ETV Bharat / state

ಜೋಡೊ ಯಾತ್ರೆ ಫ್ಲೆಕ್ಸ್​ ಹರಿದು ಹಾಕಿದರೆ, ನಾವೇನು ಹೆದರಲ್ಲ: ಡಿ ಕೆ ಶಿವಕುಮಾರ್​​

author img

By

Published : Sep 29, 2022, 4:27 PM IST

Updated : Sep 29, 2022, 5:16 PM IST

DK Shivakumar
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಜೋಡೋ ಯಾತ್ರೆಯ ಫ್ಲೆಕ್ಸ್ ಹರಿದು ಹಾಕಿರುವುದಕ್ಕೆಲ್ಲಾ ನಾವು ಹೆದರುವುದಿಲ್ಲ. ಅವರು ಏನು ಬೇಕಾದರೂ ಪೋಸ್ಟರ್ ಅಭಿಯಾನ ಮಾಡಿಕೊಳ್ಳಲಿ. ಅವರು ಇಲ್ಲೇ ರಾಜಕಾರಣ ಮಾಡಬೇಕು, ನಾವು ಇಲ್ಲೇ ರಾಜಕಾರಣ ಮಾಡಬೇಕು ಎನ್ನುವ ಮೂಲಕ ಡಿ ಕೆ ಶಿವಕುಮಾರ್​ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಾಮರಾಜನಗರ: ಭಾರತ ಜೋಡೋ ಯಾತ್ರೆ ಹಿನ್ನೆಲೆ ಗುಂಡ್ಲುಪೇಟೆ ಪಟ್ಟಣದಲ್ಲಿ ಕಾಂಗ್ರೆಸ್​ ಪಕ್ಷದ ವತಿಯಿಂದ ನಾಯಕರ ಫ್ಲೆಕ್ಸ್​​ಗಳನ್ನು ಅಳವಡಿಸಲಾಗಿತ್ತು. ಆದರೆ ಇವನ್ನು ಬಿಜೆಪಿ ಕಾರ್ಯಕರ್ತರು ಹರಿದು ಹಾಕಿದ್ದಾರೆ ಎನ್ನಲಾಗ್ತಿದೆ. ಈ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಗುಂಡ್ಲುಪೇಟೆಯಲ್ಲಿ ಅಂತಿಮ‌ ಹಂತದ ಸಿದ್ಧತೆ ಪರಿಶೀಲನೆ ನಡೆಸಿ, ಬಳಿಕ ಅವರು ಮಾತನಾಡಿದರು. ಫ್ಲೆಕ್ಸ್ ಹರಿದು ಹಾಕಿರುವುದಕ್ಕೆಲ್ಲಾ ನಾವು ಹೆದರುವುದಿಲ್ಲ. ಅವರು ಏನು ಬೇಕಾದರೂ ಪೋಸ್ಟರ್ ಅಭಿಯಾನ ಮಾಡಿಕೊಳ್ಳಲಿ. ಅವರು ಇಲ್ಲೇ ರಾಜಕಾರಣ ಮಾಡಬೇಕು, ನಾವು ಇಲ್ಲೇ ರಾಜಕಾರಣ ಮಾಡಬೇಕು. ನಮ್ಮ ಕಾರ್ಯಕರ್ತರಿಗೂ ಶಕ್ತಿ ಇದೆ, ಪೊಲೀಸರು ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ರೆ ನಾನು ಆಮೇಲೆ ಮಾತನಾಡುತ್ತೇನೆ ಎಂದು ಹೇಳಿದರು.

ಇದೇ ವೇಳೆ, ಅವರ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿದ ಬಗ್ಗೆ ಪ್ರಶ್ನಿಸಿದ್ದಕ್ಕೆ, ಸದ್ಯಕ್ಕೆ ನಾವು ಭಾರತವನ್ನು ಒಗ್ಗೂಡಿಸಬೇಕಿದೆ. ಜನರ ಬದುಕನ್ನು ಹಸನು ಮಾಡಬೇಕಿದೆ. ಬೆಲೆ ಏರಿಕೆಯಿಂದ ಜನರನ್ನು ರಕ್ಷಿಸಬೇಕಿದೆ ಎನ್ನುವ ಮೂಲಕ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಕಿಡಿಕಾರಿದ ಡಿ ಕೆ ಶಿವಕುಮಾರ್

ಇದನ್ನೂ ಓದಿ: ಸೆ 30 ರಂದು ರಾಹುಲ್ ಗಾಂಧಿ ಜೊತೆ ಆದಿವಾಸಿಗಳ ಸಂವಾದ .. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ

ಎಷ್ಟು ಜನರು ಬರಲಿದ್ದಾರೆಂದು ಗೊತ್ತಿಲ್ಲ. ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಗುರುವಾರ ರಾತ್ರಿಯೇ ಬಂದು ವಾಸ್ತವ್ಯ ಹೂಡಿ. ಬೆಳಗ್ಗೆ 8 ಗಂಟೆ ಹೊತ್ತಿಗೆಲ್ಲಾ ಅಂಬೇಡ್ಕರ್ ಭವನದಲ್ಲಿ ಇರಬೇಕು. ಬೆಳಗ್ಗೆ ಬರುತ್ತೇನೆಂದರೆ ಟ್ರಾಫಿಕ್ ಸಮಸ್ಯೆ ಇರುತ್ತದೆ ಎಂದು ಇದೇ ವೇಳೆ ಕೋರಿದರು.

ಪೊಲೀಸರಿಗೆ ಡಿಕೆಶಿ ವಾರ್ನ್: ಭಾರತ್ ಜೋಡೋ ಯಾತ್ರೆಯ ಫ್ಲೆಕ್ಸ್​ಗಳನ್ನು ಹರಿದಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಂಡು ಕೂಡಲೇ ಅವರನ್ನು ಅರೆಸ್ಟ್ ಮಾಡಬೇಕು. ಅರೆಸ್ಟ್ ಮಾಡಿಲ್ಲ ಅಂದ್ರೆ ನಮ್ಮ ಕೆಲಸ ನಾವೂ ಮಾಡ್ತೀವಿ. ನಾವು ಕದ್ದೇನೂ ಕಾರ್ಯಕ್ರಮ ಮಾಡ್ತಿಲ್ಲ, ಅವರ ರಾಜಕಾರಣ ಏನಿದೆ ಅದನ್ನು ಮಾಡಲಿ, ಈ ಹೇಡಿತನ ನಾವೂ ಮಾಡಿಲ್ಲ, ಆಕ್ಷನ್ ತೆಗೆದುಕೊಂಡಿಲ್ಲ ಅಂದ್ರೆ ನಮ್ಮ ರಾಜಕಾರಣ ನಾವೂ ಮಾಡ್ತೀವಿ ಎಂದು ಪೊಲೀಸರಿಗೆ ಡಿಕೆಶಿ ಎಚ್ಚರಿಕೆ ನೀಡಿದರು.

Last Updated :Sep 29, 2022, 5:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.