ETV Bharat / state

ಗಣೇಶೋತ್ಸವಕ್ಕೆ ಕೊರೊನಾ ಕರಿ ನೆರಳು : ಸಂಕಷ್ಟಕ್ಕೆ ಸಿಲುಕಿದ ಗಣೇಶಮೂರ್ತಿ ತಯಾರಕರು

author img

By

Published : Sep 5, 2021, 5:00 PM IST

ganesha idols manufacturers  facing demand scarcity
ಗಣೇಶ ಮೂರ್ತಿಗಳಿಗೆ ಕುಗ್ಗಿದ ಬೇಡಿಕೆ

ಗಣೇಶ ಮೂರ್ತಿ ತಯಾರಕರಿಗೆ ಶೇ.40ರಷ್ಟು ಹೆಚ್ಚು ಆರ್ಥಿಕ ಹೊರೆ ಬೀಳ್ಳುತ್ತಿದೆ. ಗಣೇಶ ಮೂರ್ತಿ ತಯಾರಕರು ತೀವ್ರ ಆರ್ಥಿಕ ತೊಂದರೆಗೆ ಸಿಲುಕಿದ್ದಾರೆ‌. ಈ ಹಿನ್ನೆಲೆ ಸರ್ಕಾರ ಗಣೇಶ ಮೂರ್ತಿ ತಯಾರಕರಿಗೆ ಪರಿಹಾರ ನೀಡಬೇಕೆಂದು ವಿಗ್ರಹಗಳ ತಯಾರಕರು ಹಾಗೂ ಮಾರಾಟಗಾರರು ಒತ್ತಾಯಿಸಿದ್ದಾರೆ..

ಬೆಳಗಾವಿ : ಕಳೆದ ವರ್ಷದಂತೆ ಈ ವರ್ಷವೂ ಗಣೇಶ ಉತ್ಸವಕ್ಕೆ ಕೊರೊನಾ ಕರಿ ನೆರಳು ಕವಿದಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಸಾಕಷ್ಟು ನಿಬಂಧನೆ ಹೇರಿದ ಹಿನ್ನೆಲೆ ಗಣೇಶ ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರದಿಂದ ಪರಿಹಾರ ವಿತರಣೆ ಮಾಡುವಂತೆ ಆಗ್ರಹಿಸಿದ್ದಾರೆ.

ಸಂಕಷ್ಟದಲ್ಲಿ ಸಿಲುಕಿದ ಗಣೇಶ ಮೂರ್ತಿ ತಯಾರಕರು

ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವತಃ ಬೆಳಗಾವಿಗೆ ಬಂದು ಸಾರ್ವಜನಿಕ ಗಣೇಶ ಉತ್ಸವವನ್ನು ಪ್ರಾರಂಭಿಸಿದ್ದರು. ಅಂದಿನಿಂದ ಇಂದಿನವರೆಗೆ ಪ್ರತಿವರ್ಷ ಅದ್ದೂರಿಯಾಗಿ ಗಣೇಶ ಉತ್ಸವ ನಡೆಯುತ್ತಾ ಬಂದಿದೆ. ಬೆಳಗಾವಿ ನಗರವೊಂದರಲ್ಲಿಯೇ 370ಕ್ಕೂ ಹೆಚ್ಚು ಗಣೇಶ ಉತ್ಸವ ಮಂಡಳಗಳಿವೆ.

ಇಲ್ಲಿನ ಗಣೇಶ ಉತ್ಸವದ ಸಡಗರ ನೋಡುವುದೇ ಒಂದು ಸೊಬಗು. ಗಣೇಶ ಉತ್ಸವ ವಿಸರ್ಜನೆ ಮೆರವಣಿಗೆಯೇ 24 ಗಂಟೆಗೂ ಹೆಚ್ಚು ಕಾಲ ನಡೆದು, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆಯುತ್ತಿದ್ದವು. ಆದರೆ, ಕಳೆದ ಎರಡು ವರ್ಷಗಳಿಂದ ಬೆಳಗಾವಿಯ ಗಣೇಶೋತ್ಸವದ ಮೇಲೆ ಕೊರೊನಾ ವೈರಸ್​​ನ ಕೆಟ್ಟ ಕಣ್ಣು ಬಿದ್ದು, ಸಂಭ್ರಮ ಕಣ್ಮರೆಯಾಗಿದೆ.

ganesha idols manufacturers  facing demand scarcity
ಗಣೇಶ ಮೂರ್ತಿಗಳಿಗೆ ಕುಗ್ಗಿದ ಬೇಡಿಕೆ

ಅತ್ಯಂತ ಸಡಗರದಿಂದ ನಡೆಯುತ್ತಿದ್ದ ಉತ್ಸವ ಈ ಸಲ ಸರಳವಾಗಿ ನಡೆಯುತ್ತಿದೆ. ಪರಿಣಾಮ, ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ‌. ಈ ಮೊದಲು 2 ಸಾವಿರಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ತಯಾರಕರು, ಇದೀಗ 100ರಿಂದ 200 ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುವ ಸ್ಥಿತಿ ತಲುಪಿಸಿದ್ದಾರೆ.

ಮೂರ್ತಿ ತಯಾರಿಸಲು ಬೇಕಾಗುವ ಕೆಲ ವಸ್ತುಗಳು ಮಹಾರಾಷ್ಟ್ರದ ನಾಗ್ಪುರ ಸೇರಿದಂತೆ ಇತರ ಪ್ರದೇಶಗಳಿಂದ ಆಮದಾಗುತ್ತಿದ್ದವು. ಆದ್ರೆ, ಈ ವರ್ಷ ಮಹಾರಾಷ್ಟ್ರದಲ್ಲಿ ಅತಿಯಾದ ಮಳೆಗೆ ಅಲ್ಲಿಂದ ಬರುವ ಗಣಪತಿ ಮೂರ್ತಿಗಳು, ಅದರ ಕಚ್ಚಾವಸ್ತುಗಳು ಕಡಿಮೆ ಪ್ರಮಾಣದಲ್ಲಿ ಸಿಗುತ್ತಿವೆ.

ಇದರಿಂದಾಗಿ ಗಣೇಶ ಮೂರ್ತಿ ತಯಾರಕರಿಗೆ ಶೇ.40ರಷ್ಟು ಹೆಚ್ಚು ಆರ್ಥಿಕ ಹೊರೆ ಬೀಳ್ಳುತ್ತಿದೆ. ಗಣೇಶ ಮೂರ್ತಿ ತಯಾರಕರು ತೀವ್ರ ಆರ್ಥಿಕ ತೊಂದರೆಗೆ ಸಿಲುಕಿದ್ದಾರೆ‌. ಈ ಹಿನ್ನೆಲೆ ಸರ್ಕಾರ ಗಣೇಶ ಮೂರ್ತಿ ತಯಾರಕರಿಗೆ ಪರಿಹಾರ ನೀಡಬೇಕೆಂದು ವಿಗ್ರಹಗಳ ತಯಾರಕರು ಹಾಗೂ ಮಾರಾಟಗಾರರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.