ETV Bharat / state

ಹಾಸನದಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ: ಗುಂಡಿಕ್ಕಿ ಯುವಕನ ಹತ್ಯೆ!

author img

By

Published : Aug 28, 2020, 7:01 AM IST

Updated : Aug 28, 2020, 9:54 AM IST

ಕೆರೆ ಏರಿಯ ಮೇಲೆ ದುಷ್ಕರ್ಮಿಗಳು ಶೂಟೌಟ್ ಮಾಡಿ ಯುವಕನೊಬ್ಬನನ್ನು ಕೊಂದಿದ್ದಾರೆ. ಬದುಕಿನ ಶಬ್ದ ಬಂದ ಹಿನ್ನೆಲೆಯಲ್ಲಿ ಗಣಪತಿ ಮೂರ್ತಿ ನಿಮಜ್ಜನ ಮಾಡುತ್ತಿರಬಹುದು ಎಂದು ಹಳ್ಳಿಯವರು ಸುಮ್ಮನಾಗಿದ್ದರು. ಆದರೆ, ಚನ್ನರಾಯಪಟ್ಟಣಕ್ಕೆ ಹೋಗಿದ್ದ ಗ್ರಾಮಸ್ಥರು ವಾಪಸ್ ಸ್ವಗ್ರಾಮ ಬೇಡಿಗನಹಳ್ಳಿಗೆ ಬರುವಾಗ ಕೆರೆ ಏರಿಯ ಮೇಲೆ ಕೊಲೆಯಾಗಿರುವ ಯುವಕನನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಯುವಕನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು
ಯುವಕನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಹಾಸನ: ನಗರದಲ್ಲಿ ದಿನದಿಂದ ದಿನಕ್ಕೆ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿನ್ನೆ ರಾತ್ರಿ ಕೂಡ ಯುವಕನೋರ್ವನ ಕೊಲೆಯಾಗಿದೆ. ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ಪುನೀತ್ (28) ಕೊಲೆಯಾದ ಯುವಕ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಕೆರೆ ಏರಿಯ ಮೇಲೆ ದುಷ್ಕರ್ಮಿಗಳು ಶೂಟೌಟ್ ಮಾಡಿ ಕೊಂದಿದ್ದಾರೆ. ಬದುಕಿನ ಶಬ್ದ ಬಂದ ಹಿನ್ನೆಲೆಯಲ್ಲಿ ಗಣಪತಿ ಮೂರ್ತಿ ನಿಮಜ್ಜನ ಮಾಡುತ್ತಿರಬಹುದು ಎಂದು ಹಳ್ಳಿಯವರು ಸುಮ್ಮನಾಗಿದ್ದರು. ಆದರೆ, ಚನ್ನರಾಯಪಟ್ಟಣಕ್ಕೆ ಹೋಗಿದ್ದ ಗ್ರಾಮಸ್ಥರು ವಾಪಸ್ ಸ್ವಗ್ರಾಮ ಬೇಡಿಗನಹಳ್ಳಿಗೆ ಬರುವಾಗ ಕೆರೆ ಏರಿಯ ಮೇಲೆ ಕೊಲೆಯಾಗಿರುವ ಯುವಕನನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಅಲ್ಲಿಂದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಕುಟುಂಬ ಕಲಹ ಎನ್ನಲಾಗಿದ್ದು, ಕುಟುಂಬದಲ್ಲಿಯೇ ಪುನೀತನನ್ನ ಕಂಡರೆ ಒಂದಿಬ್ಬರಿಗೆ ಆಗುತ್ತಿರಲಿಲ್ಲ ಎಂಬ ಅನುಮಾನವನ್ನು ಅದೇ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಪೊಲೀಸರು ಈಗ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಯುವಕನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು
ಯುವಕನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಕೊಲೆಯಾದ ಯುವಕ ಗೌಡಗೆರೆ ಸಮೀಪದ ಹೊಸೂರು ಗ್ರಾಮದವನು. ಅಜ್ಜಿಯ ಮನೆಗೆ ಹಬ್ಬಕ್ಕೆಂದು ಬಂದಿದ್ದ ಎನ್ನಲಾಗಿದೆ. ಅಜ್ಜಿ ಮನೆಯಲ್ಲಿ ಊಟ ಮುಗಿಸಿ ವಾಪಸ್ ಹೊಸೂರಿಗೆ ಹೋಗಬೇಕಾದರೆ ಬೇಡಿಗನಹಳ್ಳಿಯ ಕೆರೆ ಏರಿಯ ಮೇಲೆ ಶೂಟ್ ಮಾಡಿ ಕೊಲೆ ಮಾಡಲಾಗಿದೆ.

ಗುಂಡಿಕ್ಕಿ ಯುವಕನ ಹತ್ಯೆ

ಪಾರಿವಾಳದ ವಿಚಾರ ಮತ್ತು ಕುಡಿದ ಅಮಲಿನಲ್ಲಿ ಇಬ್ಬರು ಯುವಕರ ಕೊಲೆ ಪ್ರಕರಣ ಮಾಸುವ ಮುನ್ನವೇ ಪೊಲೀಸ್ ಠಾಣೆಯ ಪಿಎಸ್ಐ ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲಿಯೇ ಹಾಸನ ಮತ್ತು ಬೇಲೂರಿನಲ್ಲಿ 3 ಕೊಲೆ ಪ್ರಕರಣಗಳು ದಾಖಲಾಗಿದ್ದವು. ಅದರ ಬೆನ್ನಲ್ಲೇ ಚನ್ನರಾಯಪಟ್ಟಣದಲ್ಲಿ ಈಗ ಮತ್ತೊಂದು ಕೊಲೆ ಸಂಭವಿಸಿದೆ. ಮತ್ತೊಂದು ಕೊಲೆ ಪ್ರಕರಣ ದಾಖಲಾಗುವ ಮೂಲಕ ಜಿಲ್ಲೆಯ ಜನರು ಭಯ ಬೀಳುವಂತಾಗಿದೆ.

Last Updated :Aug 28, 2020, 9:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.