ETV Bharat / state

ಅಗ್ನಿಪಥ್ ಮಹತ್ತರವಾದ ಯೋಜನೆ: ಸಚಿವ ಬಿ ಸಿ ಪಾಟೀಲ್

author img

By

Published : Jun 19, 2022, 3:55 PM IST

ಸಚಿವ ಬಿ ಸಿ ಪಾಟೀಲ್
ಸಚಿವ ಬಿ ಸಿ ಪಾಟೀಲ್

ಆರ್ಮಿ ಹೋಗೋ ಉದ್ದೇಶ ದೇಶ ರಕ್ಷಣೆ ಮಾಡುವುದು. ದೇಶ ಪ್ರೇಮ ತೋರಿಸುವವರು ರೈಲ್ವೆಗೆ ಬೆಂಕಿ ಹಾಕ್ತಾರಾ? ಎಂದು ಕೃಷಿ ಸಚಿವ ಬಿ. ಸಿ ಪಾಟೀಲ್​​ ಪ್ರತಿಕ್ರಿಯಿಸಿದ್ದಾರೆ.

ಧಾರವಾಡ: ಅಗ್ನಿಪಥ್ ಯೋಜನೆಗೆ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೃಷಿ ಸಚಿವ ಬಿ. ಸಿ ಪಾಟೀಲ್​​ ಪ್ರತಿಕ್ರಿಯಿಸಿದ್ದಾರೆ. ಅಗ್ನಿಪಥ್ ಮಹತ್ತರವಾದ ಯೋಜನೆ. ನಾಲ್ಕು ವರ್ಷದ ಸರ್ವಿಸ್​ ಬಳಿಕ ಬೇಕಾದ ನೌಕರಿ ಸೇರಬಹುದು. ಅದರಲ್ಲಿ‌ ಮೀಸಲಾತಿ ಸಹ ಕೊಡುತ್ತಿದ್ದಾರೆ ಎಂದು ಯೋಜನೆಯನ್ನು ಸಮರ್ಥನೆ ಮಾಡಿಕೊಂಡರು.

ಸಚಿವ ಬಿ ಸಿ ಪಾಟೀಲ್ ಅವರು ಮಾತನಾಡಿದರು

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ಮಾಡುವವರೆಲ್ಲ ಆರ್ಮಿ ಸೇರಬಯಸುವವರು ಅಲ್ವಾ? ಆರ್ಮಿಗೆ ಹೋಗೋ ಉದ್ದೇಶ ದೇಶ ರಕ್ಷಣೆ ಮಾಡುವುದು. ದೇಶ ಪ್ರೇಮ ತೋರಿಸುವವರು ರೈಲ್ವೆಗೆ ಬೆಂಕಿ ಹಾಕ್ತಾರಾ?. ಜನರಿಗೆ ತೊಂದರೆ ಕೊಟ್ಟು ದೇಶ ಕಾಯೋಕೆ ಆಗುತ್ತಾ. ಇದೆಲ್ಲವೂ ಕಿಡಿಗೇಡಿಗಳ ಕುತಂತ್ರ. ಕೆಲವರು ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿದ್ದಾರೆ. ಇದಕ್ಕೆ ಯುವಕರು ಬಲಿಯಾಗಬಾರದು ಎಂದರು.

ಕಾಂಗ್ರೆಸ್ ಪಕ್ಷ ಎಲ್ಲಾ ಕಡೆ ಅದೇ ಕೆಲಸ ಮಾಡುತ್ತಿದೆ. ರಾಹುಲ್ ಗಾಂಧಿಗೆ ವಿಚಾರಣೆಗೆ ಕರೆದರೆ ಪ್ರತಿಭಟನೆ ಮಾಡಿದ್ರು. ಹಿಂದೆ ಖರ್ಗೆಯವರನ್ನೂ ಇಡಿ ವಿಚಾರಣೆಗೆ ಕರೆದಿತ್ತು. ಆಗ ಒಬ್ಬರೂ ಪ್ರತಿಭಟನೆಗೆ ಬರಲಿಲ್ಲ. ಓರ್ವ ಹಿರಿಯ ದಲಿತ ನಾಯಕ ಖರ್ಗೆ. ಆದರೆ ರಾಹುಲ್, ಸೋನಿಯಾ ಕರೆದು ವಿಚಾರಣೆ ಮಾಡಬಾರದು ಅಂದ್ರೆ ಹೇಗೆ? ಈ ದೇಶದಲ್ಲಿ ನ್ಯಾಯ, ಸಂವಿಧಾನಕ್ಕೆ ಎಲ್ಲರೂ ತಲೆ ಬಾಗಬೇಕು ಎಂದು ಹೇಳಿದರು.

ಕರೆಯಬಾರದು ಅಂತಾ ಧಮ್ಕಿ ಹಾಕಿದ್ರೆ ಹೇಗೆ?. ನಾಳೆ ಯಾರೋ‌ ಒಬ್ಬ ಕೊಲೆ ಮಾಡ್ತಾನೆ. ಅವನನ್ನು ಬಂಧಿಸಬೇಡಿ ಅಂತಾ ಪ್ರತಿಭಟಿಸ್ತಾರಾ? ಕಾಂಗ್ರೆಸ್ ಸರ್ಕಾರ ಇದ್ದಾಗಲೇ ದೂರು ದಾಖಲಾಗಿದೆ. ಇಡಿ ಪ್ರಧಾನಿ ಮಾತು ಕೇಳುತ್ತೆ ಅಂತಾರೆ. ಹಾಗಾದ್ರೆ, ಆಗ ಪಿಎಂ ಇದ್ದ ಮನಮೋಹನಸಿಂಗ್​ ಕೇಸ್ ಆಗದಂತೆ ಮಾಡುತ್ತಿದ್ದರಲ್ವಾ? ಇಡಿ ಸ್ವತಂತ್ರವಾದ ಸಂಸ್ಥೆ. ಅದನ್ನು ಕಾನೂನುಬದ್ಧವಾಗಿ ಕೆಲಸ ಮಾಡಲು ಬಿಡಬೇಕು ಎಂದು ಸಚಿವ ಬಿ ಸಿ ಪಾಟೀಲ್​ ಹೇಳಿದರು.

ಓದಿ: ಪಠ್ಯ ಪರಿಷ್ಕರಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ, ಬದಲಾವಣೆಗೆ ಮುಕ್ತವಾಗಿದ್ದೇವೆ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.