ETV Bharat / state

ಮೈಸೂರಿನಲ್ಲಿ ಲೋಕಾಯುಕ್ತ ದಾಳಿ: ಮುಡಾ ತಹಶೀಲ್ದಾರ್ ಸೇರಿ ಮೂವರು ವಶಕ್ಕೆ

author img

By

Published : Dec 23, 2022, 4:26 PM IST

Lokayukta attack
ಲೋಕಾಯುಕ್ತ ದಾಳಿ

ಮುಡಾ ತಹಶೀಲ್ದಾರ್ ಸೇರಿ ಮೂವರು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದರು.

ಮೈಸೂರು: ನಿವೇಶನ ಖಾತೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದಾಗ ಮುಡಾ ತಹಶೀಲ್ದಾರ್ ಸೇರಿ ಮೂವರು ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ತಹಶೀಲ್ದಾರ್ ಬಿ.ಕೆ ಶ್ರೀನಿವಾಸ್, ಪ್ರಥಮ ದರ್ಜೆ ಗುಮಾಸ್ತ ರಂಗಣ್ಣ, ಅಟೆಂಡರ್ ವರಲಕ್ಷ್ಮಿ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ. ಕೃಷ್ಣ ನೇತೃತ್ವದಲ್ಲಿ ದಾಳಿ ನಡೆದಿದೆ.

ಕಾರ್ತಿಕ್ ಗೌಡ ಎಂಬ ವ್ಯಕ್ತಿ ತಮ್ಮ ನಿವೇಶನಗಳಿಗೆ ಖಾತೆ ಮಾಡಿಸಲು ಕಳೆದ ಎರಡು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ 20 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ವ್ಯಕ್ತಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಇಂದು 14 ಸಾವಿರ ರೂ ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಕೊಳ್ಳೇಗಾಲದ ಎರಡು ಕಡೆ ಲೋಕಾಯುಕ್ತ ದಾಳಿ, ಕಡತ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.