ETV Bharat / state

2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೇವಿ, ಯಾವ ಕ್ಷೇತ್ರ ಎಂದು ನಿರ್ಧರಿಸಿಲ್ಲ: ಕೋಡಿಹಳ್ಳಿ‌ ಚಂದ್ರಶೇಖರ್

author img

By

Published : Jul 21, 2022, 8:37 PM IST

ಕೋಡಿಹಳ್ಳಿ‌ ಚಂದ್ರಶೇಖರ್
ಕೋಡಿಹಳ್ಳಿ‌ ಚಂದ್ರಶೇಖರ್

ರಾಜಕೀಯ ವ್ಯಕ್ತಿಗಳ ಪರವಾಗಿ ಕೆಲ ಮಾಧ್ಯಮ ಕೆಲಸ ಮಾಡುತ್ತಿವೆ ಎಂದು ರೈತ ಮುಖಂಡ ಕೋಡಿಹಳ್ಳಿ‌ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ: 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ಯಾವ ಕ್ಷೇತ್ರ ಎಂದು ನಿರ್ಧರಿಸಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ‌ ಚಂದ್ರಶೇಖರ್ ತಿಳಿಸಿದರು.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಎಪಿ ಪಕ್ಷದ ಮುಖವಾಣಿಯಾಗಿ ರೈತ ಸಂಘ ಕೆಲಸ ಮಾಡ್ತಿದೆ. ರೈತ ಸಂಘ ತನ್ನ ಸಿದ್ಧಾಂತದಂತೆ ಕೆಲಸ ಮಾಡುತ್ತದೆ. ಸೆಪ್ಟೆಂಬರ್‌ ಬಳಿ ಕ್ಷೇತ್ರವಾರು ಆಕಾಂಕ್ಷಿಗಳ ಪಟ್ಟಿ ಮಾಡುತ್ತೇವೆ ಎಂದರು.

ರೈತ ಮುಖಂಡ ಕೋಡಿಹಳ್ಳಿ‌ ಚಂದ್ರಶೇಖರ್ ಅವರು ಮಾತನಾಡಿರುವುದು

ಭ್ರಷ್ಟಾಚಾರ ಕುರಿತು ಮಾಧ್ಯಮ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ರಾಜಕೀಯ ವ್ಯಕ್ತಿಗಳ ಪರವಾಗಿ ಕೆಲ ಮಾಧ್ಯಮಗಳು ಕೆಲಸ ಮಾಡುತ್ತಿವೆ. ವ್ಯಕ್ತಿ ವಿರುದ್ಧ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ನರಗುಂದ, ನವಲಗುಂದ ರೈತರ ಮೇಲಿನ ಗೋಲಿಬಾರ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಳೆಗೆ ಗೋಲಿ‌ಬಾರ್ ನಡೆದು 42 ವರ್ಷ ಆಗುತ್ತಿದ್ದು, ಅಂದಿನ ಗುಂಡೂರಾವ್ ಸರ್ಕಾರ ರೈತರ ಮೇಲೆ ಗುಂಡು ಹಾರಿಸಿತ್ತು. ಈ ದಿನವನ್ನ ರೈತರ ಹುತಾತ್ಮ ದಿನವನ್ನಾಗಿ ಆಚರಣೆ ಮಾಡುತ್ತೇವೆ.

ರಾಜ್ಯದಲ್ಲಿ ರೈತರ ಮೇಲೆ ದೌರ್ಜನ್ಯ ನಡೆಯುತ್ತಲೇ ಇವೆ. ಸರ್ಕಾರಗಳು ರೈತರ ಪರವಾಗಿ ಕೆಲಸ ಮಾಡಬೇಕು. ರಾಜ್ಯದಲ್ಲಿ 40 ಕ್ಕೂ ಹೆಚ್ಚು ರೈತ ಸಂಘ ಇದ್ದು, ಅವರಿಗೂ ನಮಗೂ ಯಾವುದೇ ಸಂಬಂಧ ಇಲ್ಲ, ಈ ಹಸಿರು ಶಾಲು ಹೆಗಲ ಮೇಲೆ‌ ಹಾಕಿ ವರ್ಷಗಳೇ ಉರುಳಿವೆ ಎಂದು ಹೇಳಿದರು.

ಓದಿ: ಸಿಎಂ ಆಗಿ ಚುನಾವಣಾ ಸಿಹಿ - ಕಹಿ ಎರಡನ್ನೂ ಸವಿದ ಬೊಮ್ಮಾಯಿ: ಮುಂದಿರುವ ಸವಾಲುಗಳೇನು?

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.