ETV Bharat / state

NWKRTC: ಸಿಬ್ಬಂದಿ ವೇತನಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದ ವಾಯವ್ಯ ಸಾರಿಗೆ ನಿಗಮ.. ಜುಲೈ ತಿಂಗಳ ಸ್ಯಾಲರಿ ಪಾವತಿಗೆ ಬೇಕು ₹ 65 ಕೋಟಿ

author img

By

Published : Aug 1, 2023, 4:02 PM IST

Updated : Aug 1, 2023, 4:49 PM IST

nwkrtc
ವಾಯವ್ಯ ಸಾರಿಗೆ ನಿಗಮದ ಬಸ್ ಹಾಗೂ ಸಿಬ್ಬಂದಿ

NWKRTC :ಉತ್ತರ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸಿಬ್ಬಂದಿಗೆ ಜುಲೈ ತಿಂಗಳ ವೇತನ ನೀಡಲು 65 ಕೋಟಿ ಅನುದಾನ ನೀಡುವಂತೆ ವಾ. ಕ. ರಾ. ರ. ಸಾ. ಸಂಸ್ಥೆಯ ಎಂಡಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜೂನ್ ತಿಂಗಳಲ್ಲಿ ಶಕ್ತಿ ಯೋಜನೆ ಚಾಲನೆ ನೀಡುವ ವೇಳೆ ಮಹಿಳಾ ಪ್ರಯಾಣಿಕರ ಪ್ರಯಾಣದ ವೆಚ್ಚ ಭರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು.

ಸಿಬ್ಬಂದಿ ವೇತನಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದ ವಾಯವ್ಯ ಸಾರಿಗೆ ನಿಗಮ.. ಜುಲೈ ತಿಂಗಳ ಸ್ಯಾಲರಿ ಪಾವತಿಗೆ ಬೇಕು ₹ 65 ಕೋಟಿ

ಹುಬ್ಬಳ್ಳಿ: ರಾಜ್ಯ ಸರ್ಕಾರದ ಮಹತ್ವಾಂಕ್ಷಿ ಶಕ್ತಿ ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದರ ಯಶಸ್ಸಿನ ಹಿಂದೆ ಸಾರಿಗೆ ಇಲಾಖೆ ಸಿಬ್ಬಂದಿಯ ಪರಿಶ್ರಮವೂ ಕಾರಣವಾಗಿದೆ. ಆದ್ರೆ ಈಗ ಆರ್ಥಿಕ ಸಂಕಷ್ಟದಲ್ಲಿರುವ ಸಾರಿಗೆ ಇಲಾಖೆ ತನ್ನ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದ ಸ್ಥಿತಿ ತಲುಪಿದೆ.

ಅದರಲ್ಲೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆರ್ಥಿಕ ಶಕ್ತಿ ತುಂಬಲು ಸರ್ಕಾರಕ್ಕೆ ದುಂಬಾಲು ಬಿದ್ದಿದೆ. ತನ್ನ ಸಿಬ್ಬಂದಿಗೆ ವೇತನ ನೀಡಲು ರಾಜ್ಯ ಸರ್ಕಾರಕ್ಕೆ 65 ಕೋಟಿ ಹಣಕಾಸು ನೆರವು ಬೇಕಿದೆ. ಸಾರಿಗೆ ನೌಕರರ ವೇತನಕ್ಕಾಗಿ ಸರ್ಕಾರದ ಮೊರೆ ಹೋಗಿದ್ದು, ಸಚಿವರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಂ ಡಿ ಭರತ್ ಅವರು ಪತ್ರ ಬರೆದಿದ್ದಾರೆ.

ಉತ್ತರ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸಿಬ್ಬಂದಿಗೆ ಜುಲೈ ತಿಂಗಳ ವೇತನ ನೀಡಲು 65 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜೂನ್ ತಿಂಗಳಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡುವಾಗ ಮಹಿಳಾ ಪ್ರಯಾಣಿಕರ ಪ್ರಯಾಣದ ವೆಚ್ಚವನ್ನು ಭರಿಸುವುದಾಗಿ ಸರ್ಕಾರ ಹೇಳಿತ್ತು.

ಜೂನ್ 11 ರಿಂದ 30ರ ವರೆಗೆ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ 2.50 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಅವರ ಪ್ರಯಾಣದ ವೆಚ್ಚ, ಅಂದಾಜು 65 ಕೋಟಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಸಿಬ್ಬಂದಿ ವೇತನ ನೀಡಲು ಆರ್ಥಿಕ ನೆರವು ನೀಡಲು ಪತ್ರ ಬರೆದಿದ್ದಾರೆ.

ಇನ್ನು ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿ ಹೊಂದಿರುವ ಈ ಸಂಸ್ಥೆಯಲ್ಲಿ ಬಸ್ ಚಾಲಕರು ನಿರ್ವಾಹಕರು ಆಡಳಿತ ವರ್ಗ ಸೇರಿ 21641 ಸಿಬ್ಬಂದಿ ಇದ್ದಾರೆ. ಇವರೆಲ್ಲರಿಗೂ ಒಟ್ಟು ವೇತನ ಮಾಡಲು ನೀಡಲು ಪ್ರತಿ ತಿಂಗಳು 87 ಕೋಟಿ ರೂ ಬೇಕು. ಇದನ್ನೇ ಎಂಡಿ ಭರತ್ ಸರ್ಕಾರದ ಗಮನಕ್ಕೆ ತಂದಿದ್ದಾರೆ.

ಶಕ್ತಿ ಯೋಜನೆ ಮುನ್ನ ಜೂನ್ 1 ರಿಂದ 10ರ ವರೆಗೆ ಸಂಸ್ಥೆಗೆ 47 ಕೋಟಿ ರೂ. ಆದಾಯ ಬಂದಿತು. ಆಗ ಪುರುಷರು ಸೇರಿ ಮಹಿಳೆಯರು ಹಣ ಕೊಟ್ಟು ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿ ಬಳಿಕ ಜೂನ್ 11 ರಿಂದ 30ರ ವರೆಗಿನ ಅವಧಿಯಲ್ಲಿ 23 ಕೋಟಿ ಆದಾಯ ಬಂದಿದೆ.

ಮಹಿಳೆಯರು ಉಚಿತವಾಗಿ ಪ್ರಯಾಣಿಸಿದರೆ, ಪುರುಷರು ಹಣ ಕೊಟ್ಟು ಪ್ರಯಾಣಿಸಿದ್ದರು. ಒಟ್ಟು ಪ್ರಯಾಣಿಕರಿಂದ ಒಟ್ಟು 70 ರೂ ಕೋಟಿ ಆದಾಯ ಬಂದಿತು. ಬೇರೆ ಬೇರೆ ಮೂಲಗಳಿಂದ ಸೇರಿ ಒಟ್ಟು 110 ಕೋಟಿ ಆದಾಯ ಬಂದಿದೆ. ಈ ಹಣ ಬಳಸಿಕೊಂಡು, ಸಿಬ್ಬಂದಿಗೆ ಜೂನ್ ಸಂಬಳ ಪಾವತಿಸಲಾಗಿದೆ. ಈಗ ವೇತನ ನೀಡಬೇಕಾದ್ರೆ ಸರ್ಕಾರದ ನೆರವಿನ ಅವಶ್ಯಕತೆ ಇದೆ.

ನಿಗಮದಲ್ಲಿ ಇರುವ 4 ಸಾವಿರಕ್ಕೂ ಹೆಚ್ಚು ಬಸ್‌ಗಳಿಗೆ ಪ್ರತಿ ತಿಂಗಳು ಡೀಸೆಲ್ ಹಾಕಲು 80 ಕೋಟಿ ರೂಪಾಯಿ ಬೇಕು. ಕಳೆದ ತಿಂಗಳು ಡೀಸೆಲ್‌ಗೆ ಕೊಡಬೇಕಾದ ಸ್ವಲ್ಪ ಹಣ ಉಳಿಸಿಕೊಂಡು, ಸಿಬ್ಬಂದಿಗೆ ಪಾವತಿಸಲಾಗಿದೆ. ಈ ತಿಂಗಳು ಸರ್ಕಾರದಿಂದ ಹಣ ಬಾರದಿದ್ದರೆ ಜುಲೈ ತಿಂಗಳ ಡೀಸೆಲ್ ಮೊತ್ತದ ಬಾಕಿ ಆಗಸ್ಟ್ ತಿಂಗಳಿನಲ್ಲೂ ಮುಂದುವರೆಯಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂಓದಿ: ವರ್ಷದ ಹಿಂದೆಯೇ ತಿರುಪತಿಗೆ ತುಪ್ಪ ಪೂರೈಕೆ ಸ್ಥಗಿತ, ಹಿಂದೂ ವಿರೋಧಿ ಬಿಜೆಪಿ ಸರ್ಕಾರವೋ, ಬೊಮ್ಮಾಯಿಯೋ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ

Last Updated :Aug 1, 2023, 4:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.