ETV Bharat / state

ಸಿಬಿಐ ತನಿಖೆಯಾದ್ರೂ ಕೆ ಜೆ ಜಾರ್ಜ್ ಬಂಧಿಸಿರಲಿಲ್ಲ: ಈಶ್ವರಪ್ಪ ಬಂಧನ ಬಗ್ಗೆ ತನಿಖಾಧಿಕಾರಿಗಳ ತೀರ್ಮಾನವೆಂದ ಸಿಎಂ

author img

By

Published : Apr 15, 2022, 12:46 PM IST

ಈಶ್ವರಪ್ಪ ಬಂಧನ ತನಿಖಾಧಿಕಾರಿಗಳಿಂದ ತೀರ್ಮಾನ ಎಂದ ಸಿಎಂ ಬೊಮ್ಮಾಯಿ
ಈಶ್ವರಪ್ಪ ಬಂಧನ ತನಿಖಾಧಿಕಾರಿಗಳಿಂದ ತೀರ್ಮಾನ ಎಂದ ಸಿಎಂ ಬೊಮ್ಮಾಯಿ

ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈಶ್ವರಪ್ಪ ಸಚಿವ ಸ್ಥಾನಕ್ಕೆ ಎರಡು ದಿನನಗಳ ಹಿಂದೆಯೇ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದರು. ಆದರೆ, ನನ್ನಿಂದ ಪಕ್ಷಕ್ಕೆ ಇರಿಸುಮುರಿಸು ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ಕೊಟ್ಟಿರಲಿಲ್ಲ. ಈಗ ನೈತಿ ಹೊಣೆ ಹೊತ್ತು ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ ಎಂದು ಸಿಎಂ ಹೇಳಿದರು..

ಗದಗ: ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸುವುದು, ಬಿಡುವುದು ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ತೀರ್ಮಾನಿಸುತ್ತಾರೆ ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ ಮತಕ್ಷೇತ್ರಕ್ಕೆ 1,306.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ ಜೆ ಜಾರ್ಜ್ ಅವರನ್ನು ಬಂಧಿಸಲಿಲ್ಲ.

ಪೊಲೀಸ್ ತನಿಖೆ ವೇಳೆಯೂ ಬಂಧನವಾಗಿರಲಿಲ್ಲ. ಸಿಬಿಐಗೆ ಹಸ್ತಾಂತರವಾಗಿ ತನಿಖೆ ಮಾಡಿದರೂ ಜಾರ್ಜ್​ರನ್ನು ಬಂಧಿಸಿರಲಿಲ್ಲ. ಅಂದು ತಮ್ಮ ಮಂತ್ರಿಗಳನ್ನೇ ಬಂಧಿಸದಿರುವ ಕಾಂಗ್ರೆಸ್‌ನವರಿಗೆ ಈಶ್ವರಪ್ಪ ಅವರನ್ನು ಬಂಧಿಸುವಂತೆ ಆಗ್ರಹಿಸುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಸಚಿವ ಈಶ್ವರಪ್ಪ ಬಂಧನ ತನಿಖಾಧಿಕಾರಿಗಳಿಂದ ತೀರ್ಮಾನ ಎಂದು ಸಿಎಂ ಬೊಮ್ಮಾಯಿ ಹೇಳಿರುವುದು..

ನೈತಿಕ ಹೊಣೆ ಹೊತ್ತು ರಾಜೀನಾಮೆ : ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈಶ್ವರಪ್ಪ ಸಚಿವ ಸ್ಥಾನಕ್ಕೆ ಎರಡು ದಿನನಗಳ ಹಿಂದೆಯೇ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದರು. ಆದರೆ, ನನ್ನಿಂದ ಪಕ್ಷಕ್ಕೆ ಇರಿಸುಮುರಿಸು ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ಕೊಟ್ಟಿರಲಿಲ್ಲ. ಈಗ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ. ಹಾಗಾಗಿ, ಪ್ರಕರಣದ ಸಂಪೂರ್ಣ ತನಿಖೆ ಆಗುವವರೆಗೂ ಸುಮ್ಮನಿದ್ದು, ಸಹಕರಿಸಬೇಕು. ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ. ಅಲ್ಲದೆ, ಕಾಂಗ್ರೆಸ್​ನವರ ಆರೋಪ ಆಧಾರ ರಹಿತವಾಗಿದೆ ಎಂದು ಸಿಎಂ ಹೇಳಿದರು.

ಇತ್ತೀಚಿಗೆ ಕೆಡಿಪಿ ಸಭೆಯಲ್ಲಿ ಸಚಿವ ಬಿ.ಸಿ.ಪಾಟೀಲ್​ ಹಾಗೂ ಶಾಸಕ ಕಳಕಪ್ಪ‌ ಬಂಡಿ ಮಾತಿನ ಚಕಮಕಿಯ ಕುರಿತು ಪ್ರತಿಕ್ರಿಯಿಸಿದ ಸಿಎಂ, ಜನರ ಒಳ್ಳೆಯದಕ್ಕೆ ಹಲವಾರು ಚರ್ಚೆಗಳು ಆಗುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ನೈಜ ಚರ್ಚೆ ಸಹಜ ಎಂದು ಅಭಿಪ್ರಾಯಪಟ್ಟರು. ಈ ವೇಳೆ ಸಚಿವರಾದ ಬಿ.ಸಿ.ಪಾಟೀಲ್, ಸಿ.ಸಿ.ಪಾಟೀಲ, ಶಾಸಕ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ ಇದ್ದರು.

ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಯನ್ನು ಒಲ್ಲದ ಮನಸ್ದಿನಿಂದ ಪಕ್ಷ ಸ್ವೀಕರಿಸುತ್ತಿದೆ : ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.