆಪರೇಷನ್ ನಡೆಸಿದ ನಂತರ ಅಲ್ಲಿನ ವೈದ್ಯರು ಅಜಯ್ ಸಿಂಗ್​​ರನ್ನು ಡಿಸ್ಚಾರ್ಜ್​ ಮಾಡಿಸಿ ಕಳುಹಿಸಿ ಕೊಟ್ಟಿದ್ದರು. ಮಣಿಪಾಲದಿಂದ ಬಂದ ನಂತರ ಅಜಯ್ ಸಿಂಗ್, ಮನೆಯಲ್ಲಿ ಎರಡು ಬಾರಿ ವಾಂತಿ ಮಾಡಿ ಕೊಂಡಿದ್ದಾರೆ.

ಮಾತ್ರೆ ಸೇವಿಸಿ ಮಲಗಿದ್ದ ಯುವಕ ಸಾವು

ಆ ವೇಳೆ ಡಾ.‌ಕಿರಣ್ ಆಚಾರ್ಯರವರಿಗೆ ಫೋನ್ ಮಾಡಿ ಹೇಳಿದಾಗ, ಅವರು ವಾಟ್ಸ್​ಆ್ಯಪ್​ನಲ್ಲಿ ಮಾತ್ರೆಯ ಹೆಸರನ್ನು ಕಳುಹಿಸಿ, ಆ ಮಾತ್ರೆ ಕುಡಿಸಿ ಸರಿಯಾಗುತ್ತದೆ ಎಂದು ಹೇಳಿದ್ದಾರೆ.

ಡಾ. ಕಿರಣ್ ಆಚಾರ್ಯ ಹೇಳಿದಂತೆ ಮಾತ್ರ ಸೇವಿಸಿ ಮಲಗಿದ್ದ ಅಜಯ್ ಸಿಂಗ್​ಗೆ ಇಂದು ಬೆಳಗಿನ ಜಾವ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿದೆ. ತಕ್ಷಣ ಶಿವಮೊಗ್ಗದ ಸಂಜೀವಿನಿ ಆಸ್ಪತ್ರೆಗೆ ಕರೆತಂದು ತೋರಿಸಿದಾಗ‌, ಅಲ್ಲಿನ ವೈದ್ಯರು ಅಜಯ್ ಸಿಂಗ್ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಇದಾದ ನಂತರ ಸಿಂಗ್​ ಸಂಬಂಧಿಕರು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲೂ ಕೂಡ ಸಿಂಗ್​ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಅಜಯ್ ಸಿಂಗ್ ಪೋಷಕರು, ಸಂಬಂಧಿಕರು ಹಾಗೂ ಸ್ನೇಹಿತರು ಆರೋಪಿಸಿದ್ದಾರೆ. ಘಟನೆ ಕುರಿತು ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Intro:ಮಣಿಪಾಲ್ ವೈದ್ಯರ ನಿರ್ಲಕ್ಷ್ಯ ದಿಂದ ಶಿವಮೊಗ್ಗದ ಯುವಕನೂರ್ವ ಇಂದು ಮುಂಜಾನೆ ಮೃತ ಪಟ್ಟಿದ್ದಾನೆ. ಶಿವಮೊಗ್ಗ ವಿದ್ಯಾನಗರ ನಿವಾಸಿ, ಅಜಯ್ ಸಿಂಗ್(23) ವರ್ಷದ ಯುವಕ ಇಂದು ಮುಂಜಾನೆ ಮೃತ ಪಟ್ಟಿದ್ದಾನೆ. ಅಜಯ್ ಸಿಂಗ್ ಗೆ ಕಳೆದ ಎರಡು‌ ದಿನದ ಹಿಂದಷ್ಟೆ ಮಣಿಪಾಲ್ ವೈದ್ಯ ಡಾ. ಕಿರಣ್ ಆಚಾರ್ಯ ಎಂಬುವರು ಬಲ ತೋಳಿನ ಆಪರೇಷನ್ ನಡೆಸಿದ್ದರು. ಆಪರೇಷನ್ ನಡೆಸಿದ ನಂತ್ರ ಅಲ್ಲಿನ ವೈದ್ಯರು ಅಜಯ್ ಸಿಂಗ್ ರನ್ನು ಡಿಜಾರ್ಜ್ ಮಾಡಿಸಿ ಕಳುಹಿಸಿ ಕೊಟ್ಟಿದ್ದರು. ಮಣಿಪಾಲದಿಂದ ಬಂದ ನಂತ್ರ ಅಜಯ್ ಸಿಂಗ್ ಮನೆಯಲ್ಲಿ ಎರಡು ಭಾರಿ ವಾಂತಿ ಮಾಡಿ ಕೊಂಡಿದ್ದಾನೆ. ಆ ವೇಳೆ ಡಾ.‌ಕಿರಣ್ ಆಚಾರ್ಯ ರವರಿಗೆ ಪೋನ್ ಮಾಡಿ ಹೇಳಿದಾಗ ಅವರು ವಾಟ್ಸಪ್ ನಲ್ಲಿಯೇ ಮಾತ್ರೆಯ ಹೆಸರನ್ನು ಕಳುಹಿಸಿ, ಇದನ್ನು ತೆಗೆದು ಕೊಳ್ಳಿ ಸರಿಯಾಗುತ್ತದೆ ಎಂದು ಹೇಳಿದ್ದಾರೆ.


Body:ಡಾ. ಕಿರಣ್ ಆಚಾರ್ಯ ಹೇಳಿದಂತೆ ಮಾತ್ರ ಸೇವಿಸಿ ಮಲಗಿದ್ದ ಅಜಯ್ ಸಿಂಗ್ ಇಂದು ಬೆಳಗಿನ ಜಾವ ತೀವ್ರ ಉಸಿರಾಟದ ಸಮಸ್ಯೆ ಎದರಿಸಿದ್ದಾರೆ. ತಕ್ಷಣ ಶಿವಮೊಗ್ಗದ ಸಂಜೀವಿನಿ ಆಸ್ಪತ್ರೆಗೆ ಕರೆತಂದು ತೋರಿಸಿದಾಗ‌ ಅಲ್ಲಿನ ವೈದ್ಯರು ಅಜಯ್ ಸಿಂಗ್ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅಜಯ್ ಸಿಂಗ್ ಸಂಬಂಧಿಕರು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ಕರೆ ತಂದಿದ್ದಾರೆ. ಇದು ವೈದ್ಯರ ನಿರ್ಲಕ್ಷ್ಯ ದಿಂದ ಸಾವು ಸಂಭವಿಸಿದೆ ಎಂದು ಅಜಯ್ ಸಿಂಗ್ ಪೋಷಕರು , ಸಂಬಂಧಿಕರು ಹಾಗೂ ಸ್ನೇಹಿತರು ಆರೋಪಿಸಿದ್ದಾರೆ. ಅಜಯ್ ಸಿಂಗ್ ಶವ ಪರೀಕ್ಷೆ ನಡೆಸಿದರೆ ಎಲ್ಲಾ ತಿಳಿಯುತ್ತದೆ ಎಂದು ಶವ ಪರೀಕ್ಷೆ ನಡೆಸುವಂತೆ ಆಗ್ರಹಿಸಲಾಗಿದೆ.


Conclusion:ಮಣಿಪಾಲದ ವೈದ್ಯ ಕಿರಣ್ ಆಚಾರ್ಯ ಅತ್ಯಂತ ಪ್ರಸಿದ್ದ ವೈದ್ಯ. ಇವರು ಸಾಕಷ್ಟು ಯಶಸ್ವಿ ಆಪರೇಷನ್ ನಡೆಸಿದ್ದಾರೆ.
ಆಪರೇಷನ್ ನಡೆದ ನಂತ್ರ 24 ಗಂಟೆ ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿ ರೋಗಿ ಇರಬೇಕು. ಆದ್ರೆ, ಅದನ್ನು ಮಾಡದೆ, ಕಿರಣ್ ಆಚಾರ್ಯ ರವರು ಹೇಗೆ ಕಳುಹಿಸಿದರು. ಅಲ್ಲದೆ ಅವರು ರೋಗಿಯ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿದ್ದ ಕಾರಣ ಅಜಯ್ ಸಿಂಗ್ ಮೃತ ಪಟ್ಟಿದ್ದಾರೆ ಎಂಬ ಆರೋಪ ಸಂಬಂಧಿಕರು ಹಾಗೂ ಸ್ನೇಹಿತರು ಮಾಡುತ್ತಿದ್ದಾರೆ. ಸಾವಿನ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಅಜಯ್ ಸಿಂಗ್ ಗೆ ಓರ್ವ ಅಕ್ಕ, ಓರ್ವ ತಂಗಿ ಇದ್ದಾಳೆ. ಇವರ ತಂದೆ ಬಾಲಾಜಿ ಸಿಂಗ್ ಸಣ್ಣದೊದು ಕ್ಯಾಂಟೀನ್ ನಡೆಸುತ್ತಿದ್ದಾರೆ. ಸಾವಿನ ಕುರಿತು‌ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಲಾಗಿದೆ.

ಬೈಟ್: ಅರವಿಂದ್. ಅಜಯ್ ಸಿಂಗ್ ಭಾವ.

ಬೈಟ್: ಅಜಯ್. ಸ್ನೇಹಿತ.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.