ETV Bharat / state

ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫೋಟೋ ಇಟ್ಟು ವಾಮಾಚಾರ

author img

By

Published : Dec 26, 2021, 2:29 PM IST

ಕಾರಟಗಿ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಫೋಟೋ ಇಟ್ಟು ಕುಂಬಳಕಾಯಿ, ತೆಂಗಿನಕಾಯಿ, ಕುಂಕುಮ, ಅಡಿಕೆ ಎಲೆ ಹಾಕಿ ವಾಮಾಚಾರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

koppal
ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫೋಟೋ ಇಟ್ಟು ವಾಮಾಚಾರ

ಕೊಪ್ಪಳ: ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫೋಟೋ ಇಟ್ಟು ವಾಮಾಚಾರ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ. ಕಾರಟಗಿ ಪುರಸಭೆ ಚುನಾವಣೆಯ ಕಾರಣ 10ನೇ ವಾರ್ಡ್​ನ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಮೇಗೂರು ಫೋಟೋ ಇಟ್ಟು ವಾಮಾಚಾರ‌ ಮಾಡಲಾಗಿದೆ.

ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫೋಟೋ ಇಟ್ಟು ವಾಮಾಚಾರ

ಕಾರಟಗಿ ಪಟ್ಟಣದಲ್ಲಿ ಮಂಜುನಾಥ್ ಸೋಲಲಿ ಎಂದು ಯಾರೋ ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ ಎನ್ನಲಾಗ್ತಿದೆ.

ನಾಳೆ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ:

ನಾಳೆ (ಸೋಮವಾರ) ಜಿಲ್ಲೆಯಲ್ಲಿ ಐದು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ಪುರಸಭೆ, ಭಾಗ್ಯನಗರ, ಕನಕಗಿರಿ, ತಾವರಗೇರಾ ಹಾಗೂ ಕುಕನೂರು ಪಟ್ಟಣ ಪಂಚಾಯತಿಗೆ ಚುನಾವಣೆ ನಡೆಯಲಿದೆ.

ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗೆ ಸಿದ್ಧತೆ

ಈ ಐದು ನಗರ ಸ್ಥಳೀಯ ಸಂಸ್ಥೆಗಳಲ್ಲಿ 96 ವಾರ್ಡ್​ಗಳಿದ್ದು, 6 ವಾರ್ಡ್​ಗಳಲ್ಲಿ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಮತದಾನ ನಡೆಯಲಿದ್ದು, 100 ಮತಗಟ್ಟೆಗಳಲ್ಲಿ‌ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮತದಾರರ ವಿವರ:

  • 38,478- ಪುರುಷ
  • 39,176 ಮಹಿಳೆಯರು
  • 1 ಇತರೆ ಸೇರಿ,

ಒಟ್ಟು 77,655 ಮತದಾರರು ಮತ ಚಲಾಯಿಸಲಿದ್ದಾರೆ.

ಮತದಾನಕ್ಕೆ ಅಂತಿಮ ಹಂತದ ಸಿದ್ಧತೆಯಾಗಿ ಸಿಬ್ಬಂದಿ ಮತಯಂತ್ರಗಳನ್ನು ತೆಗೆದುಕೊಂಡು ಮತದಾನ ಕೇಂದ್ರಗಳಿಗೆ ತೆರಳಿದರು. ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.