ETV Bharat / state

ಯೋಗೇಶ್‌ಗೌಡ ಕೊಲೆ ಪ್ರಕರಣ: ಪ್ರಮುಖ ಆರೋಪಿ ಬಸವರಾಜ‌ ಮುತ್ತಗಿ ವಿಚಾರಣೆಗೆ ಹಾಜರ್

author img

By

Published : Nov 20, 2020, 1:52 PM IST

ಧಾರವಾಡ ಜಿ.ಪಂ. ಸದಸ್ಯ ಯೋಗೇಶ್‌ಗೌಡ ಕೊಲೆ ಪ್ರಕರಣ ತನಿಖೆ ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು ಇಂದು ಪ್ರಕರಣದ ಆರೋಪಿ ಬಸವರಾಜ ಮುತ್ತಗಿ ಹಾಗೂ ಹತ್ಯೆಗೆ ಬಳಸಿದ್ದ ವಾಹನದ ಮಾಲೀಕ ಚಂದ್ರು ಪೂಜಾರರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

enquiry
ಧಾರವಾಡ

ಧಾರವಾಡ: ಜಿ.ಪಂ. ಸದಸ್ಯ ಯೋಗೇಶ್‌ಗೌಡ ಕೊಲೆ ಪ್ರಕರಣ ಸಿಬಿಐ ತನಿಖೆ ತೀವ್ರಗೊಂಡಿದೆ. ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿರುವ ಸಿಬಿಐ ವಿಚಾರಣೆಗೆ ಇಂದು ಪ್ರಮುಖರು ವಿಚಾರಣೆಗೆ ಆಗಮಿಸಿದ್ದಾರೆ.

ಧಾರವಾಡದಲ್ಲಿ ಸಿಬಿಐ ವಿಚಾರಣೆ ಮತ್ತಷ್ಟು ಚುರುಕು
ಯೋಗೇಶ್‌ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಹಾಗೂ ಹತ್ಯೆಗೆ ಬಳಸಿದ ಕಾರು ಮಾಲೀಕ ಚಂದ್ರು ಪೂಜಾರ್​​ ಅವರನ್ನು ಸಿಬಿಐ ಗ್ರಿಲ್​ ಮಾಡುತ್ತಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಕರೆಸಿಕೊಂಡು ಸಿಬಿಐ ಇಬ್ಬರನ್ನು ವಿಚಾರಣೆಗೊಳಪಡಿಸಿದೆ.


ಕೊಲೆ ನಡೆದ ವೇಳೆ ಕಪ್ಪು ಬಣ್ಣದ ಕಾರು ಬಳಕೆಯಾಗಿದ್ದು ಪತ್ತೆಯಾಗಿತ್ತು. ಆ ಕಾರು ಚಂದ್ರು ಪೂಜಾರ್‌ಗೆ ಸೇರಿದ್ದು ಎನ್ನಲಾಗಿತ್ತು. ಆ ಹಿನ್ನೆಲೆಯಲ್ಲಿ ಚಂದ್ರು ಪೂಜಾರ್‌ನನ್ನು ಸಿಬಿಐ ವಿಚಾರಣೆಗೆ ಕರೆಸಿಕೊಂಡಿದೆ. ಒಟ್ಟಿನಲ್ಲಿ ಈಗಾಗಲೇ ಮಾಜಿ‌ ಸಚಿವ ವಿನಯ್ ಕುಲಕರ್ಣಿ ಹಾಗೂ ಅವರ ಸಹೋದರ ವಿಜಯ್ ಕುಲಕರ್ಣಿ ಸೇರಿದಂತೆ ಹಲವರನ್ನು ಸಿಬಿಐ ವಿಚಾರಣೆಗೊಳಪಡಿಸಿದೆ. ಆ ಹಿನ್ನೆಲೆ ಯೋಗೇಶ್‌ಗೌಡ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದು ಕೊಳ್ಳುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.