ETV Bharat / state

ರಾಯಚೂರು-ಆಂಧ್ರ ಗಡಿಯಲ್ಲಿ ಆಟೋ ಪಲ್ಟಿ: ಇಬ್ಬರು ಸಾವು!

author img

By

Published : Feb 6, 2022, 1:25 PM IST

two died by accident in raichur
ರಾಯಚೂರು ಆಂಧ್ರ ಗಡಿಯಲ್ಲಿ ಆಟೋ ಪಲ್ಟಿ

ರಾಯಚೂರು ಜಿಲ್ಲೆಯ ಗಡಿ ಭಾಗದ ಆಂಧ್ರದ ಮಹಾದ್ವಾರಂ ಹತ್ತಿರ ಇಂದು ಬೆಳಗಿನ ಜಾವ ಆಟೋ ಪಲ್ಟಿಯಾಗಿ, ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ರಾಯಚೂರು: ಚಲಿಸುತ್ತಿದ್ದ ಆಟೋ ಟೈಯರ್ ಸ್ಫೋಟಗೊಂಡ ಪರಿಣಾಮ ಆಟೋ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂರ್ನಾಲ್ಕು ಜನರು ಗಾಯಗೊಂಡಿರುವ ಘಟನೆ ಆಂಧ್ರದ ಮಹಾದ್ವಾರಂ ಮಂಡಲದ ಹತ್ತಿರ ನಡೆದಿದೆ.

ರಾಯಚೂರು ಜಿಲ್ಲೆಯ ಗಡಿ ಭಾಗದ ಆಂಧ್ರದ ಮಹಾದ್ವಾರಂ ಹತ್ತಿರ ಭಾನುವಾರ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ. ದೊಡ್ಡಬಳ್ಳಾಪುರದಿಂದ ನಾಲ್ಕೈದು ಜನ ಸ್ನೇಹಿತರು ಬೆಂಗಳೂರಿನಿಂದ ರೈಲು ಮೂಲಕ ಬೆಳಗ್ಗೆ ಮಂತ್ರಾಲಯಂ ರೈಲ್ವೆ ನಿಲ್ದಾಣಕ್ಕೆ ತಲುಪಿದ್ದಾರೆ. ರೈಲ್ವೆ ನಿಲ್ದಾಣದಿಂದ ಆಟೋ ಮೂಲಕ‌ ಮಂತ್ರಾಲಯಕ್ಕೆ ಪ್ರಯಾಣಿಸಿದ್ದಾರೆ. ಆದ್ರೆ ಮಹಾದ್ವಾರಂ ಸಮೀಪ ಆಟೋ ಟೈಯರ್​ ಬ್ಲಾಸ್ಟ್ ಆದ ಹಿನ್ನೆಲೆ ಆಟೋ ಪಲ್ಟಿಯಾಗಿದೆ. ಪರಿಣಾಮ, ಆಟೋ ಚಾಲಕ ಹಾಗೂ ರಾಘವೇಂದ್ರ ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನುಳಿದವರು ಗಾಯಗೊಂಡಿದ್ದಾರೆ.

two died by accident in raichur
ಆಟೋ ಪಲ್ಟಿಯಾಗಿ ಇಬ್ಬರು ಸಾವು

ಇದನ್ನೂ ಓದಿ: ಮಂಡ್ಯದಲ್ಲಿ ಭೀಕರ ಘಟನೆ : ಒಂದೇ ಕುಟುಂಬದ ಐವರನ್ನು ಕೊಚ್ಚಿ ಕೊಲೆ

ಘಟನಾ ಸ್ಥಳಕ್ಕೆ ಮಹಾದ್ವಾರಂ ಪೊಲೀಸರು ಸ್ಥಳಕ್ಕೆ ಭೇಟಿ ನಿಡಿ ಪರಿಶೀಲಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.

ಆಟೋ ಪಲ್ಟಿ: ಇಬ್ಬರು ಸಾವು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.