ETV Bharat / state

ಪತ್ತೆಯಾಗದ ಮಂಗಳೂರು ಸ್ಫೋಟ ಪ್ರಕರಣದ ಆರೋಪಿ ಗುರುತು.. ಇಬ್ಬರು ವಶಕ್ಕೆ: ಎಡಿಜಿಪಿ ಅಲೋಕ್​ಕುಮಾರ್​

author img

By

Published : Nov 20, 2022, 9:37 PM IST

Updated : Nov 20, 2022, 11:01 PM IST

manglore-bomb-blast-case-accused-not-identified-two-were-taken-into-custody
ಮಂಗಳೂರು ಸ್ಪೋಟ ಪ್ರಕರಣ : ಆರೋಪಿಯ ಗುರುತು ಪತ್ತೆಯಾಗಿಲ್ಲ, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ : ಎಡಿಜಿಪಿ

ಮಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಗುರುತು ಪತ್ತೆಯಾಗಿಲ್ಲ. ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಮಂಗಳೂರು: ಮಂಗಳೂರಿನ ಗರೋಡಿಯಲ್ಲಿ ರಿಕ್ಷಾದಲ್ಲಿ ನಡೆದ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ಆರೋಪಿಯ ಗುರುತು ಪತ್ತೆಯಾಗಿಲ್ಲ. ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಮಂಗಳೂರಿನ ಗರೋಡಿ ಬಳಿ ರಿಕ್ಷಾದಲ್ಲಿ ನಡೆದ ಸ್ಫೋಟ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಮತ್ತು ರಿಕ್ಷಾ ಚಾಲಕ ಚಿಕಿತ್ಸೆ ಪಡೆಯುತ್ತಿರುವ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು ಘಟನೆಯಲ್ಲಿ ಗಾಯಗೊಂಡ ಆರೋಪಿ ಮತ್ತು ರಿಕ್ಷಾ ಚಾಲಕನನ್ನು ವೀಕ್ಷಿಸಿದ್ದೇನೆ. ಆರೋಪಿಗೆ ಶೇ.45ರಷ್ಟು ಸುಟ್ಟಗಾಯವಾಗಿದೆ. ಆತ ಯಾರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆತನ ಗುರುತು ಪತ್ತೆ ಹಚ್ಚಲು ಪೋಷಕರನ್ನು ಕರೆಸಲಾಗಿದ್ದು, ಆ ಬಳಿಕ ಆತನ ಬಗ್ಗೆ ತಿಳಿಯಲಿದೆ ಎಂದರು.

ಪತ್ತೆಯಾಗದ ಮಂಗಳೂರು ಸ್ಫೋಟ ಪ್ರಕರಣದ ಆರೋಪಿ ಗುರುತು.. ಇಬ್ಬರು ವಶಕ್ಕೆ: ಎಡಿಜಿಪಿ ಅಲೋಕ್​ಕುಮಾರ್​

ಆರೋಪಿಯ ಗುರುತು ಪತ್ತೆಯಾಗಿಲ್ಲ : ಆರೋಪಿ ಪಂಪ್​ವೆಲ್ ಗೆ ಹೋಗಲು ಎಂದು ರಿಕ್ಷಾದಲ್ಲಿ ಬಂದಿದ್ದಾನೆ. ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಪಡೆದುಕೊಂಡಿದ್ದೇವೆ. ಆರೋಪಿಯ ಮನೆಯವರು ಇವತ್ತು ರಾತ್ರಿ ಬರಲಿದ್ದು, ನಾಳೆ ಆತನ ಬಗ್ಗೆ ತಿಳಿಯಲಿದೆ. ಈತನಿಗೆ ಯಾರೊಂದಿಗೆಲ್ಲ ಸಂಪರ್ಕ ಇತ್ತು, ಯಾವ ರೀತಿ ಬಂದಿದ್ದಾನೆ, ಎಲ್ಲಿ ಇದ್ದ, ಕುಕ್ಕರ್ ಬಾಂಬ್ ಎಲ್ಲಿ ತಯಾರು ಮಾಡಿದ್ದಾನೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆ. ಕೇಂದ್ರ ತನಿಖಾ ತಂಡವೂ ಆಗಮಿಸಿ ತನಿಖೆ ನಡೆಸುತ್ತಿದೆ ಎಂದು ಹೇಳಿದರು.

ಮಂಗಳೂರು ಎಸಿಪಿ ಪರಮೇಶ್ವರ ಹೆಗಡೆ ಅವರು ಈ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ. ವಿವಿಧ ತಂಡಗಳನ್ನು ರಚಿಸಲಾಗಿದೆ. ಬಹಳಷ್ಟು ಮಾಹಿತಿ ಸಿಕ್ಕಿದ್ದು, ಸಾಕ್ಷ್ಯಗಳು ನಮ್ಮ ಬಳಿ ಇವೆ. ಇವುಗಳ ಬಗ್ಗೆ ನಾಳೆ ಸ್ಪಷ್ಟನೆ ಸಿಗಬಹುದು ಎಂದು ಮಾಹಿತಿ ನೀಡಿದರು.

ಈ ಹಿಂದೆ ಮಂಗಳೂರಿನಲ್ಲಿ ನಡೆದ ಭಯೋತ್ಪಾದಕ ಬರಹಗಳುಳ್ಳ ಗೋಡೆ ಬರಹ ಪ್ರಕರಣದಲ್ಲಿ ಮೂವರ ಮೇಲೆ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಶಾಕೀರ್ ಎಂಬಾತ ನಾಪತ್ತೆಯಾಗಿದ್ದಾನೆ. ಈ ಪ್ರಕರಣದ ಆರೋಪಿ ಯಾರು ಎಂಬ ಬಗ್ಗೆ ಮುಂದೆ ತಿಳಿಯಲಿದೆ. ಆರೋಪಿಯ ಮುಖ ಸುಟ್ಟು ವಿರೂಪವಾಗಿದೆ. ಅವನಿಗೆ ಮಾತನಾಡಲು ಆಗುತ್ತಿಲ್ಲ. ಆತನ ಮನೆಯವರು ಬಂದು ಖಚಿತಪಡಿಸಿದರೆ ಆತನ ಗುರುತು ಸಿಗಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆಯಲ್ಲಿ ಅವರ ಪಾತ್ರ ಇದೆಯ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ಮಂಗಳೂರು ಆಟೋರಿಕ್ಷಾದಲ್ಲಿ ಸ್ಫೋಟ ಪ್ರಕರಣ.. ಘಟನೆ ಸಂದರ್ಭದ ವಿಡಿಯೋ ವೈರಲ್​

Last Updated :Nov 20, 2022, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.