ETV Bharat / state

ಸಿದ್ದರಾಮಯ್ಯ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿಗಳ ಪೋಷಕ: ಸಂಸದ ಪ್ರತಾಪ್ ಸಿಂಹ

author img

By

Published : Aug 13, 2022, 5:00 PM IST

ex-cm-siddaramaiah-is-a-anti-hindu-says-bjp-mp-pratap-simha
ಸಿದ್ದರಾಮಯ್ಯ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿಗಳ ಪೋಷಕ ಎಂದ ಸಂಸದ ಪ್ರತಾಪ್ ಸಿಂಹ

ಈಗಾಗಲೇ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ನೀಡಲಾಗಿದೆ. ಆದರೆ, ಇಲ್ಲೇ ಉಳಿದಿರುವವರು ಸಂವಿಧಾನಕ್ಕೆ ಗೌರವ ಕೊಟ್ಟು ಬದುಕುವುದನ್ನು ಕಲಿಯಿರಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರು: ಸರ್ಕಾರಿ ಅನುದಾನಿತ ಎಲ್ಲ ಮದರಸಾಗಳಲ್ಲೂ ರಾಷ್ಟ್ರಧ್ವಜ ಹಾರಿಸಬೇಕೆಂಬ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಿದ್ದು, ಅದರ ವಿರುದ್ಧ ಮಾತನಾಡುವ ಜನರಿಗೆ ಸಿದ್ದರಾಮಯ್ಯ ಕುಮ್ಮಕ್ಕು ನೀಡುತ್ತಿದ್ದಾರೆ. ಅವರೊಬ್ಬ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿಗಳ ಪೋಷಕ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಇಂದು ಹರ್ ಘರ್ ತಿರಂಗಾ ಅಭಿಯಾನ ಕುರಿತು ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿ, ಸರ್ಕಾರದ ಎಲ್ಲ ಅನುದಾನಿತ ಮದರಸಾಗಳಲ್ಲೂ ರಾಷ್ಟ್ರಧ್ವಜ ಹಾರಿಸಬೇಕು. ಶಾಸಕ ಜಮೀರ್ ಅಹ್ಮದ್ ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಮತ್ತು ಗಣೇಶೋತ್ಸವ ಮಾಡಲು ಬಿಡುವುದಿಲ್ಲ ಎನ್ನುತ್ತಾರೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದರು.

ಈಗಾಗಲೇ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ನೀಡಲಾಗಿದೆ. ಆದರೆ, ಇಲ್ಲೇ ಉಳಿದಿರುವವರು ಸಂವಿಧಾನಕ್ಕೆ ಗೌರವ ಕೊಟ್ಟು ಬದುಕುವುದನ್ನು ಕಲಿಯಿರಿ ಎಂದೂ ಸಂಸದ ಪ್ರತಾಪ್ ಸಿಂಹ ಹೇಳಿದರು.

ಸಿದ್ದರಾಮಯ್ಯ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿಗಳ ಪೋಷಕ ಎಂದ ಸಂಸದ ಪ್ರತಾಪ್ ಸಿಂಹ

ಕಾಂಗ್ರೆಸ್​ನಲ್ಲಿ ಎರಡು ಬಣ : ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಎಂಬ ಎರಡು ಟೀಂ ಇದೆ. ಸಿದ್ದರಾಮಯ್ಯ ಟೀಂಗೆ ಜಮೀರ್ ಅಹ್ಮದ್ ವೈಸ್ ಕ್ಯಾಪ್ಟನ್, ಡಿ.ಕೆ ಟೀಂಗೆ ನಲಪಾಡ್ ವೈಸ್ ಕ್ಯಾಪ್ಟನ್ ಎಂದು ಸಂಸದರು ಟೀಕಿಸಿದರು.

ಸ್ವಾತಂತ್ರ್ಯ ಹೋರಾಟಕ್ಕೆ ಆರ್​ಎಸ್​ಎಸ್ ಹಾಗೂ ಬಿಜೆಪಿಯ ಕೊಡುಗೆ ಏನು ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಏನು ಮೂಲ ಕಾಂಗ್ರೆಸ್ಸಿನವರೇ?, ಅವರ ಕುಟುಂಬ ಏನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತಾ?. ನೆಹರು-ಇಂದಿರಾ ಗಾಂಧಿ ಎಲ್ಲಿ ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತರು ಎಂದು ಪ್ರಶ್ನಿಸಿದರು.

ಭಗತ್ ಸಿಂಗ್, ರಾಜ್ ಗುರು ಅವರಂತ ಕ್ರಾಂತಿಕಾರಿಗಳು ಸ್ವತಂತ್ರ್ಯಕ್ಕಾಗಿ ಜೀವ ತೆತ್ತವರು. ಇತಿಹಾಸದ ಕನಿಷ್ಠ ಜ್ಞಾನವು ಸಿದ್ದರಾಮಯ್ಯಗೆ ಇಲ್ಲ. ಕ್ರಾಂತಿಕಾರಿಗಳು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು. ಅಂದಿನ ಕಾಂಗ್ರೆಸ್ ಸ್ವಾತಂತ್ರ್ಯ ಸಂಗ್ರಾಮಕ್ಕೆ ಒಂದೇ ಸೂರಿನಡಿ ಹೋರಾಟ ಮಾಡಲು ಹುಟ್ಟಿಕೊಂಡಿತು. ಸ್ವಾತಂತ್ರ್ಯ ನಂತರ ಅದೇ ಕಾಂಗ್ರೆಸ್​ನ್ನು ಗಾಂಧಿ ಅವರು ವಿಸರ್ಜಿಸುವಂತೆ ಹೇಳಿದ್ದರು. ಅದನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದು ಯಾರು?. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಂದಿನ ಕಾಂಗ್ರೆಸ್​ಗೂ, ರಾಜಕೀಯಕ್ಕೆ ಬದಲಾಗಿರುವ ಇಂದಿನ ಕಾಂಗ್ರೆಸ್​ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: 8 ವರ್ಷಗಳಿಂದ ಭಾರತದ ಸಂಸ್ಕೃತಿ ಹಾಗೂ ಪರಂಪರೆಗಳಿಗೆ ವಿಶ್ವಮಟ್ಟದ ಗೌರವ : ಎಸ್ ಜೈಶಂಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.