ETV Bharat / state

ಹರಿಹರ: ಆಸ್ಪತ್ರೆಗೆ ನುಗ್ಗಿ ಅಣ್ಣನಿಗೆ ಚಾಕುವಿನಿಂದ ಇರಿದು ಕೊಲೆಗೈದ ಸಹೋದರ

author img

By

Published : May 15, 2023, 2:12 PM IST

person-murdered-over-property-issue-in-harihara
ಆಸ್ತಿ ವಿಚಾರ: ಆಸ್ಪತ್ರೆಗೆ ನುಗ್ಗಿ ಅಣ್ಣನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಸಹೋದರ

ಮನೆ ಹಾಗೂ‌ ಆಸ್ತಿ ವಿಚಾರ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಸಹೋದರ ಆಸ್ಪತ್ರೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹರಿಹರದಲ್ಲಿ ನಡೆದಿದೆ.

ದಾವಣಗೆರೆ: ಮನೆ ಹಾಗೂ‌ ಆಸ್ತಿ ವಿಚಾರ ಹಿನ್ನೆಲೆಯಲ್ಲಿ ತಮ್ಮನೋರ್ವ ತನ್ನ ಅಣ್ಣನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭಯಾನಕ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದ ಆಸ್ಪತ್ರೆಯಲ್ಲಿ ನಡೆದಿದೆ. ಹರಿಹರದ ಪ್ರಶಾಂತ್ ನಗರದ ನಿವಾಸಿ ಕೆ.ಜಿ ಕುಮಾರ (31) ಕೊಲೆಯಾದ ವ್ಯಕ್ತಿ. ಹರಿಹರದ ಗುಂಡಪ್ಪ ಎಂಬುವರಿಗೆ ಇಬ್ಬರು ಪತ್ನಿಯರಿದ್ದು, ನಗರದ ಭರಂಪುರ ನಿವಾಸಿ ಎರಡನೇ ಪತ್ನಿ ರತ್ನಮ್ಮನ ಪುತ್ರ ರಾಜು ಹಾಗೂ ಮೊದಲನೇ ಪತ್ನಿ ಲಕ್ಷಮ್ಮನ ಕೊನೆಯ ಮಗನಾದ ಕುಮಾರ್ ಕೆ.ಜಿ ಅವರೊಂದಿಗೆ ಆಸ್ತಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಇವರಿಬ್ಬರ ಮಧ್ಯೆ ಮನಸ್ತಾಪವಿದ್ದು ಪದೇಪದೇ ಸಣ್ಣಪುಟ್ಟ ಜಗಳ ನಡೆಯುತ್ತಿದ್ದವು. ಭಾನುವಾರ ರಾತ್ರಿ ದಾವಣಗೆರೆಯಿಂದ ಹರಿಹರಕ್ಕೆ ವಾಪಸ್ ಬರುತ್ತಿರುವ ಮಾರ್ಗ ಮಧ್ಯೆ ಕುಮಾರ್ ಮೇಲೆ ತಮ್ಮ ರಾಜು ಮತ್ತು ಮಾರುತಿ ಎಂಬುವರು ಹಲ್ಲೆ ಮಾಡಿದ್ದಾರೆ. ಕೂಡಲೇ ಕುಮಾರ್​​ನನ್ನು ಹರಿಹರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಆದರೆ ಆರೋಪಿ ರಾಜು ಈ ವೇಳೆ ಆಸ್ಪತ್ರೆಗೆ ಬಂದು ಕುಮಾರ್ ಮೇಲೆ ಮತ್ತೆ ಹಲ್ಲೆ ನಡೆಸಿ ಚಾಕುವಿನಿಂದ ತಿವಿದಿದ್ದಾನೆ. ತೀವ್ರ ರಕ್ತಸಾವ್ರದಿಂದ ಕುಮಾರ್ ಅವರನ್ನು ದಾವಣಗೆರೆಗೆ ಕರೆತರುವಾಗ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಕುಮಾರ್ ಪತ್ನಿ ರೇಖಾ ಹರಿಹರ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೂಡಲೇ ಆರೋಪಿ ರಾಜು ಹಾಗೂ ಮಾರುತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ದಾವಣಗೆರೆ ಉಪವಿಭಾಗ ಅಧೀಕ್ಷಕರಾದ ಕನ್ನಿಕಾ ಸಕ್ರಿವಾಲ್, ನಗರಠಾಣೆ ಇನ್ಸ್​ಪೆಕ್ಟರ್ ದೇವಾನಂದ್ ಟಿ. ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಕೊಲೆಯಿಂದ ಬೆಚ್ಚಿಬಿದ್ದ ಆಸ್ಪತ್ರೆ ಸಿಬ್ಬಂದಿ: ಹರಿಹರ ಆಸ್ಪತ್ರೆಯಲ್ಲಿ ಕೊಲೆ ನಡೆದಿರುವುದು ಕಂಡು ಕರ್ತವ್ಯನಿರತ ವೈದ್ಯರು, ನರ್ಸಿಂಗ್ ಅಧಿಕಾರಿಗಳು ಆಸ್ಪತ್ರೆ ಸಿಬ್ಬಂದಿ ಭಯಭೀತರಾಗಿದ್ದಾರೆ. ಸುಮಾರು ವರ್ಷಗಳಿಂದ ಸಾರ್ವಜನಿಕ ಆಸ್ಪತ್ರೆಗೆ ಪೊಲೀಸರ ನೇಮಕ ಮಾಡುವಂತೆ ಸಂಬಂಧಿಸಿದ ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ನೇಮಕ ಆಗಿಲ್ಲ. ಭದ್ರತೆ ಇಲ್ಲದೆ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಇದೆ. ಸಾರ್ವಜನಿಕ ಆಸ್ಪತ್ರೆಗೆ ಪೊಲೀಸ್ ಚೌಕಿ ಅವಶ್ಯಕತೆ ಇದೆ. ಕೂಡಲೇ ಆಸ್ಪತ್ರೆಗೆ ಪೊಲೀಸರ ನೇಮಕ ಮಾಡಿ, ಭಯವಿಲ್ಲದೆ ಕರ್ತವನಿರ್ವಹಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ವಹಿಸಬೇಕೆಂದು ವೈದ್ಯರು ಹಾಗೂ ಸಿಬ್ಬಂದಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅಡಿಕೆ ಗಿಡ ಕತ್ತರಿಸಿದ ಕೋಪ: ಜ್ಯೋತಿಷಿ ಮಾತು ಕೇಳಿ ಯುವಕನ ಕೈ-ಕಾಲು ಕತ್ತರಿಸಿದನೇ ಚಿಕ್ಕಪ್ಪ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.