ETV Bharat / state

ಮೊದಲೇ ಹೇಳಿದಂತೆ 12 ಕ್ಷೇತ್ರ ಗೆದ್ದಿದ್ದು ನೋಡಿದ್ರೆ ಇವಿಎಂ ಫ್ರಾಡ್ ನಡೆದಿರುವುದು ಪಕ್ಕಾ: ಕೋಳಿವಾಡ

author img

By

Published : Dec 23, 2019, 4:46 PM IST

kb-koliwada
ಕೆ.ಬಿ.ಕೋಳಿವಾಡ

ಬಿಜೆಪಿ ಸದ್ಯ ದೇಶದಲ್ಲಿ ಇವಿಎಂ ಫ್ರಾಡ್​ ಮೂಲಕ ಗೆಲುವು ಸಾಧಿಸುತ್ತಿದೆ ಎಂದು ಮಾಜಿ ವಿಧಾನಸಭಾ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದ್ದಾರೆ.

ರಾಣೆಬೆನ್ನೂರು: ಬಿಜೆಪಿ ಸದ್ಯ ದೇಶದಲ್ಲಿ ಇವಿಎಂ ಫ್ರಾಡ್​ ಮೂಲಕ ಗೆಲವು ಸಾಧಿಸುತ್ತಿದೆ ಎಂದು ಮಾಜಿ ವಿಧಾನಸಭಾ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದ್ದಾರೆ.

ಕೆ.ಬಿ.ಕೋಳಿವಾಡ

ರಾಣೆಬೆನ್ನೂರು ನಗರದ ಆದಿಶಕ್ತಿ ಸಭಾಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಸೋಲಿನ ಆತ್ಮವಾಲೋಕನ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಚುನಾವಣೆಯಲ್ಲಿ ಸಹ ಬಿಜೆಪಿ ಪಕ್ಷ 25 ಸ್ಥಾನ ಗೆಲ್ಲುತ್ತದೆ ಎಂದು ಹೇಳಿದ್ದರು. ಅಲ್ಲದೇ ಡಿ.5 ರಂದು ನಡೆದ ಉಪಚುನಾವಣೆಯಲ್ಲಿ ಸಹ 12 ಸ್ಥಾನ ಗೆಲ್ಲುತ್ತದೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆಂದರೆ ಇವಿಎಂ ಮಷಿನ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರ್ಥ. ರಾಣೆಬೆನ್ನೂರು ಕ್ಷೇತ್ರದಲ್ಲಿ ಸಿಎಂ, ಗೃಹಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಪೊಲೀಸ್ ವಾಹನ, ಆಂಬುಲೆನ್ಸ್ ಒಳಗೆ ಹಣ ಸಾಗಿಸಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ‌ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಬಿಜೆಪಿ ಹಿಂದೆ ಓಡಿ ಹೋದ ಅನರ್ಹರು ಹಣ ಬಲದಿಂದ ಗೆಲುವು ಸಾಧಿಸಿದ್ದಾರೆ. ಆದರೆ ಅವರು ಮುಂದಿನ ಚುನಾವಣೆಯಲ್ಲಿ ಯಾವ ಆಧಾರದ ಮೇಲೆ ಗೆಲುವು ಸಾಧಿಸುತ್ತಾರೆ ಎಂಬುದನ್ನು ಕಾದುನೋಡಬೇಕು. ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬಾರದು ಎಂದರು.

Intro:Kn_rnr_02_k_b_koliwad_meeting_leaders_kac10001.

ಇವಿಎಂ ಮೆಷಿನ್ ಹಾಗೂ ಹಣದ ಮೇಲೆ ಬಿಜೆಪಿ ಗೆದ್ದಿತು ಮಾಜಿ ಶಾಸಕ ಕೆ.ಬಿ.ಕೋಳಿವಾಡ.

ರಾಣೆಬೆನ್ನೂರ: ಬಿಜೆಪಿ ಸದ್ಯ ದೇಶದಲ್ಲಿ ಇವಿಎಂ ವಂಚಿಸುವ ಮೂಲಕ ಗೆಲವು ಸಾಧಿಸುತ್ತಿದೆ ಎಂದು ವಿಧಾನಸಭಾ ಮಾಜಿ ಕೆ.ಬಿ.ಕೋಳಿವಾಡರು ಹೇಳಿದರು.

ರಾಣೆಬೆನ್ನೂರ ನಗರದ ಆದಿಶಕ್ತಿ ಸಭಾಭವನದಲ್ಲಿ ಆಯೋಜಿಸಿದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಸೋಲಿನ ಆತ್ಮವಲೋಕನ ಉದ್ದೇಶಿಸಿದ ಮಾತನಾಡಿದರು.

Body:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಚುನಾವಣೆಯಲ್ಲಿ ಸಹ ಬಿಜೆಪಿ ಪಕ್ಷ 25 ಸ್ಥಾನ ಗೆಲ್ಲುತ್ತದೆ ಎಂದು ಹೇಳಿದರು. ಡಿ.5 ರಂದು ನಡೆದ ಉಪಚುನಾವಣೆಯಲ್ಲಿ ಸಹ 12 ಸ್ಥಾನ ಗೆಲ್ಲುತ್ತದೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರಂದರೆ ಅವರು ಇವಿಎಂ ಮೆಷಿನ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ರಾಣೆಬೆನ್ನೂರ ಕ್ಷೇತ್ರದಲ್ಲಿ ಸಿಎಂ, ಗೃಹಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಪೋಲಿಸ ವಾಹನ, ಅಂಬುಲೆನ್ಸ್ ಒಳಗೆ ಹಣ ಸಾಗಿಸಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ‌ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಬಿಜೆಪಿ ಹಿಂದೆ ಓಡಿ ಹೋದ ಅನರ್ಹರ ಹಣದ ಮೇಲೆ ಗೆಲವು ಸಾಧಿಸಿದ್ದಾರೆ. ಆದರೆ ಅವರು ಮುಂದಿನ ಚುನಾವಣೆಯಲ್ಲಿ ಯಾವ ಆಧಾರದ ಮೇಲೆ ಗೆಲವು ಸಾಧಿಸುತ್ತಾರೆ ಎಂಬದು ಕಾದುನೋಡಬೇಕು.
ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬಾರದು, ಕ್ಷೇತ್ರದಲ್ಲಿ ನಾ ಜತೆಯಾಗಿ ನಿಂತು ನಿಮ್ಮ ಕಷ್ಟ, ಸುಖ, ದುಃಖಕ್ಕೆ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ ಎಂದು ಭರವಸೆ ನೀಡುತ್ತೆನೆ ಎಂದರು.


Conclusion:ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ, ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಕೆಪಿಸಿಸಿ ಸದಸ್ಯ ಪ್ರಕಾಶ ಕೋಳಿವಾಡ, ರುಕ್ಮಿಣಿ ಸಾಹುಕಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿ.ಎಸ್.ಹಿರೇಮಠ, ಕೃಷ್ಣಪ್ಪ ಕಂಬಳಿ, ಮಂಜನಗೌಡ ಪಾಟೀಲ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.