ETV Bharat / state

ಬಳ್ಳಾರಿ: ಜಿಂಕೆಗಳ ಬಾಯಿಗೆ ಆಹಾರವಾದ ಬೆಳೆ.. ಕಂಗಾಲಾದ ರೈತ

author img

By

Published : Jul 25, 2022, 10:05 PM IST

ಜಿಂಕೆಗಳು
ಜಿಂಕೆಗಳು

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆ ಜಿಂಕೆಗಳ ಬಾಯಿಗೆ ಆಹಾರವಾಗುತ್ತಿದೆ. ಇದರಿಂದ ರೈತರು ರೋಸಿ ಹೋಗಿದ್ದಾರೆ.

ಬಳ್ಳಾರಿ: ಸತತ ಅತಿವೃಷ್ಠಿ ಅನಾವೃಷ್ಟಿಯಿಂದ ಕಂಗೆಟ್ಟ ರೈತರು ಈ ವರ್ಷ ಮುಂಗಾರು ಚೆನ್ನಾಗಿ ಆಗಿದ್ದರಿಂದ ಈಗಾಗಲೇ ಬಿತ್ತನೆ ಮಾಡಿದ್ದಾರೆ. ಅದರಂತೆ ಬಿತ್ತಿದ ಬೀಜಗಳು ಮೊಳಕೆ ಒಡೆದು ಬೆಳೆಯುತ್ತಿವೆ. ಈ ಮಧ್ಯೆ ಈಗ ರೈತರ ಬೆಳೆಗಳಿಗೆ ಜಿಂಕೆಗಳ ಕಾಟ ಶುರುವಾಗಿದೆ. ಇದರಿಂದ ಅನ್ನದಾತ ಬೇಸತ್ತು ಹೋಗಿದ್ದಾನೆ.

ಜಿಂಕೆಗಳ ಹಾವಳಿ ಬಗ್ಗೆ ರೈತರು ಮಾತನಾಡಿರುವುದು

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆ ಜಿಂಕೆಗಳ ಬಾಯಿಗೆ ಆಹಾರವಾಗುತ್ತಿದೆ. ಇದರಿಂದ ರೈತರು ರೋಸಿ ಹೋಗಿದ್ದಾರೆ. ತಾಲೂಕಿನ ಬೊಮ್ಮಲಾಪುರ, ನಾಗಲಾಪುರ, ರಾರಾವಿ, ನಾಡಂಗ, ರಾವಿಹಾಳ್, ಮಿಟ್ಟಿಸೂಗೂರು, ಬಂಡ್ರಾಳ್ ಕ್ಯಾಂಪ್, ಅಗಸನೂರು ಗ್ರಾಮಗಳಲ್ಲಿ ರೈತರು ತಮ್ಮ ಹೊಲಗಳಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.

ಬಿತ್ತನೆ ಮಾಡಬೇಕಾದ ಅನಿವಾರ್ಯತೆ: ಆದರೆ, ರೈತರು ತಮ್ಮ ಹೊಲಗಳಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಹತ್ತಿ, ಮೆಣಸಿನಕಾಯಿ, ತೊಗರಿ ಇನ್ನೂ ಮುಂತಾದ ಬೆಳೆಗಳಿಗೆ ಜಿಂಕೆಗಳು ಹಿಂಡು ಹಿಂಡು ಬಂದು ಬೆಳೆಗಳನ್ನು ತಿಂದು ಹೋಗುವುದರ ಜೊತೆಗೆ ಬೆಳೆಗಳನ್ನು ಹಾಳು ಮಾಡುತ್ತವೆ. ಬೆಳೆಗಳನ್ನು ತಿಂದು ಹಾಕಿದ್ದರಿಂದ ರೈತರು ತಮ್ಮ ಜಮೀನುಗಳಲ್ಲಿ ಮತ್ತೆ ಬಿತ್ತನೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಈಗಾಗಲೇ ಸಾವಿರಾರು ರೂ. ಖರ್ಚು ಮಾಡಿದ ರೈತರು ಈಗ ಮತ್ತೆ ಬಿತ್ತನೆ ಬೀಜಗಳನ್ನು ಖರೀದಿ ಮಾಡಿ ಬಿತ್ತನೆ ಮಾಡಬೇಕಾಗಿದೆ.

ಬೆಳೆಗಳು ಜಿಂಕೆಗಳ ಪಾಲು: ಈ ಭಾಗದಲ್ಲಿ ಪ್ರತಿವರ್ಷ ಇದೇ ಸಮಸ್ಯೆ ಅನುಭವಿಸುತ್ತಿರುವ ರೈತರು ಜಿಂಕೆಗಳ ಕಾಟಕ್ಕೆ ಬೇಸತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಂಕೆಗಳ ಕಾಟದಿಂದ ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ರೈತರಿಗೆ ಬೆಳೆದ ಬೆಳೆಗಳು ಕೈಗೆ ಸಿಗುವ ಮುನ್ನವೇ ಜಿಂಕೆಗಳ ಪಾಲಾಗುತ್ತಿವೆ. ಇತ್ತ ರೈತರು ಕೂಡ ಜಿಂಕೆಗಳ ಕಾಟಕ್ಕೆ ಬೇಸತ್ತು ಹೋಗಿದ್ದಾರೆ.

ಓದಿ: ಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಬದಲು, ಜೆ. ಪಿ. ನಡ್ಡಾ ಬರುತ್ತಾರೆ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.