ETV Bharat / state

ಅಕಾಲಿಕ ಮಳೆ ತಂದ ಸಂಕಷ್ಟ: ರೈತರಿಗೆ ಹುಳಿಯಾದ ಮಾವು

author img

By

Published : Jan 11, 2021, 11:58 AM IST

Updated : Jan 11, 2021, 12:33 PM IST

Premature rain destroys the mango crop in Darwada
ರೈತರಿಗೆ ಹುಳಿಯಾದ ಮಾವು ಬೆಳೆ

ಕಳೆದ ವರ್ಷ ಉತ್ತಮ ಮಳೆಯಾಗಿ ಉತ್ತಮ ಇಳುವರಿ ಬಂದಿದ್ರೂ, ಕೊರೊನಾ ಮಹಾಮಾರಿ ವೈರಸ್ ನಿಂದ ಮಾರುಕಟ್ಟೆ ಸಿಗದೇ ಕಂಗಾಲಾಗಿದ್ದ ಬೆಳೆಗಾಗಾರರು ಈ ವರ್ಷ ಅಕಾಲಿಕ ಮಳೆಯಿಂದ ತೊಂದ್ರೆ ಅನುಭವಿಸಬೇಕಾಗಿದೆ.

ಧಾರವಾಡ : ಕಳೆದ ವರ್ಷ ಕೊರೊನಾ, ಈ ವರ್ಷ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ವರ್ಷ ಒಂದಿಲ್ಲೊಂದು ಸಮಸ್ಯೆ ಎದುರಿಸುವ ಮಾವು ಬೆಳೆಗಾರರು ಪ್ರಸ್ತುತ ವರ್ಷದಲ್ಲಿ ಬದಲಾದ ವಾತಾವರಣ ಆತಂಕಕ್ಕೀಡು ಮಾಡಿದೆ.

ಕಳೆದ ಹಲವಾರು ವರ್ಷದಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಮಾವು ಬೆಳೆಗಾಗಾರರು ಇದೀಗ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಹೌದು ನಗರದ ಕೆಲಗೇರಿ ಬಳಿಯಿರುವ ಮಾವಿನ ತೋಟದಲ್ಲಿ ಎಲ್ಲಿ ನೋಡಿದ್ರೂ ಮಾವಿನ ಮರದಲ್ಲಿ ಹೂವು ಕಾಣಿಸುತ್ತವೆ. ಆದ್ರೆ ಅವು ಮರದಿಂದ ಉದುರುತ್ತಿರುವುದು ಬೆಳೆಗಾರರನ್ನು ಸಂಕಷ್ಟಕ್ಕೆ ನೂಕಿದೆ.

ರೈತರಿಗೆ ಹುಳಿಯಾದ ಮಾವು ಬೆಳೆ

ಮಾವಿನ ಮರಗಳಲ್ಲಿನ ಹೂವು ನೋಡಿದ್ರೆ ಸಂತೋಷ ಪಡುತ್ತಿದ್ದ ಮಾವು ಬೆಳೆಗಾರರು ಅವು ಉದುರುವುದನ್ನು ಕಂಡು ಚಿಂತೆಗೀಡಾಗುವಂತೆ ಮಾಡಿದೆ. ಈ ದಿನಗಳಲ್ಲಿ ಮಾವು ಹೂಬಿಟ್ಟು ಕಾಯಿಕಟ್ಟುವ ದಿನಗಳು ಆದ್ರೆ ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಹೂವು ಉದುರಿ ಬೆಳೆಗಾರರ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ.

ಕಳೆದ ವರ್ಷ ಉತ್ತಮ ಮಳೆಯಾಗಿ ಒಳ್ಳೆಯ ಇಳುವರಿ ಬಂದಿದ್ದರೂ, ಕೊರೊನಾ ಮಹಾಮಾರಿ ವೈರಸ್ ನಿಂದ ಮಾರುಕಟ್ಟೆ ಸಿಗದೇ ಕಂಗಾಲಾಗಿದ್ದ ಬೆಳೆಗಾಗಾರರು ಈ ವರ್ಷ ಅಕಾಲಿಕ ಮಳೆಯಿಂದ ತೊಂದರೆ ಅನುಭವಿಸಬೇಕಾಗಿದೆ. ಜಿಲ್ಲೆಯಲ್ಲಿ ಬೆಳೆಯುತ್ತಿದ್ದ ಮಾವು ವಿದೇಶಗಳಿಗೆ ರಫ್ತಾಗುತ್ತಿತ್ತು. ಇದೀಗ ಶೇ 60 ರಷ್ಟು ಹೂವು ಉದುರಿ ಹೋಗಿದೆ. ಇನ್ನು ಉದುರದೇ ಹಾಗೇ ಉಳಿದಿರುವ ಹೂವು ಕೂಡಾ ಕಾಯಿ ಕಟ್ಟುವುದು ಸಾಧ್ಯತೆ ಕಡಿಮೆ ಇದರಿಂದ ರೈತರು ಕಂಗಾಲಾಗಿದ್ದಾರೆ.

ಓದಿ : ಹಾಸನದಲ್ಲಿ ಅಕಾಲಿಕ ಮಳೆ: ಕಾಫಿ, ಕರಿಮೆಣಸು, ಭತ್ತದ ಫಸಲಿಗೆ ಹಾನಿ

ಒಟ್ಟಿನಲ್ಲಿ ಪ್ರತಿ ವರ್ಷ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿರುವ ಮಾವು ಬೆಳೆಗಾರರು ಈ ವರ್ಷ ಕೂಡಾ ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಖರ್ಚು ಮಾಡಿ ಗೊಬ್ಬರ, ಕ್ರಿಮಿನಾಶಕ ನೀರು ಅಂತಾ ರೈತರು ಖರ್ಚು ಮಾಡಿರುವ ಹಣ ಸಹಿತ ಅವರಿಗೆ ಸಿಗುವುದು ಅನುಮಾನವಾಗಿದೆ.

Last Updated :Jan 11, 2021, 12:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.