ETV Bharat / state

ಪೆಟ್ರೋಲ್ ಬಂಕ್​​​ ಸೇರಿದಂತೆ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರ ಬಂಧನ

author img

By

Published : Oct 3, 2020, 3:31 PM IST

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಂಗಳೂರಿನ ಕೆ ಸಿ ರೋಡ್​​ನ ಮುಹಮ್ಮದ್ ಸುಹೈಲ್ ಯಾನೆ ಅಶ್ರಫ್ (19), ಆಶಿಕ್ (19) ಮತ್ತು ಮಂಗಳೂರಿನ ಫಳ್ನೀರ್​​ನ ಮುಹಮ್ಮದ್ ಅರ್ಫಾನ್ (20) ಬಂಧಿತ ಆರೋಪಿಗಳು. ಬಂಧಿತರಿಂದ ನಗದು, ಮಾರಕಾಯುಧ, ಹೆಲ್ಮೆಟ್ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ.

Mangalore police have arrested three robbers
ಪೆಟ್ರೋಲ್ ಬಂಕ್​​​ ಸೇರಿದಂತೆ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರ ಬಂಧನ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೆಟ್ರೋಲ್ ಬಂಕ್​​​​ ಸೇರಿದಂತೆ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರನ್ನು ಕಂಕನಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಕೆ. ಸಿ. ರೋಡ್​​ನ ಮುಹಮ್ಮದ್ ಸುಹೈಲ್ ಯಾನೆ ಅಶ್ರಫ್ (19), ಆಶಿಕ್ (19) ಮತ್ತು ಮಂಗಳೂರಿನ ಫಳ್ನೀರ್​​ನ ಮುಹಮ್ಮದ್ ಅರ್ಫಾನ್ (20) ಬಂಧಿತ ಆರೋಪಿಗಳು. ಬಂಧಿತರಿಂದ ನಗದು, ಮಾರಕಾಯುಧ, ಹೆಲ್ಮೆಟ್ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ.

ಇವರು ಸೆ.20ರ ರಾತ್ರಿ ಪಂಪ್ ವೆಲ್ ಉಜ್ಜೋಡಿಯಲ್ಲಿರುವ ಪೆಟ್ರೋಲ್ ಬಂಕ್​​​​​ನಲ್ಲಿ ಕಳವು ನಡೆಸಿದ್ದರು‌. ಈ ಬಗ್ಗೆ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಿದ್ದಾಗ ಇವರು ಇತರೆಡೆಯು ಕಳವು ನಡೆಸಿರುವುದು ತಿಳಿದು ಬಂದಿದೆ.

ಇವರು ಬಂಟ್ವಾಳದ ದಾಸಕೋಡಿ ಪೆಟ್ರೋಲ್ ಬಂಕ್​​​​​ನಲ್ಲಿ ಸಿಬ್ಬಂದಿಗಳಿಗೆ ಮಾರಕಾಯುಧ ತೋರಿಸಿ ನಗದು ಸುಲಿಗೆ, ಪುಂಜಲ್ ಕಟ್ಟೆ ಠಾಣಾ ವ್ಯಾಪ್ತಿಯ ಪಿಲತಬೆಟ್ಟು ಧೈಕಿನಕಟ್ಟೆ ಪೆಟ್ರೋಲ್ ಬಂಕ್​​​ನಲ್ಲಿ ಕಳ್ಳತನ, ಮಂಗಳೂರಿನ ಅಡ್ಯಾರ್ ಪೆಟ್ರೋಲ್ ಬಂಕ್​​​​ನಲ್ಲಿ ಕಳವಿಗೆ ಯತ್ನ, ಎರಡು ಬಾರಿ ಉಳ್ಳಾಲದ ಕೋಟೆಕಾರ್ ಬೀರಿಯ ಮೆಸ್ಕಾಂನ ಎಟಿಪಿ ಮೆಷಿನ್​​​ನ ನಗದು ಕಳವು, ಸೈಂಟ್ ಸೆಬಾಸ್ಟಿಯನ್ ಶಿಕ್ಷಣ ಸಂಸ್ಥೆಯಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಪೆಟ್ರೋಲ್ ಬಂಕ್​​ನಲ್ಲಿ ಕಳವು ನಡೆಯುತ್ತಿರುವ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಪೆಟ್ರೋಲ್ ಬಂಕ್​​​​ ಮಾಲೀಕರ ಸಂಘವು ಇತ್ತೀಚೆಗೆ ಮಂಗಳೂರು ಪೊಲೀಸ್ ಕಮೀಷನರ್​​ಗೆ ಮನವಿಯನ್ನು ಸಲ್ಲಿಸಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.