ETV Bharat / state

ಕಸಾಯಿಖಾನೆಗೆ ಸಾಗಿಸುತ್ತಿದ್ದ 30 ಆಕಳು ಕರುಗಳ ರಕ್ಷಣೆ

author img

By

Published : Mar 14, 2020, 11:22 PM IST

protection-of-30-calves
30 ಆಕಳು ಕರುಗಳನ್ನು ರಕ್ಷಣೆ

ಟೊಯೊಟಾ ಕ್ವಾಲಿಸ್ ವಾಹನದ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 30 ಆಕಳು ಕರುಗಳನ್ನು ರಕ್ಷಿಸುವಲ್ಲಿ ಯುವ ಬ್ರಿಗೇಡ್, ಬಿಜೆಪಿ, ಆರ್​ಎಸ್​ಸ್​ ಕಾರ್ಯಕರ್ತರು ರಕ್ಷಿಸಿದ್ದಾರೆ.

ಹಾಸನ : ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 30 ಹಸುವಿನ ಕರುಗಳನ್ನು ರಕ್ಷಿಸಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಬೆಲಸಿಂದ ಗ್ರಾಮದ ಬಳಿ ನಡೆದಿದೆ.

ಟೊಯೊಟಾ ಕ್ವಾಲಿಸ್ ವಾಹನದ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 30 ಕರುಗಳನ್ನು ರಕ್ಷಿಸುವಲ್ಲಿ ಯುವ ಬ್ರಿಗೇಡ್, ಬಿಜೆಪಿ, ಆರ್​ಎಸ್​ ಎಸ್ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ.

ಚನ್ನರಾಯಪಟ್ಟಣದಲ್ಲಿ ಸಂತೆ ನಡೆಯುವ ಕಾರಣ ಹಿಂದಿನ ದಿನವೇ ಸಂತೆಗೆ ಬಂದ ಹೋರಿ ಕರುಗಳನ್ನು ಖರೀದಿಸಿ ಬಾಗೂರು ರಸ್ತೆಯ ಮಾರ್ಗವಾಗಿ ಬೆಂಗಳೂರಿನ ಕಡೆಗೆ ಸಾಗಿಸಲು ಯತ್ನಿಸುತ್ತಿದ್ದ ಕುಣಿಗಲ್ ಮೂಲದ ಕಲಂಧರ್​ ಎಂಬಾತನನ್ನು ರಸ್ತೆಯಲ್ಲಿಯೇ ಅಡ್ಡಗಟ್ಟಿ ಸಾಗಿಸುತ್ತಿದ್ದ ಎಲ್ಲಾ ಕರುಗಳನ್ನು ರಕ್ಷಿಸಿದ್ದಾರೆ.

30 ಆಕಳು ಕರುಗಳನ್ನು ರಕ್ಷಣೆ

ಈ ಸಂಬಂಧ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲಾ ಕರುಗಳನ್ನು ಮೈಸೂರಿನ ಪಿಂಜರ್ ಪೋಲ್ ಎಂಬ ಗೋರಕ್ಷಣಾ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.