ETV Bharat / state

ಗುಜರಾತಲ್ಲಿ ಆಪ್ ನಮ್ಮ ಮತ ಸೆಳೆದಿದೆ; ಕರ್ನಾಟಕದಲ್ಲಿ ಇದು ಆಗಲ್ಲ: ಸತೀಶ್ ಜಾರಕಿಹೊಳಿ

author img

By

Published : Dec 8, 2022, 6:11 PM IST

Satish Jarakiholi
ಗುಜರಾತ್​ಲ್ಲಿ ಆಪ್ ನಮ್ಮ ಮತ ಸೆಳೆದಿದೆ; ಕರ್ನಾಟಕದಲ್ಲಿ ಇದು ಆಗಲ್ಲ: ಸತೀಶ್ ಜಾರಕಿಹೊಳಿ

ಹಿಮಾಚಲ ಪ್ರದೇಶದಲ್ಲಿ ನಾವು ಗೆದ್ದಿದ್ದೇವೆ. ಆದರೆ ಗುಜರಾತ್​ನಲ್ಲಿ ಇಷ್ಟು ಅಂತರದಿಂದ ಸೋಲುತ್ತೇವೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ.- ಸತೀಶ್‌ ಜಾರಕಿಹೊಳಿ

ಬೆಂಗಳೂರು: ಗುಜರಾತ್​ನಲ್ಲಿ ಕಾಂಗ್ರೆಸ್​ಗೆ ಇಷ್ಟು ಕಡಿಮೆ ಸ್ಥಾನ ಬರಬಹುದು ಎಂದು ಅಂದುಕೊಂಡಿರಲಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಆಮ್ ಆದ್ಮಿ ಪಾರ್ಟಿ ಗುಜರಾತ್​ನ ಕಾಂಗ್ರೆಸ್ ಓಟ್ ಬ್ಯಾಂಕು ಪಡೆಯುವಲ್ಲಿ ಯಶಸ್ವಿಯಾಗಿದೆ. ಆಮ್ ಆದ್ಮಿ ಇಡೀ ಗುಜರಾತ್​ನಲ್ಲಿ ನಮ್ಮಿಂದ 10-15 ಸಾವಿರ ಮತಗಳನ್ನು ಪಡೆಯುವಲ್ಲಿ ಕೂಡ ಯಶಸ್ವಿ ಆಗಿದೆ. ಇವರು ಸೆಕ್ಯುಲರ್ ಮತಗಳನ್ನು ಪಡೆಯುತ್ತಾರೆ. ಆದರೆ ಕರ್ನಾಟಕದಲ್ಲಿ ಇದರ ಪರಿಣಾಮ ಆಗುವುದಕ್ಕೆ ಸಾಧ್ಯವಿಲ್ಲ ಎಂದರು.

ಹಿಮಾಚಲ ಪ್ರದೇಶದಲ್ಲಿ ನಾವು ಗೆದ್ದಿದ್ದೇವೆ. ಆದರೆ ಗುಜರಾತ್​ನಲ್ಲಿ ಇಷ್ಟು ಅಂತರದಿಂದ ಸೋಲುತ್ತೇವೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಆಮ್ ಆದ್ಮಿ ಪಕ್ಷ 7 ಸ್ಥಾನವನ್ನು ಪಡೆದರೂ ಸಹ ನಮ್ಮ ಮತಗಳನ್ನು ಪಡೆದಿದ್ದಾರೆ. ಮುಂದುವರೆದು, ಜೆಡಿಎಸ್​ನಿಂದ ನಮಗೆ ಏನೂ ತೊಂದರೆ ಇಲ್ಲ. ಅವರು ಗೆಲ್ಲುವ ಕಡೆ ಅವರು ಗೆಲ್ಲುತ್ತಾರೆ. ನಾವು ಗೆಲ್ಲುವ ಕಡೆ ನಾವೇ ಗೆಲ್ಲುತ್ತೇವೆ. ನಮಗೂ ಜೆಡಿಎಸ್​ಗೂ ಕ್ಲಾಶ್ ಆಗುವಂತಹ ಸಂಭವ ಕಡಿಮೆ ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ಹೇಳಿಕೆ

ಈಗ ಪಕ್ಕದ ರಾಜ್ಯಗಳು ಕೇರಳ, ತಮಿಳುನಾಡು, ಆಂಧ್ರದಲ್ಲಿ ಯಾವುದೇ ಹೊಸ ಪಕ್ಷ ಬಂದರೂ ಸಾಮಾನ್ಯವಾಗಿ ಸೆಕ್ಯುಲರ್ ವೋಟ್​ಗಳೇ ಹೆಚ್ಚು ಬರುವಂಥದ್ದು. ಅಲ್ಲಿ ಮುಸ್ಲಿಂ ಆಗಬಹುದು ಯಾರೇ ಆಗಬಹುದು ಎಲ್ಲರಿಗೂ ಒಂದೇ ಸ್ಥಾನಮಾನ. ನಾವು ಮೊದಲು ಗೆಲ್ಲುವಂತಹವರಿಗೆ ಟಿಕೆಟ್ ಕೊಡಬೇಕು. ಬಿಜೆಪಿಯವರು ಇದೇ ತಂತ್ರ ಬಳಸಿಯೇ ಗೆದ್ದಿರುವುದು. ಮೋದಿ ಅವರು ಆಂಬುಲೆನ್ಸ್ ಬಂದಾಗ ದಾರಿ ಬಿಡೋದು ಈ ತರಹ ಸ್ಟ್ಯಾಟರ್ಜಿ ಮಾಡುತ್ತಾರೆ. ಆದರೆ ನಮ್ಮ ಕಾಂಗ್ರೆಸ್​ನವರು ಈ ತರಹ ಮಾಡುವುದಿಲ್ಲ ಎಂದು ಕುಟುಕಿದರು.

ಗುಜರಾತ್​ಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಹೇಳುದಾದರೆ, ಅಲ್ಲಿನ ಸಂಸ್ಕೃತಿ ರಾಜಕೀಯ ಬೇರೆ, ಅಲ್ಲಿನ ಆಚಾರ ವಿಚಾರಗಳೇ ಬೇರೆ. ಜೊತೆಗೆ ಉತ್ತರ ಭಾರತ ಚುನಾವಣೆಯೇ ಬೇರೆ ಇದೇ. ದಕ್ಷಿಣ ಭಾರತ ಚುನಾವಣೆಯೇ ಬೇರೆ ಇದೇ. ಆ ರಾಜ್ಯದ ಗೆಲುವು ನಮ್ಮ ರಾಜ್ಯಕ್ಕೆ ಪರಿಣಾಮ ಬೀರಲ್ಲ ಎಂದು ಹೇಳಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ, ಸಂದೇಹವೇ ಬೇಡ: ಸಚಿವ ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.