ETV Bharat / state

75 ಲಕ್ಷ ರೂ.ಮೌಲ್ಯದ ಮನೆ ವಶಪಡಿಸಿಕೊಂಡ ಮುಡಾ

author img

By

Published : Dec 31, 2021, 7:47 PM IST

Muda seized 75 lakh worth house at Mysore
ಎಪ್ಪತ್ತೈದು ಲಕ್ಷ ಮೌಲ್ಯದ ಮನೆ ವಶಕ್ಕೆ ಪಡೆದ ಮುಡಾ

ಮುಡಾದಿಂದ ಆರ್ಥಿಕ ದುರ್ಬಲ ವರ್ಗದವರಿಗೆ ನಿರ್ಮಿಸಲಾಗಿದ್ದ ರಾಮಕೃಷ್ಣನಗರದ ಐ ಬ್ಲಾಕ್ ಬಡಾವಣೆಯ ಎಂಐಜಿ ಮನೆ ಸಂಖ್ಯೆ 47/ಬಿ ಮನೆಯಲ್ಲಿ ಸುಮಾರು 15 ವರ್ಷಗಳಿಂದ ಕುಮಾರ್ ಕ್ರಾಂತಿ ಎಂಬುವರು ಅನಧಿಕೃತವಾಗಿ ವಾಸವಾಗಿದ್ದರು..

ಮೈಸೂರು : ಮುಡಾ ಮನೆಯನ್ನು ದುರುಪಯೋಗ ಪಡಿಸಿಕೊಂಡು ಅನಧಿಕೃತವಾಗಿ ವಾಸವಾಗಿದ್ದವರನ್ನು ತೆರವು ಮಾಡಿಸಿ ಸುಮಾರು 75 ಲಕ್ಷ ರೂ.ಮೌಲ್ಯದ ನಿವೇಶನವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಮನೆಯನ್ನು ವಶಕ್ಕೆ ಪಡೆದ ಮುಡಾ ಅಧಿಕಾರಿಗಳು

ಮುಡಾದಿಂದ ಆರ್ಥಿಕ ದುರ್ಬಲ ವರ್ಗದವರಿಗೆ ನಿರ್ಮಿಸಲಾಗಿದ್ದ ರಾಮಕೃಷ್ಣನಗರದ ಐ ಬ್ಲಾಕ್ ಬಡಾವಣೆಯ ಎಂಐಜಿ ಮನೆ ಸಂಖ್ಯೆ 47/ಬಿ ಮನೆಯಲ್ಲಿ ಸುಮಾರು 15 ವರ್ಷಗಳಿಂದ ಕುಮಾರ್ ಕ್ರಾಂತಿ ಎಂಬುವರು ಅನಧಿಕೃತವಾಗಿ ವಾಸವಾಗಿದ್ದರು.

ಬಳಿಕ ಈ ಮನೆಯನ್ನು 2021ರ ಅಕ್ಟೋಬರ್ 16ರಿಂದ ರಘು ಎಂಬುವರಿಗೆ ಮಾಸಿಕ 8 ಸಾವಿರ ರೂ.ಗಳಂತೆ ಬಾಡಿಗೆ ನೀಡಿದ್ದರು. ಆರ್ಥಿಕ ದುರ್ಬಲ ವರ್ಗದವರಿಗೆ ಸಿಗಬೇಕಿದ್ದ ಮನೆಯನ್ನು ಪಡೆದು ದುರುಪಯೋಗ ಪಡಿಸಿಕೊಂಡ ಹಿನ್ನೆಲೆ ಮನೆಯನ್ನು ಮುಡಾ ವಶಕ್ಕೆ ಪಡೆದಿದೆ.

ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್​ರವರ ನಿರ್ದೇಶನದಂತೆ ಸರಸ್ವತಿಪುರಂ ಪೊಲೀಸ್ ಠಾಣೆ ಅಧಿಕಾರಿಗಳ ರಕ್ಷಣೆಯೊಂದಿಗೆ ತೆರಳಿ ಮನೆಯಲ್ಲಿ ಅನಧಿಕೃತವಾಗಿ ವಾಸವಿದ್ದರನ್ನು ತೆರವುಗೊಳಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಒಮಿಕ್ರಾನ್​ ಅಬ್ಬರ.. ಮೂವರು ಮಕ್ಕಳು ಸೇರಿ 23 ಹೊಸ ಸೋಂಕಿತರು ಪತ್ತೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.