ETV Bharat / state

ಪಿಎಸ್​ಐ ಅಕ್ರಮ: 'ಕೋರ್ಟ್‌ ತೀರ್ಪಿನ ಬಳಿಕ ಸರ್ಕಾರದ ನಿಲುವು ಪ್ರಕಟ'

author img

By

Published : Dec 23, 2022, 7:37 PM IST

Home Minister Araga Gyanendra
ಪಿಎಸ್​ಐ ಆಕ್ರಮ ಕೋರ್ಟ್‌ ತೀರ್ಪು ಬಂದ ಬಳಿಕ ಸರ್ಕಾರದ ನಿಲುವು ಪ್ರಕಟಿಸುತ್ತದೆ:ಸಚಿವ ಅರಗ ಜ್ಞಾನೇಂದ್ರ

ಪಿಎಸ್ಐ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಮನವಿ ಸ್ವೀಕರಿಸಿ, ಈ ಕುರಿತು ಸಿಒಡಿ‌ ವರದಿ ಮತ್ತು ಕೋರ್ಟ್‌ ತೀರ್ಪು ಬಂದ ಬಳಿಕ ಸರ್ಕಾರ ನಿಲುವು ಪ್ರಕಟಿಸುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಳಗಾವಿ: 545 ಪಿಎಸ್ಐ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿ, ಅಭ್ಯರ್ಥಿಗಳ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿ, ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ. ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇತ್ತೀಚೆಗೆ ಓರ್ವ ವ್ಯಕ್ತಿಯ ಬಂಧನವಾಗಿದೆ. ಸಿಒಡಿ‌ ವರದಿ ಮತ್ತು ಕೋರ್ಟ್‌ನಲ್ಲಿ ತೀರ್ಪು ಬಂದ ಬಳಿಕ ಸರ್ಕಾರ ನಿಲುವು ಪ್ರಕಟಿಸುತ್ತದೆ ಎಂದರು.

ಲವ್ ಜಿಹಾದ್ ಪ್ರಕರಣ ಕುರಿತು ಮಾತನಾಡುತ್ತಾ, ಮತಾಂತರ ನಿಷೇಧ ಕಾಯ್ದೆಯಲ್ಲಿ ಲವ್ ಜಿಹಾದ್ ಅಡಕ‌ವಾಗಿದೆ. ಒಂದು ಧರ್ಮದವರು ಮತ್ತೊಂದು ಧರ್ಮವನ್ನು ಅನುಸರಿಸುವ ಮೊದಲು ಸರ್ಕಾರಕ್ಕೆ ತಿಳಿಸಬೇಕು. ಏಕಾಏಕಿ ಮದುವೆ ಆಗಲು ಬರುವುದಿಲ್ಲ. ಸದ್ಯ ಎರಡ್ಮೂರು ಲವ್ ಜಿಹಾದ್ ಪ್ರಕರಣಗಳು ನಡೆದಿವೆ ಎಂದು ತಿಳಿಸಿದರು.

ಕೋವಿಡ್ ಕುರಿತು ಪ್ರತಿಕ್ರಿಯಿಸಿ, ಕೋವಿಡ್ ಅ​ನ್ನು ಜನರು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸಾವಿನ ಸಂಖ್ಯೆ ತಡೆಯಲು ಆಗಲ್ಲ. ಉಡಾಫೆ ಮಾಡಬಾರದು. ಜನರು ಪ್ಯಾನಿಕ್ ಆಗಬಾರದು. ಈ ಬಗ್ಗೆ ಪೊಲೀಸರಿಗೆ ಸೂಚನೆ ಕೊಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

ಇದನ್ನೂ ಓದಿ: ಮೈಸೂರು ವಿವಿ ಕುಲಪತಿ ನೇಮಕ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.