ETV Bharat / state

ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಂತರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ ಪುಂಡರು

author img

By

Published : Apr 23, 2020, 1:32 PM IST

It is the police who have taught Individuals the right lesson
ಪುಂಡರಿಗೆ ಸರಿಯಾದ ಪಾಠ ಕಲಿಸಿದ ಪೊಲೀಸರು

ದೇವಸ್ಥಾನದ ಕಟ್ಟೆ ಮೇಲೆ ಗುಂಪು ಕಟ್ಟಿಕೊಂಡು ಕುಳಿತಿದ್ದ, ಜನರನ್ನು ಚದುರಿಸಲು ಹೋಗಿದ್ದ, ಪೊಲೀಸ್ ಪೇದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಸಿ, ಆವಾಜ್ ಹಾಕಿ ದರ್ಪ ತೋರಿ ದಿಗ್ಬಂಧನಗೊಳಿಸಿದ್ದ ಪುಂಡರಿಗೆ ಡಿವೈಎಸ್ ಸರಿಯಾದ ಪಾಠ ಕಲಿಸಿದ್ದಾರೆ.

ಬೀದರ್: ಲಾಕ್ ಡೌನ್ ಕರ್ತವ್ಯ ನಿರತ ಪೇದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದವರಿಗೆ ಪೊಲೀಸ್ ಅಧಿಕಾರಿಗಳು ಸರಿಯಾದ ಪಾಠ ಕಲಿಸಿದ್ದಾರೆ.

ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಗ್ರಾಮದಲ್ಲಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಗಸ್ತಿನಲ್ಲಿದ್ದ ಚಿಂತಾಕಿ ಠಾಣೆ ಪೇದೆ ಗುರಲಿಂಗ್, ಗ್ರಾಮದ ದೇವಸ್ಥಾನದ ಕಟ್ಟೆ ಮೇಲೆ ಗುಂಪು ಕಟ್ಟಿಕೊಂಡು ಕುಳಿತಿದ್ದ ಜನರನ್ನು ಚದುರಿಸಲು ಲಾಠಿ ಬೀಸಿದ್ದಾರೆ. ಈ ವೇಳೆಯಲ್ಲಿ ಗದ್ದಲ ನಿರ್ಮಾಣವಾಗಿ ವ್ಯಕ್ತಿಯೊಬ್ಬನ ತಲೆಗೆ ಗಾಯವಾಗಿದೆ.

ಪುಂಡರಿಗೆ ಸರಿಯಾದ ಪಾಠ ಕಲಿಸಿದ ಪೊಲೀಸರು

ಕೆಲವರು ಪೊಲೀಸ್ ಪೇದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಸಿ, ಆವಾಜ್ ಹಾಕಿ ದರ್ಪ ತೋರಿ ದಿಗ್ಬಂಧನಗೊಳಿಸಿದ್ದರು. ವಿಷಯ ತಿಳಿದು ಘಟನಾ ಸ್ಥಳಕ್ಕೆ ದೌಡಾಯಿಸಿದ ಡಿವೈಎಸ್ ಪಿ ಡಾ.ದೇವರಾಜ್. ಬಿ, ಸಿಪಿಐ ರಾಘವೇಂದ್ರ ಹಾಗೂ ಪಿಎಸ್ ಐ ಗಳಾದ ಜಗದೀಶ ನಾಯಕ, ಮಂಜುನಾಥ ಗೌಡ ಅವರ ತಂಡ ಪೊಲೀಸ್ ಪೇದೆಯನ್ನು ರಕ್ಷಿಸಿದ್ದಾರೆ.

ಪೇದೆ ಮತ್ತು ಅಧಿಕಾರಿಗಳಿಗೆ ಆವಾಜ್ ಹಾಕಿದ ನಂದಕುಮಾರ್, ಸಿದ್ರಾಮ್ ಹಾಗೂ ಶಿವರಾಜ್ ಎಂಬುವವರಿಂದ ನಡು ಬೀದಿಯಲ್ಲಿ ಪೇದೆಯ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.