ETV Bharat / state

ವಿದ್ಯುತ್ ಶಾಕ್​​ನಿಂದ ಆನೆ ಬಚಾವ್ - ಟ್ವೀಟ್ ಮಾಡಿ ಪ್ರಧಾನಿ ಮೋದಿ ಸಂತಸ..ನೆಟಿಜೆನ್ಸ್​​ ಫಿದಾ

author img

By

Published : Feb 18, 2023, 11:28 AM IST

Updated : Feb 18, 2023, 12:45 PM IST

ಚಾಮರಾಜನಗರದ ಬಂಡೀಪುರ ಅರಣ್ಯ ಇಲಾಖೆಯು ಕರೆಂಟ್​ ಶಾಕ್​ನಿಂದ ನರಳುತ್ತಿದ್ದ ಹೆಣ್ಣಾನೆಯನ್ನು ಬದುಕಿಸಿದ್ದು, ಇದೀಗ ಇವರ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

Protection of the elephant
ಆನೆಯ ರಕ್ಷಣೆ

ಕಾಡಾನೆ ರಕ್ಷಣಾ ಕಾರ್ಯಚರಣೆ.

ಚಾಮರಾಜನಗರ: ಬಂಡೀಪುರ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯದಿಂದಾಗಿ ಆನೆ ಬದುಕುಳಿದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಸ ವ್ಯಕ್ತ ಪಡಿಸಿದ್ದಾರೆ. ಕಳೆದ ಮಂಗಳವಾರ ಬೆಳೆ ರಕ್ಷಣೆಗಾಗಿ ಹಾಕಲಾಗಿದ್ದ ಅಕ್ರಮ ವಿದ್ಯುತ್ ಸಂಪರ್ಕದಿಂದ ಆಹಾರ ಅರಸಿ ಬಂದ ಕಾಡಾನೆಯೊಂದು ಒದ್ದಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ನಡೆದಿತ್ತು.

ತಕ್ಷಣವೇ ಬಂಡೀಪುರ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಎಚ್ಚೆತ್ತುಕೊಂಡು ಸತತ ಪ್ರಯತ್ನದಿಂದ 4 ಗಂಟೆ ಚಿಕಿತ್ಸೆ ನೀಡಿ ಅದರ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ರಕ್ಷಣಾ ಕಾರ್ಯಚರಣೆಯ ವಿಡಿಯೋ ಎಲ್ಲಡೆ ಹರಿದಾಡುತ್ತಿದ್ದಂತೆ ಮೆಚ್ಚುಗೆ ಬರಲು ಪ್ರಾರಂಭಿಸಿದವು. ಈ ಕಾರ್ಯಕ್ಕೆ ಅರಣ್ಯ ಸಚಿವ ಭೂಪೇಂದ್ರ ಯಾದವ್ ಟ್ವೀಟ್ ಮಾಡಿ ಬಂಡೀಪುರ ಅರಣ್ಯ ಇಲಾಖೆ ಕಾರ್ಯವನ್ನು ಶ್ಲಾಘಿಸಿದ್ದರು.

ಸಚಿವ ಭೂಪೇಂದ್ರ ಯಾದವ್​ ಅವರು ಟ್ವೀಟ್​ ಮಾಡಿ, ಬಂಡಿಪುರ ಹುಲಿ ಸಂರಕ್ಷಿತ ಅರಣ್ಯದ ಸಿಬ್ಬಂದಿಯ ತ್ವರಿತ ಕ್ರಮದಿಂದಾಗಿ ವಿದ್ಯುತ್ ಸ್ಪರ್ಶದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆನೆಯನ್ನು ರಕ್ಷಿಸಲಾಗಿದೆ. ಬಳಿಕ ಆ ಹೆಣ್ಣು ಆನೆಯನ್ನು ಮತ್ತೆ ಮೀಸಲು ಪ್ರದೇಶಕ್ಕೆ ಬಿಡಲಾಗಿದ್ದು, ತೀವ್ರ ನಿಗಾ ಇರಿಸಲಾಗಿದೆ. ಆನೆಯ ರಕ್ಷಣೆಯಿಂದಾಗಿ ನನಗೆ ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಟ್ವೀಟ್​ಗೆ ಸಚಿವರು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ವಿಡಿಯೋವನ್ನು ಸಹ ಲಗತ್ತಿಸಿರುವುದು ಗಮನಾರ್ಹ..

  • Happy to see this.

    Compliments to the staff at Bandipur Tiger Reserve. Such compassion among our people is commendable. https://t.co/rcQIZdETNk

    — Narendra Modi (@narendramodi) February 18, 2023 " class="align-text-top noRightClick twitterSection" data=" ">

ಪ್ರಧಾನಿ ಮೋದಿ ರೀಟ್ವೀಟ್​..: ಇನ್ನು ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರ ಟ್ವೀಟ್​ಗೆ ಮೋದಿ ರೀಟ್ವೀಟ್​ ಮಾಡಿದ್ದಾರೆ. ಇದನ್ನು ನೋಡಿ ನನಗೂ ಸಂತೋಷವಾಯಿತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿಗೆ ಅಭಿನಂದನೆಗಳು. ನಮ್ಮ ಜನರಲ್ಲಿ ಇಂತಹ ಸಹಾನುಭೂತಿ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್​ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಸಂತಸ ಮೂಡಿದೆ.

ಇದನ್ನೂ ಓದಿ: ಬೆಂಕಿ ಅವಘಡ: ಅಪಾರ ಪ್ರಮಾಣದ ಆಸ್ತಿ ಹಾನಿ, ನಾಲ್ಕು ಎಮ್ಮೆಗಳ ಸ್ಥಿತಿ ಗಂಭೀರ

ಘಟನೆಗೆ ಕಾರಣ?: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯಕ್ಕೆ ಒಳಪಡುವ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದ ಖಾಸಗಿ ಜಮೀನಿನಲ್ಲಿ ಪುತ್ತನಪುರರಾಜು ಎಂಬಾತ ಅಕ್ರಮ ವಿದ್ಯುತ್​ನ್ನು ಬೆಳೆ ರಕ್ಷಣೆಗಾಗಿ ಹರಿಸಿದ್ದ. ಇಲ್ಲಿಗೆ ಆಹಾರ ಅರಸಿ ಬಂದ 25 ವರ್ಷದ ಹೆಣ್ಣಾನೆ ಅಕ್ರಮ ವಿದ್ಯುತ್ ಸಂಪರ್ಕದಿಂದ ಕರೆಂಟ್ ಶಾಕಿಗೆ ಒಳಗಾಗಿ ಒದ್ದಾಡಿದೆ. ಮಾಹಿತಿ ಅರಿತ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶು ವೈದ್ಯ ಡಾ.ವಾಸೀಂ ಮಿರ್ಜಾ ಘಟನೆ ನಡೆದ ಸ್ಥಳಕ್ಕೆ ತೆರಳಿ ಸತತ ನಾಲ್ಕು ತಾಸು ಚಿಕಿತ್ಸೆ ಕೊಟ್ಟು ಚೇತರಿಸಿಕೊಳ್ಳುವಂತೆ ಮಾಡಿದ್ದರು. ನಂತರ ಕಾಡಾನೆ ಕಾಡಿಗೆ ಮತ್ತೇ ತೆರಳಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿ ತಲೆಮರೆಸಿಕೊಂಡಿದ್ದಾನೆ.

ಹೀಗಾಗಿ ಈ ಘಟನೆಯನ್ನು ಅರಣ್ಯ ಸಚಿವ ಭೂಪೇಂದ್ರ ಯಾದವ್ ಟ್ವೀಟ್ ಮಾಡಿ ಬಂಡೀಪುರ ಅರಣ್ಯ ಇಲಾಖೆ ಕಾರ್ಯವನ್ನು ಶ್ಲಾಘಿಸಿದ್ದರು. ಅರಣ್ಯ ಸಚಿವರ ಟ್ವೀಟ್ ಅನ್ನು ಇಂದು ಮರು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ವಿದ್ಯುತ್ ಶಾಕಿನಿಂದ ಆನೆ ಚೇತರಿಸಿಕೊಂಡು ಬಚಾವ್ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಅರಣ್ಯ ಇಲಾಖೆ ಕಾರ್ಯವನ್ನು ಪ್ರಶಂಸಿದ್ದಾರೆ. ಇನ್ನು, ಈ ಕಾರ್ಯವನ್ನು ಗಮನಿಸಿ ಶ್ಲಾಘಿಸಿರುವ ನರೇಂದ್ರ ಮೋದಿ ಅವರ ಈ ಸಂತಸದ ಟ್ವೀಟ್​​​ಗೆ ನೆಟಿಜನ್ಸ್ ಲೈಕ್ ಬಟನ್ ಒತ್ತಿ ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ:'ದುಬಾರೆ ಆನೆ ಶಿಬಿರ'ದಲ್ಲಿ ಮೂರು ಕಾಡಾನೆಗಳಿಗೆ ತರಬೇತಿ: ಆರು ತಿಂಗಳಲ್ಲಿ ಸಾಕಾನೆಗಳಾಗಿ ಪರಿವರ್ತನೆ

Last Updated :Feb 18, 2023, 12:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.