ETV Bharat / state

ಹುಬ್ಬಳ್ಳಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗೌನ್ ಗದ್ದಲ: ಅನಿಷ್ಟಾವಧಿವರೆಗೆ ಸಭೆ ಮುಂದೂಡಿಕೆ

author img

By

Published : Sep 30, 2022, 4:12 PM IST

ಹುಬ್ಬಳ್ಳಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗೌನ್ ಗದ್ದಲ
ಹುಬ್ಬಳ್ಳಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗೌನ್ ಗದ್ದಲ

ಇಂದು ಹುಬ್ಬಳ್ಳಿ ಪಾಲಿಕೆ ಸಭಾ ಭವನದಲ್ಲಿ ಹು - ಧಾ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಎಐಎಎಂಐ ಪಕ್ಷದ ಕಾರ್ಯಕರ್ತರು, ಮೇಯರ್ ಈರೇಶ ಅಂಚಟಗೇರಿ ಅವರು ಗೌನು ತ್ಯಜಿಸಿ ರಾಷ್ಟ್ರಪತಿಗಳನ್ನು ಸ್ವಾಗತಿಸಿದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೇಯರ್ ಗೌನು ವಿಚಾರ ದೊಡ್ಡ ಕೋಲಾಹಲಕ್ಕೆ ಕಾರಣವಾಗಿ ಸಾಮಾನ್ಯ ಸಭೆ ಅನಿರ್ದಿಷ್ಟಾವಧಿಗೆ ಮುಂದೂಡಿದ ಪ್ರಸಂಗಕ್ಕೆ ಕಾರಣವಾಯಿತು.

ಹೌದು, ಇಂದು ಹುಬ್ಬಳ್ಳಿ ಪಾಲಿಕೆ ಸಭಾ ಭವನದಲ್ಲಿ ಹು-ಧಾ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಎಐಎಎಂಐ ಪಕ್ಷದ ಕಾರ್ಯಕರ್ತರು, ಮೇಯರ್ ಈರೇಶ ಅಂಚಟಗೇರಿ ಅವರು ಗೌನು ತ್ಯಜಿಸಿ ರಾಷ್ಟ್ರಪತಿಗಳನ್ನು ಸ್ವಾಗತಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಪಾಲಿಕೆಯಲ್ಲಿ ಮೇಯರ್ ಸ್ಥಾನಕ್ಕೆ ತನ್ನದೇ ಆದ ಘನತೆ ಗೌರವವಿದೆ. ಹಿಂದಿನಿಂದಲೂ ಮೇಯರ್ ಗೌನು ಧರಿಸದೇ ವಿಶೇಷ ಕಾರ್ಯಕ್ರಮ ನಡೆಸಿಕೊಡುವುದು ವಾಡಿಕೆ. ಆದರೆ, ಹುಬ್ಬಳ್ಳಿಗೆ ರಾಷ್ಟ್ರಪತಿ ಆಗಮಿಸಿದಾಗ ಗೌನು ಧರಿಸುವ ಪದ್ದತಿಗೆ ತಿಲಾಂಜಲಿ ಹಾಡಿ ಸನ್ಮಾನಿಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಹಾಗೂ ಎಐಎಂಐಎಂ ಪಾಲಿಕೆ ಸದಸ್ಯರು ಸಾಮಾನ್ಯ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಹೀಗಾಗಿ, ಸಭೆ ಕೆಲಕಾಲ ಗದ್ದಲ ಗಲಾಟೆಗೆ ಕಾರಣವಾಯಿತು. ಅಲ್ಲದೇ ಕಾಂಗ್ರೆಸ್ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಮೇಯರ್ ಘಂಟೆಯನ್ನು ಕಿತ್ತು ಮೇಯರ್​ಗೆ ಇರಿಸು ಮುರಿಸು ತಂದರು. ಹೀಗಾಗಿ ಅವರನ್ನು ಸಭೆಯಿಂದ ಬಹಿಷ್ಕರಿಸಲು ಪಾಲಿಕೆ ಬಿಜೆಪಿ ಸದಸ್ಯರು ಆಗ್ರಹಿಸಿದರು. ಹೀಗಾಗಿ ಪಾಲಿಕೆ ಸಾಮಾನ್ಯ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಮಾತನಾಡಿ, ಮಹಾಪೌರರು ಗೌನ‌ಧರಿಸದೇ ಅಗೌರವ ತೋರಿದ್ದಾರೆ. ಗೌನಿಗೆ ತನ್ನದೇ ಆದ ಮರ್ಯಾದೆ ಇದೆ. ಇದನ್ನು ಪ್ರಶ್ನಿಸಿದರೆ ಸಾಮಾನ್ಯ ಸಭೆ ರದ್ದು ಮಾಡಿದ್ದಾರೆ. ಸಾಮಾನ್ಯ ಸಭೆ ತಕ್ಷಣ ಆರಂಭಿಸಬೇಕು. ಸಾರ್ವಜನಿಕರ ನೂರಾರು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಕಾರ್ಯ ಮಾಡಬೇಕಾಗಿದೆ ಎಂದು ಆಗ್ರಹಿಸಿದರು.

ಮತ್ತೋರ್ವ ಪಾಲಿಕೆ ಸದಸ್ಯ ಇಮ್ರಾನ ಯಲಿಗಾರ, ಈ ಬಾರಿಯ ಸಮಾನ್ಯ ಸಭೆಯಲ್ಲಿ 25 ವಿಷಯಗಳು ಸಭೆಯಲ್ಲಿ ಪ್ರಸ್ತಾವನೆ ಮಾಡಬೇಕಾಗಿತ್ತು. ಆದರೆ, ರಾಷ್ಟ್ರಪತಿ ಬಂದಾಗ ಏಕಾಏಕಿ ಸನ್ಮಾನ ಅರಂಭ ಮಾಡಿದ್ದಾರೆ. ಅಲ್ಲದೇ ಕಾರ್ಯಕ್ರಮಕ್ಕೆ 1.38 ಕೋಟಿ ರೂ ಹಣ ದುಂದು ವೆಚ್ಚ ಮಾಡಿದ್ದಾರೆ. ವಿರೋಧ ಪಕ್ಷದ ಸದಸ್ಯರು ಸಾಮಾನ್ಯ ಸಭೆ ಕರಿಯದೇ ಎಲ್ಲ ನಿರ್ಧಾರ ಅವರೇ ಮಾಡಿದ್ದಾರೆ. ಗೌನು ಧರಿಸದೇ ಬಂದು ಅವಮಾನ ಮಾಡಿದ್ದಾರೆ. ಗೌನ ಧರಿಸಿ ಬಂದರೆ ಮಾತ್ರ ಸಾಮಾನ್ಯ ಸಭೆಗೆ ಅವಕಾಶ ನೀಡುತ್ತೇವೆ ಎಂದು ಪಟ್ಟು ಹಿಡಿದರು.

ಗೌನ್ ಧರಿಸದೇ ರಾಷ್ಟ್ರಪತಿಗೆ ಸ್ವಾಗತಿಸಿ ಅಪಮಾನ: ಎಐಎಂಐಎಂ ಪಕ್ಷದ ನಜೀರ್​ ಅಹ್ಮದ್​ ಹೊನ್ನಾಳ ಮಾತನಾಡಿ, ಭಾರತದ ದೇಶ ನೀತಿಯನ್ನು ಮೇಯರ್ ಅವರು ವಿರೋಧಿಸಿದ್ದಾರೆ. ಆದರಿಂದ ಎಐಎಂಐಎ ಪಕ್ಷದಿಂದ ವಿರೋಧವಿದೆ. ಅಬ್ದುಲ್ ಕಲಾಂ ಬಂದಾಗ ಪ್ರಕಾಶ ಕ್ಯಾರಕಟ್ಟಿ ಅವರು ಗೌನು ಹಾಕಿಕೊಂಡು ಸ್ವಾಗತಿಸಿದ್ದರು. ಆದರೆ, ಮೇಯರ್ ಈರೇಶ ಅಂಚಟಗೇರಿ ಅವರು ಗೌನ್ ಧರಿಸದೇ ರಾಷ್ಟ್ರಪತಿಗೆ ಸ್ವಾಗತಿಸಿ ಅಪಮಾನ ಮಾಡಿದ್ದಾರೆ ಎಂದು ದೂರಿದರು.

ಮೇಯರ್ ಸಭೆಗೆ ಸಬೂಬು: ಮೇಯರ್ ಸಭೆಯಲ್ಲಿ ಚರ್ಚೆ ಮಾಡುವ ಪ್ರಶ್ನೆ ಬೇಡ. ಮುಖ್ಯಮಂತ್ರಿ ಹಾಕಿಕೊಂಡು ಬರಬಾರದು ಎಂದು ಮೇಯರ್ ಸಭೆಗೆ ಸಬೂಬು ನೀಡಿದರು. ಒಟ್ಟಿನಲ್ಲಿ ಮಹಾನಗರ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಗೌನ್ ಗಲಾಟೆಯಲ್ಲೇ​ ಮುಗಿದು ಹೋಯಿತು. ನಗರದ ಪ್ರಮುಖ ಸಮಸ್ಯೆಗಳಾದ ರಸ್ತೆ, ಒಳಚರಂಡಿ, ಕುಡಿಯುವ ನೀರಿನ ಬಗ್ಗೆ ಗಂಭೀರ ಚರ್ಚೆ ನಡೆಸಬೇಕಿದ್ದವರೇ ಸಭೆಯಲ್ಲಿ ಕಿತ್ತಾಡಿಕೊಂಡರು. ಈ ಮೂಲಕ ಸಾಮಾನ್ಯ ಸಭೆಯ ಘಟನೆಗೆ ಧಕ್ಕೆ ತಂದಿದ್ದಾರೆ.

ಓದಿ: ಅತ್ತಿಬೆಲೆ ಆರ್​ಟಿಒ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.