ETV Bharat / state

ಉಳ್ಳಾಲ: ಮಾವಿನ ಹಣ್ಣು ಕೀಳಲು ಮರ ಹತ್ತಿದ ಯುವಕ ವಿದ್ಯುತ್ ತಂತಿ ತಗುಲಿ ಸಾವು!

author img

By

Published : Jun 25, 2022, 9:26 AM IST

ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.

young man dies of  power cord
ಮಹಮ್ಮದ್ ಇಲಿಯಾಸ್

ಉಳ್ಳಾಲ(ದಕ್ಷಿಣ ಕನ್ನಡ): ಮಾವಿನ ಹಣ್ಣು ಕೀಳಲು ಮರ ಹತ್ತಿದ ಯುವಕನೋರ್ವ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್​ನಲ್ಲಿ ನಿನ್ನೆ(ಶುಕ್ರವಾರ) ಸಂಜೆ ವೇಳೆ ನಡೆದಿದೆ. ಮಹಮ್ಮದ್ ಇಲಿಯಾಸ್ (21) ಮೃತ ದುರ್ದೈವಿ.

young man dies of  power cord
ಮಹಮ್ಮದ್ ಇಲಿಯಾಸ್ ಮೃತದೇಹ

ಸಂಜೆ ವೇಳೆ ಮನೆ ಸಮೀಪದ ಕಂಪೌಂಡಿನಲ್ಲಿರುವ ಮಾವಿನ ಮರದಲ್ಲಿ ಹಣ್ಣು ಕೀಳಲೆಂದು ತೆರಳಿದ ಸಂದರ್ಭ ಘಟನೆ ನಡೆದಿದೆ ಎನ್ನಲಾಗ್ತಿದೆ. ಯುವಕನ ಸಾವಿಗೆ ಮೆಸ್ಕಾಂ ಇಲಾಖೆ ಕಾರಣ. ಮಾವಿನ ಮರದ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದರೂ ಅದನ್ನು ಕಟಾವು ನಡೆಸದಿರುವುದರಿಂದ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ‌.

ಇದನ್ನೂ ಓದಿ: ಬೆಂಗಳೂರು: ಅಪ್ರಾಪ್ತೆಗೆ ಬೆದರಿಸಿ ಅತ್ಯಾಚಾರ ಎಸಗಿದವನಿಗೆ 10 ವರ್ಷ ಜೈಲು ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.