ETV Bharat / state

ಮೈಸೂರು: ಅಶೋಕ್ ವಿರುದ್ಧ ಠಾಣೆಯಲ್ಲಿ ದೂರು; ರಾಜ್ಯೋತ್ಸವ ಪ್ರಶಸ್ತಿ ಹಿಂಪಡೆದ ಕನ್ನಡ ಸಂಸ್ಕೃತಿ ಇಲಾಖೆ

author img

By ETV Bharat Karnataka Team

Published : Nov 22, 2023, 5:17 PM IST

Rajyotsava Award ​
ಸಮಾಜ ಸೇವೆ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಎಂ ಅಶೋಕ

ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಮಾಜ ಸೇವಕ ಎಂ ಅಶೋಕ್ ಅವರಿಗೆ ನೀಡಿದ್ದ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಾಪಸ್​ ಪಡೆದಿದೆ.

ಮೈಸೂರು: ಅಪರಾಧದಲ್ಲಿ ಭಾಗಿಯಾದ ಆರೋಪದ ಮೇಲೆ ಠಾಣೆಗಳಲ್ಲಿ ದೂರು ದಾಖಲಾಗಿರುವ ಹಿನ್ನೆಲೆ ಸಮಾಜ ಸೇವಕ ಎಂ ಅಶೋಕ್​​​​ ಅವರಿಗೆ ನೀಡಿದ್ದ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ವಾಪಸ್​ ಪಡೆಯಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

2023-24 ನೇ ಸಾಲಿನ ಕನ್ನಡ ರಾಜ್ಯೋತ್ಸವ ನಿಮಿತ್ತ ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿದ ವ್ಯಕ್ತಿಗಳನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು 50 ಮಂದಿ ಗಣ್ಯರಿಗೆ ನೀಡಲಾಗಿತ್ತು. ಆ ಪೈಕಿ ಮೈಸೂರು ನಗರದ ಅಶೋಕ್ ಅವರಿಗೂ ಸಹ ಸಮಾಜ ಕ್ಷೇತ್ರದಲ್ಲಿ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕ ವಿರುದ್ಧ ಪ್ರಕರಣ: ನವಂಬರ್ 1 ರಂದು ಜಿಲ್ಲಾಮಟ್ಟದ ವೇದಿಕೆಯಲ್ಲಿ ಅಶೋಕ್ ಸೇರಿದಂತೆ 50 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ವಿತರಿಸಿ ಸನ್ಮಾನ ಮಾಡಲಾಗಿತು. ಪ್ರಸ್ತುತ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನಿತರಲ್ಲಿ ಒಬ್ಬರಾಗಿದ್ದ ಅಶೋಕ್ ವಿರುದ್ಧ ವಿವಿಧ ಪೊಲೀಸ್​​ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಕುರಿತಾಗಿ ಮಾಹಿತಿ ಸಿಕ್ಕಿದೆ.

ಅಪರಾಧದ ಆರೋಪದಡಿ ಅಶೋಕ ವಿರುದ್ಧ ನಗರದ ಲಷ್ಕರ್ ಠಾಣೆ, ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನೆಲೆ ಆರಕ್ಷಕ ಇಲಾಖೆಯಿಂದ ಮಾಹಿತಿ ಪಡೆದು, ಆ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎಂ.ಅಶೋಕ್ ಅವರಿಗೆ ನೀಡಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ವಾಪಸ್​​ ಪಡೆಯಲಾಗಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂಓದಿ:ಮೈಸೂರು: ಡಿ.8 ರಿಂದ ರೈತ ಯುವಕರ ವಿವಾಹದ ಜಾಗೃತಿಗಾಗಿ ಪಾದಯಾತ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.