ETV Bharat / state

ಸ್ನಾನಕ್ಕೆ ಹೋದಾಗ ಕುಸಿದ ಮನೆ: ಹಾವೇರಿಯ ತಡಸದಲ್ಲಿ ವೃದ್ಧೆ ನಿಧನ

author img

By

Published : Jul 29, 2022, 6:07 PM IST

House collapse news in Haveri
ಪದ್ಮಮ್ಮ ಪಾಟೀಲ ನಿಧನ

ಪದ್ಮಮ್ಮ ಪಾಟೀಲ ಎಂಬ ವೃದ್ಧೆ ಸ್ನಾನಕ್ಕೆ ಹೋದಾಗ ಅವರ ಮನೆ ಕುಸಿದು ಬಿದ್ದಿದೆ. ಪರಿಣಾಮ ಅವರು ಮೃತಪಟ್ಟಿದ್ದಾರೆ.

ಹಾವೇರಿ: ಮೊನ್ನೆ ರಾತ್ರಿ ಸುರಿದ ಮಳೆಗೆ ಮನೆ ಕುಸಿದು ಬಿದ್ದಿದ್ದು, ಪರಿಣಾಮ ಮನೆಯಲ್ಲಿದ್ದ ವೃದ್ಧೆ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತಡಸ ಗ್ರಾಮದಲ್ಲಿ ನಡೆದಿದೆ. ಪದ್ಮಮ್ಮ ಪಾಟೀಲ (67) ಮೃತ ವೃದ್ಧೆ ಎಂದು ಗುರುತಿಸಲಾಗಿದೆ. ಸ್ನಾನ ಮಾಡಲು ಹೋಗಿದ್ದ ವೇಳೆ ಮನೆ ಕುಸಿದು ಬಿದ್ದ ಪರಿಣಾಮ ವೃದ್ಧೆ ಸಾವಿಗೀಡಾಗಿದ್ದಾರೆ.

ವೃದ್ಧೆ ಸ್ನಾನಕ್ಕೆ ಹೋದಾಗ ಕುಸಿದ ಮನೆ

ವೃದ್ಧೆ ಮೇಲೆ ಮಣ್ಣು, ಮೇಲ್ಛಾವಣಿಗೆ ಹಾಕಿದ್ದ ಕಟ್ಟಿಗೆಯ ತೊಲೆ, ಕಂಬಗಳು ಬಿದ್ದಿದ್ದರಿಂದ ಸಾವು ಸಂಭವಿಸಿದೆ. ಮನೆ ಬೀಳುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಹಾವೇರಿ : ಹೆದ್ದಾರಿ ಬದಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.