ETV Bharat / state

ನೇಪಾಳ, ಭೂತಾನ್​ಗೆ ಚಾಮರಾಜನಗರದಿಂದ ಹಾಲು ಪೂರೈಕೆ: ಸೇನೆ, ನೆರೆ ರಾಜ್ಯಗಳಿಗೂ ನಮ್ಮ 'ನಂದಿನಿ'

author img

By

Published : Jun 24, 2021, 12:21 PM IST

CHMUL Milk to Butan and Nepal
ಚಾಮರಾಜನಗರ ಹಾಲು ಒಕ್ಕೂಟ

ಮೂರು ವರ್ಷಗಳ ಹಿಂದೆ ಆರಂಭಗೊಂಡ ಚಾಮರಾಜನಗರ ಹಾಲು ಒಕ್ಕೂಟ ದೇಶ, ವಿದೇಶಗಳಿಗೆ ಹಾಲು ಪೂರೈಕೆ ಮಾಡುವ ಮೂಲಕ ಗಮನ ಸೆಳೆದಿದೆ.

ಚಾಮರಾಜನಗರ: ನೆರೆ ರಾಜ್ಯಗಳಲ್ಲಷ್ಟೇ ಅಲ್ಲದೇ ವಿದೇಶಗಳಿಂದಲೂ ನಂದಿನಿ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ. ನೇಪಾಳ, ಭೂತಾನ್​​ ದೇಶಗಳಿಗೆ ಇದೀಗ ಚಾಮರಾಜನಗರ ಹಾಲು ಒಕ್ಕೂಟ (ಚಾಮುಲ್) ಹಾಲು ಪೂರೈಕೆ ಮಾಡುತ್ತಿದೆ.

ಚಾಮುಲ್​​ನಿಂದ ಭೂತಾನ್​ಗೆ 22.5 ಲಕ್ಷ ಲೀ. ಗುಡ್ ಲೈಫ್ ಗೋಲ್ಡ್ ಹಾಲು ರಫ್ತಾಗುತ್ತಿದ್ದು, ನೇಪಾಳಕ್ಕೂ ಬೇಡಿಕೆಗೆ ತಕ್ಕಂತೆ ಹಾಲು ಪೂರೈಕೆ ಮಾಡಲಾಗ್ತಿದೆ. ಇದರೊಟ್ಟಿಗೆ, ಅಸ್ಸಾಂ‌ ರೈಫಲ್ಸ್, ಜಮ್ಮು ಮತ್ತು ಕಾಶ್ಮೀರದ ಸೈನಿಕರಿಗೂ ಹಾಲು ಪೂರೈಕೆ ಮಾಡಲಾಗ್ತಿದೆ. ಅಸ್ಸಾಂ ರೈಫಲ್ಸ್​​ಗೆ ಪ್ರತಿ ತಿಂಗಳು 4 ಲಕ್ಷ ಲೀ. ಗುಡ್ ಲೈಫ್ ಗೋಲ್ಡ್ ಹಾಲು ನೀಡಲಾಗ್ತಿದೆ.

ಇದನ್ನೂ ಓದಿ: ವಿದೇಶದಲ್ಲೂ ಜನಪ್ರಿಯ 'ನಂದಿನಿ' ಹಾಲು ಉತ್ಪನ್ನಗಳು: ಬಾಂಗ್ಲಾದಿಂದ 500 ಟನ್​​ ಹಾಲಿನ ಪುಡಿ ಬೇಡಿಕೆ

ಉಳಿದಂತೆ, ನೆರೆಯ ರಾಜ್ಯ ಆಂಧ್ರಪ್ರದೇಶಕ್ಕೆ ವಿಜಯವಜ್ರ ಹೆಸರಿನಲ್ಲಿ ಪ್ರತಿ ತಿಂಗಳು 12 ಲಕ್ಷ ಲೀ., ತೆಲಂಗಾಣ ಸರ್ಕಾರಕ್ಕೆ 4 ಲಕ್ಷ ಲೀ. ಹಾಲು ಪೂರೈಸಲಾಗುತ್ತಿದೆ. ಅಲ್ಲಿನ ಸರ್ಕಾರಗಳು ಈ ಹಾಲನ್ನು ಅಂಗನವಾಡಿ ಮಕ್ಕಳು, ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳಿಗೆ ವಿತರಿಸುತ್ತದೆ.

ಚಾಮರಾಜನಗರ ಹಾಲು ಒಕ್ಕೂಟ ಆರಂಭಗೊಂಡು ಕೇವಲ 3 ವರ್ಷವಷ್ಟೇ ಆಗಿದ್ದು, ವಿದೇಶಗಳಿಗೂ ಹಾಲು ರಫ್ತು ಮಾಡುವ ಮೂಲಕ ಗಮನ ಸೆಳೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.