ETV Bharat / state

ಕಲಬುರಗಿ ಪಾಲಿಕೆ ಸದಸ್ಯನ ಆಯ್ಕೆ ಅಸಿಂಧು: ಜಿಲ್ಲಾ ನ್ಯಾಯಾಲಯ ಆದೇಶ

author img

By

Published : Sep 15, 2022, 7:14 AM IST

Kalaburagi Corporation Member  Kalaburagi Corporation Member is not valid  elected of Kalaburagi Corporation Member  ಕಲಬುರಗಿ ಪಾಲಿಕೆ ಸದಸ್ಯನ ಆಯ್ಕೆ ಅಸಿಂಧು  ಬಿಜೆಪಿಗೆ ಮತ್ತೆ ಹಿನ್ನಡೆ  ಕಲಬುರಗಿ ಮಹಾನಗರ ಪಾಲಿಕೆ  ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶ  ಬಿಜೆಪಿ ಅಭ್ಯರ್ಥಿ ಸೂರಜ್ ತಿವಾರಿ  ಬಿಜೆಪಿ ವಿಜೇತ ಅಭ್ಯರ್ಥಿ ಪ್ರೀಯಾಂಕಾ ಅಂಬ್ರೇಶ
ಕಲಬುರಗಿ ಪಾಲಿಕೆ ಸದಸ್ಯನ ಆಯ್ಕೆ ಅಸಿಂಧು

ಬಿಜೆಪಿ ಬಂಡಾಯ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾದ ಶಂಬುಲಿಂಗ ಬಳಬಟ್ಟಿ ಚುನಾವಣೆಯ ವೇಳೆ ತಪ್ಪು ಅಫಿಡವಿಟ್ ಸಲ್ಲಿಸಿದ್ದು ಆಯ್ಕೆ ಅಸಿಂಧುವಾಗಿದೆ.

ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 36ರ ವಿಜೇತ ಅಭ್ಯರ್ಥಿಯ ಆಯ್ಕೆಯನ್ನು ಅಸಿಂಧುಗೊಳಿಸಿ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

ಬಿಜೆಪಿ ಬಂಡಾಯ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾದ ಶಂಬುಲಿಂಗ ಬಳಬಟ್ಟಿ ಚುನಾವಣೆಯ ವೇಳೆ ತಪ್ಪು ಅಫಿಡವಿಟ್ ಸಲ್ಲಿಸಿದ್ದು ಆಯ್ಕೆ ಅಸಿಂಧುವಾಗಿದೆ. ನಾಮಪತ್ರ ಸಲ್ಲಿಸುವಾಗ ಆಸ್ತಿ, ವಿದ್ಯಾರ್ಹತೆ ಸೇರಿದಂತೆ ಅನೇಕ ಮಾಹಿತಿಯನ್ನು ಇವರು ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ಸೂರಜ್ ತಿವಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಶಂಬುಲಿಂಗ ಬಳಬಟ್ಟಿ ನಂತರದ ದಿನಗಳಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಆದರೆ ಪಾಲಿಕೆ ಚುನಾವಣೆಯಲ್ಲಿ ಗೆದ್ದರೂ ಅಧಿಕಾರ ಸ್ವೀಕರಿಸಿರಲಿಲ್ಲ.

ಕಳೆದ ತಿಂಗಳಷ್ಟೇ ವಾರ್ಡ್ ಸಂಖ್ಯೆ 24 ರ ಬಿಜೆಪಿ ವಿಜೇತ ಅಭ್ಯರ್ಥಿ ಪ್ರಿಯಾಂಕಾ ಅಂಬ್ರೇಶ ಅವರು ವಯಸ್ಸಿನ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅವರ ಆಯ್ಕೆ ಅಸಿಂಧುಗೊಳಿಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿತ್ತು.

55 ಸದಸ್ಯ ಬಲ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ 27 ಕಾಂಗ್ರೆಸ್, 23 ಬಿಜೆಪಿ, 4 ಜೆಡಿಎಸ್, ಓರ್ವ ಪಕ್ಷೇತರ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಪಕ್ಷೇತರ ಅಭ್ಯರ್ಥಿಯು ನಂತರದ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾಗಿ ಬಿಜೆಪಿ ಸಂಖ್ಯೆ 24 ಕ್ಕೇರಿತ್ತು.

ಇದನ್ನೂ ಓದಿ: ಬೆಂಗಳೂರಲ್ಲಿ ವಾರ್ಡ್​ ಪುನರ್​ ರಚನೆ.. ಆಕ್ಷೇಪಣೆ ಸಲ್ಲಿಸಿದ ಕಾಂಗ್ರೆಸ್​ ನಾಯಕರಿಗೆ ಹೈಕೋರ್ಟ್ ಹೇಳಿದ್ದೇನು? ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.