ETV Bharat / technology

ಆ್ಯಪಲ್ ಬಳಕೆದಾರರಿಗೆ ಖುಷಿ ಸುದ್ದಿ!: ವಿಶೇಷಚೇತನರಿಗಾಗಿಯೇ ಲೇಟೆಸ್ಟ್ ಫೀಚರ್ ಘೋಷಿಸಿದ ಟೆಕ್ ಕಂಪನಿ - Apple Accessibility Features

author img

By ETV Bharat Karnataka Team

Published : May 18, 2024, 5:56 PM IST

Apple Accessibility Features: ಇದು ಆ್ಯಪಲ್ ಬಳಕೆದಾರರಿಗೆ ಖುಷಿ ನೀಡುವ ಸುದ್ದಿ. ಕಂಪನಿ ಹೊಸ ವೈಶಿಷ್ಟ್ಯಗಳನ್ನು ತರುವುದಾಗಿ ಘೋಷಿಸಿದೆ. ಹೊಸ ವೈಶಿಷ್ಟ್ಯಗಳಿಂದ ಅಂಗವಿಕಲರು ಕೂಡ ಐಫೋನ್ ಮತ್ತು ಐಪ್ಯಾಡ್ ಉಪಯೋಗಿಸಬಹುದು.

Apple Accessibility Features
ಸಂಗ್ರಹ ಚಿತ್ರ (ETV Bharat)

Apple Accessibility Features: ವಿಶ್ವದ ಪ್ರಸಿದ್ಧ ಟೆಕ್ ಕಂಪನಿ ಆ್ಯಪಲ್​ ತನ್ನ ಐಫೋನ್​ ಮತ್ತು ಐಪ್ಯಾಡ್​ನಲ್ಲಿ ಹೊಸ Accessibility ಎಂಬ ವೈಶಿಷ್ಟ್ಯಗಳನ್ನು ಪರಿಚಯಿಸುವುದಾಗಿ ಘೋಷಿಸಿದೆ. ಐ ಟ್ರ್ಯಾಕಿಂಗ್, ಮ್ಯೂಸಿಕ್ ಹ್ಯಾಪ್ಟಿಕ್ಸ್, ವೋಕಲ್ ಶಾರ್ಟ್‌ಕಟ್‌ಗಳಂತಹ ವೈಶಿಷ್ಟ್ಯಗಳನ್ನು ಪರಿಚಯಿಸಲಿದ್ದು, ವಿಶೇಷಚೇತನರು ಸಹ ಆ್ಯಪಲ್ ಸಾಧನಗಳನ್ನು ಸುಲಭವಾಗಿ ಉಪಯೋಗಿಸಬಹುದಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ವೈಶಿಷ್ಟ್ಯಗಳು ಲಭ್ಯವಾಗಲಿವೆ ಎಂದು ಕಂಪನಿ ಹೇಳಿಕೊಂಡಿದೆ.

Apple Eye Tracking Feature: ಪರಿಚಯಿಸಲಾಗುವ ಐ ಟ್ರ್ಯಾಕಿಂಗ್ ವೈಶಿಷ್ಟ್ಯವು ಕೃತಕ ಬುದ್ಧಿಮತ್ತೆಯ (AI) ಸಹಾಯದಿಂದ ಕಾರ್ಯನಿರ್ವಹಣೆ ಮಾಡುತ್ತದೆ ಅನ್ನೋದು ಗಮನಾರ್ಹ. ಹಾಗಾಗಿ ಬಳಕೆದಾರರು ತಮ್ಮ ಕಣ್ಣುಗಳಿಂದ ಬಹಳ ಸುಲಭವಾಗಿ ಐಪ್ಯಾಡ್, ಐಫೋನ್​​ಗಳನ್ನು ನಿಯಂತ್ರಿಸಬಹುದು. ಅಲ್ಲದೇ, ಆನ್-ಡಿವೈಸ್ ಮೆಷಿನ್ ಲರ್ನಿಂಗ್ (ML) ವೈಶಿಷ್ಟ್ಯತೆಯನ್ನು ಸಹ ತರಲಿದ್ದು, ದೈಹಿಕ ವಿಕಲಾಂಗತೆ ಹೊಂದಿರುವ ಬಳಕೆದಾರರು ಸುಲಭವಾಗಿ ನ್ಯಾವಿಗೇಟ್ ಮಾಡಬಹುದಾಗಿದೆ.

ಆ್ಯಪಲ್ ಸಾಧನಗಳಲ್ಲಿನ ಮುಂಭಾಗದ ಕ್ಯಾಮರಾ ಕೆಲವೇ ಸೆಕೆಂಡುಗಳಲ್ಲಿ ಬಳಕೆದಾರರ ಕಣ್ಣುಗಳನ್ನು ಟ್ರ್ಯಾಕ್ ಮಾಡುತ್ತದೆ. ಆದ್ದರಿಂದ ಅವರು ಸ್ಕ್ರೀನ್​​​​ ಸ್ಪರ್ಶಿಸದೆಯೇ ತಮ್ಮ ಕಣ್ಣಿನ ಚಲನೆಗಳೊಂದಿಗೆ ಸಾಧನಗಳನ್ನು ನ್ಯಾವಿಗೇಟ್ ಮಾಡಬಹುದು. ಬಳಕೆದಾರರ ವೈಯಕ್ತಿಕ ಗೌಪ್ಯತೆಗೂ ಕೂಡ ಧಕ್ಕೆಯಾಗುವುದಿಲ್ಲ ಎಂದು ಕಂಪನಿ ಹೇಳಿದೆ. ಈ ಹೊಸ ವೈಶಿಷ್ಟ್ಯಗಳು ಎಲ್ಲ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಸಹಾಯ ಮಾಡಬಲ್ಲದಾಗಿದೆ. ಇದಕ್ಕಾಗಿ ಯಾವುದೇ ಹೆಚ್ಚುವರಿ ಹಾರ್ಡ್​ವೇರ್​ ಅಥವಾ ಆ್ಯಕ್ಸ್​ಸರಿ ಅಗತ್ಯವಿಲ್ಲ.

Apple Music Haptics: ಮ್ಯೂಸಿಕ್ ಹ್ಯಾಪ್ಟಿಕ್ಸ್ ಎಂಬ ಫೀಚರ್ ಅನ್ನು ತರುತ್ತಿದ್ದು, ಶ್ರವಣದೋಷವುಳ್ಳವರೂ ಸಹ ಸಂಗೀತವನ್ನು ಆನಂದಿಸಬಹುದು. ಇದರಲ್ಲಿ ಹಾಡಿಗೆ ತಕ್ಕಂತೆ ವೈಬ್ರೆಷನ್ಸ್​ ಸೇರಿದಂತೆ ಇತರ ಎಫೆಕ್ಟ್ಸ್​ ಸಹ ಕೇಳಿ ಬರುತ್ತವೆ. ಹಾಗಾಗಿ ಕಿವುಡರೂ ಸಹ ತಾಳಕ್ಕೆ ತಕ್ಕಂತೆ ಅದರಲ್ಲಿ ಬರುವ ವೈಬ್ರೆಷನ್ಸ್​ ಮೂಲಕ ಸಂಗೀತವನ್ನು ಆಸ್ವಾದಿಸಬಹುದಾಗಿದೆ.

Apple Vocal Shortcuts: ಸರಿಯಾಗಿ ಮಾತನಾಡಲು ಬರದವರಿಗಾಗಿ ಆ್ಯಪಲ್ ಕಂಪನಿ ವೋಕಲ್ ಶಾರ್ಟ್ ಕಟ್ ಎಂಬ ಫೀಚರ್ ಅನ್ನು ಸಹ ತರುತ್ತಿದೆ. ಇದು ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗದ ಜನರು ಮಾತನಾಡುವ ಪದಗಳನ್ನು ಅರ್ಥಮಾಡಿಕೊಳ್ಳಲು ಐಫೋನ್‌ನಲ್ಲಿ ಹೆಚ್ಚು ಸುಲಭವಾಗುತ್ತದೆ. ಆದ್ದರಿಂದ ಅವರು ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು. ಇವುಗಳ ಜೊತೆಗೆ ಆ್ಯಪಲ್ ಕಂಪನಿಯು ವಾಹನ ಚಲನೆಯ ಸೂಚನೆಗಳು, ಕಾರ್ ಪ್ಲೇ, ಧ್ವನಿ ಗುರುತಿಸುವಿಕೆ ಮತ್ತು ಬಣ್ಣ ಫಿಲ್ಟರ್‌ಗಳಂತಹ ಅನೇಕ ವೈಶಿಷ್ಟ್ಯಗಳನ್ನು ಸಹ ಲಭ್ಯಗೊಳಿಸಲಿದೆ.

ಇದನ್ನೂ ಓದಿ: ಸಿಯೋಲ್​ನಲ್ಲಿ ಮುಂದಿನ ಎಐ ಶೃಂಗಸಭೆ: ಕೃತಕ ಬುದ್ಧಿಮತ್ತೆ ಬಳಕೆ, ಸುರಕ್ಷತೆಯ ಬಗ್ಗೆ ಚರ್ಚೆ - AI Seoul Summit

ETV Bharat Logo

Copyright © 2024 Ushodaya Enterprises Pvt. Ltd., All Rights Reserved.