ರಾಯಚೂರು : ಎಲೆಕ್ಟ್ರಿಕ್ ಬೈಕ್ ಶಾಪ್ಗೆ ಬೆಂಕಿ, ಮೂರಂತಸ್ತಿನ ಕಟ್ಟಡ ಧಗ ಧಗ - fire broke out in bike shop
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg?imwidth=128)
Published : May 27, 2024, 3:40 PM IST
![ETV Thumbnail thumbnail](https://etvbharatimages.akamaized.net/etvbharat/prod-images/27-05-2024/640-480-21570098-thumbnail-16x9-sanjuuu.jpg)
ರಾಯಚೂರು : ನಗರದ ಮಹಾವೀರ ವೃತ್ತದ ಬಳಿ ಇರುವ ಎಲೆಕ್ಟ್ರಿಕ್ ಬೈಕ್ ಶಾಪ್ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇದರಿಂದಾಗಿ ಮೂರು ಅಂತಸ್ತಿನ ಕಟ್ಟಡ ಸುಟ್ಟುಕರಲಾಗಿದೆ. ಆರ್. ಕೆ ಭಂಡಾರಿ ಎನ್ನುವರಿಗೆ ಸೇರಿದ ಬೈಕ್ ಶಾಪ್ ಇದಾಗಿದೆ.
ಮಧ್ಯಾಹ್ನದ ವೇಳೆ ಎಲೆಕ್ಟ್ರಿಕ್ ಬೈಕ್ ಶಾಪ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಏಕಾಏಕಿ ಇಡೀ ಬಿಲ್ಡಿಂಗ್ಗೆ ಬೆಂಕಿ ಆವರಿಸಿಕೊಂಡಿದೆ. ನಂತರ ಕಟ್ಟಡ ಸಂಪೂರ್ಣವಾಗಿ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ.
ವಿಷಯ ತಿಳಿದು ಸ್ಥಳಕ್ಕೆ 2 ಅಗ್ನಿಶಾಮಕ ವಾಹನಗಳಲ್ಲಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಹರಸಾಹಸಪಟ್ಟು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಈ ಅವಘಡದ ವೇಳೆ ಶಾಪ್ನಲ್ಲಿ ಕೆಲಸ ಮಾಡುವವರು ಇದ್ದರು. ಆದರೆ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಭಾರಿ ಪ್ರಮಾಣದ ಬೆಂಕಿ ಅನಾಹುತ ಸಂಭವಿಸಿದ್ದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿತ್ತು. ಅಲ್ಲದೇ ಹೊರಗಡೆ ನಿಲ್ಲಿಸಿದ ಬೈಕ್ ಸಹ ಬೆಂಕಿಗೆ ಆಹುತಿಯಾಗಿರುವ ದೃಶ್ಯ ಕಂಡು ಬಂದಿದೆ. ಸದರ್ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬೆಂಕಿ ಅವಘಡದ ಕುರಿತು ಪೊಲೀಸ್ ತನಿಖೆಯ ನಂತರ ನಿಖರ ಮಾಹಿತಿ ದೊರೆಯಲಿದೆ.
ಇದನ್ನೂ ಓದಿ : ಬೀದರ್ : ಜೆಸ್ಕಾಂ ಕಚೇರಿಯಲ್ಲಿ ಏಕಾಏಕಿ ಬೆಂಕಿ ಅವಘಡ, ಲಕ್ಷಾಂತರ ಮೌಲ್ಯದ ಟಿಸಿ ಸುಟ್ಟುಭಸ್ಮ - FIRE BROKE OUT IN GESCOM