ETV Bharat / state

ನೆಲಮಂಗಲ: ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್​ ಮುಖಂಡರು

author img

By

Published : Feb 22, 2023, 6:31 PM IST

Updated : Feb 23, 2023, 6:10 AM IST

ಕಾಂಗ್ರೆಸ್​ ಮುಖಂಡರು ಬಿಜೆಪಿ ಸೇರ್ಪಡೆ
ಕಾಂಗ್ರೆಸ್​ ಮುಖಂಡರು ಬಿಜೆಪಿ ಸೇರ್ಪಡೆ

ನೆಲಮಂಗಲದ ಕಾಂಗ್ರೆಸ್ ಮುಖಂಡರು ​ಪಕ್ಷ ತೊರೆದು ಇಂದು ಬಿಜೆಪಿ ಸೇರಿದ್ದಾರೆ.

ಬೆಂಗಳೂರು: "ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಿರುವುದು 2023ರ ಚುನಾವಣೆಯ ದಿಕ್ಸೂಚಿಯಾಗಿದೆ. ನೆಲಮಂಗಲ ಕಾಂಗ್ರೆಸ್​ಗೆ ಶಕ್ತಿಯಾಗಿದ್ದವರೆಲ್ಲಾ ಇಂದು ಬಿಜೆಪಿಗೆ ಬಂದಿದ್ದು ಅಲ್ಲಿ ಕಾಂಗ್ರೆಸ್ ಇಂದೇ ಸೋತಂತಾಗಿದೆ" ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ನೆಲಮಂಗಲ ಕಾಂಗ್ರೆಸ್ ಮುಖಂಡರಾದ ರೇಣುಕಾ ಪ್ರಸಾದ್, ತುಳಸಿರಾಮ್, ಸಪ್ತಗಿರಿ ಶಂಕರ್ ನಾಯಕ್, ಉಮೇಶ್ ಬಿಜೆಪಿ ಸೇರ್ಪಡೆಯಾದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪಕ್ಷದ ಧ್ವಜ ನೀಡಿ ಬಿಜೆಪಿಗೆ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಸಚಿವ ಸುಧಾಕರ್, "ನೆಲಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ತೊರೆದು ಆತ್ಮೀಯ ರೇಣುಕಾ ಪ್ರಸಾದ್ ಬಂದಿದ್ದಾರೆ. ಎರಡು ದಶಕ ಕಾಂಗ್ರೆಸ್​ನಲ್ಲಿ ಕೆಲಸ ಮಾಡಿದ್ದು, ಡಿಕೆಶಿ ಒಡನಾಡಿಯಾಗಿದ್ದಾರೆ ಅವರು ಬಂದಿದ್ದು ಸಂತಸ ತಂದಿದೆ. ತುಳಸಿರಾಮು, ಸಪ್ತಗಿರಿ ಶಂಕರನಾಯಕ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉಮೇಶ್ ಬಂದಿದ್ದಾರೆ. ಇವರೆಲ್ಲಾ ನೆಲಮಂಗಲ ಕಾಂಗ್ರೆಸ್​ಗೆ ಶಕ್ತಿಯಾಗಿದ್ದರು ಅವರೆಲ್ಲಾ ಈಗ ಬಿಜೆಪಿಗೆ ಬಂದಿದ್ದಾರೆ" ಎಂದರು.

ನಂತರ ಮಾತನಾಡಿದ ಮುನಿರತ್ನ, "ನಾವು ಹಿಂದೆ ತೆಗೆದುಕೊಂಡ ನಿರ್ಧಾರ ನೀವು ತಡವಾಗಿ ತೆಗೆದುಕೊಂಡಿದ್ದೀರಿ, ಆದರೂ ಒಳ್ಳೆಯದಾಗಲಿದೆ. ನೆಮ್ಮದಿ, ಸಂತೋಷವಾಗಿರಬೇಕಾದಲ್ಲಿ ಬಿಜೆಪಿಗೆ ಬರಬೇಕು, ಇಲ್ಲಿ ಬೇಧಭಾವ ಇಲ್ಲದೇ ನೋಡಿಕೊಳ್ಳುತ್ತಾರೆ. ಇಂತಹ ಪ್ರೀತಿ, ಗೌರವ ಸಿಗುವುದು ಬಿಜೆಪಿಯಲ್ಲಿ ಮಾತ್ರ. ಈ ಬಾರಿ ಕಾಂಗ್ರೆಸ್​ 60 ಸ್ಥಾನವನ್ನೂ ದಾಟಲ್ಲ, ಸರ್ಕಾರ ಮಾಡುವುದು ನಾವೇ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸೇರಿದ ರೇಣುಕಾಪ್ರಸಾದ್ ಹೇಳಿಕೆ: ಪಕ್ಷ ಸೇರಿದ ನಂತರ ಮಾತನಾಡಿದ ರೇಣುಕಾಪ್ರಸಾದ್, "ಕಾಂಗ್ರೆಸ್ ಅಧ್ಯಕ್ಷ ಕಟೀಲ್ ಎಂದು ಹೇಳಿ ನಂತರ ಬಿಜೆಪಿ ಎಂದು ತಿದ್ದಿಕೊಳ್ಳುತ್ತಾ, ನಾವು ಕಾಂಗ್ರೆಸ್​ನಲ್ಲಿ ಪಿಲ್ಲರ್​ಗಳಂತೆ ಕೆಲಸ ಮಾಡಿದ್ದೆವು. ಮನನೊಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದೇವೆ ಎಂದು ಗದ್ಗದಿತರಾದರು. ಈ ವೇಳೆ ಬಂದ ಮುನಿರತ್ನ ಇದು ಆನಂದಭಾಷ್ಪ ಎಂದು ಪರಿಸ್ಥಿತಿ ನಿಭಾಯಿಸಿದರು. ನಂತರ ಮಾತು ಮುಂದುವರೆಸಿದ ರೇಣುಕಾ ಪ್ರಸಾದ್, ಮೋದಿ ನಾಯಕತ್ವ, ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವ ಒಪ್ಪಿ ಬಿಜೆಪಿಗೆ ಬಂದಿದ್ದೇನೆ" ಎಂದರು.

"ದಿನದ 24 ಗಂಟೆಯೂ ಪಕ್ಷಕ್ಕೆ ಕೆಲಸ ಮಾಡುತ್ತಾರೆ. ನಮ್ಮ ಮಂಗಳೂರು ನಾಯಕರು ವಿಶೇಷ ವಿಮಾನದಲ್ಲಿ ಓಡಾಡುತ್ತಿದ್ದರು. ಇವರು ಹಗಲು ರಾತ್ರಿ ಓಡಾಡಿ ಪಕ್ಷ ಕಟ್ಟುತ್ತಿದ್ದಾರೆ. ಇವರಿಗೆ ನಾವು ಸಾಥ್ ಕೊಟ್ಟು ಪಕ್ಷ ಅಧಿಕಾರಕ್ಕೆ ಬರಲು ಸಹಕರಿಸಲಿದ್ದೇವೆ. ನೆಲಮಂಗಲ ಮಾತ್ರವಲ್ಲ ರಾಜ್ಯದಲ್ಲಿ ಬಿಜೆಪಿ ಗೆಲ್ಲಲಿದೆ. ಹಗಲು ರಾತ್ರಿ ನಿಮ್ಮ ಜೊತೆ ಸೇರಿ ಕೆಲಸ ಮಾಡಲಿದ್ದೇವೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಈಗ ಕೋವಿಡ್ ಚಿತ್ರ ಬಿಡುಗಡೆ ಮಾಡಲು ಹೊರಟಿದ್ದಾರೆ. ಕೋವಿಡ್ ಕಾಂಗ್ರೆಸ್ ನವರಿಗೆ ಮಾತ್ರ ತಂದಿದ್ದಲ್ಲ, ಇಡೀ ದೇಶಕ್ಕೆ ಬಂದಿತ್ತು, ಅದೇನು ಮಾಡುತ್ತಾರೋ ಮಾಡಲಿ, ಅವರ ನಡೆ ಸರಿಯಲ್ಲ" ಎಂದರು.

ಸಪ್ತಗಿರಿ ಶಂಕರ್​ ನಾಯಕ್​ ಪ್ರತಿಕ್ರಿಯೆ: ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಸಪ್ತಗಿರಿ ಶಂಕರ ನಾಯಕ್ ಮಾತನಾಡಿ, ಯಾರಿಗೇ ಟಿಕೆಟ್ ಕೊಟ್ಟರೂ ಬಿಜೆಪಿ ಬಾವುಟ ನೆಲಮಂಗಲದಲ್ಲಿ ಹಾರಿಸಲಿದ್ದೇವೆ ಎಂದರು. ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಅನಂತ್ ನಾಗ್ ಗೈರಾಗಿದರು. ಇಂದಿನ ಪಕ್ಷ ಸೇರ್ಪಡೆಯಿಂದ ದೂರ ಉಳಿದ ಅನಂತ್ ನಾಗ್ ಕಾರಣ ತಿಳಿಸಿಲ್ಲ, ಆದರೆ ಮುಂದಿನ ವಾರ ಪಕ್ಷ ಸೇರುವ ಕುರಿತು ಪಕ್ಷಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. 4.30 ರಿಂದ 5.15 ರವರೆಗೂ ಅನಂತ್ ನಾಗ್ ಅವರಿಗೆ ಕಾಯುತ್ತಾ ಕುಳಿತ ನಾಯಕರು ಕಡೆಯದಾಗಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಆರಂಭಿಸಿದರು.

ಇದನ್ನೂ ಓದಿ: ಬಿಜೆಪಿಯಿಂದ ಕೆಲವರು ಕಾಂಗ್ರೆಸ್​ಗೆ ಬರ್ತಾರೆ, ಹೆಸರು ಹೇಳಲ್ಲ: ಸಿದ್ದರಾಮಯ್ಯ

Last Updated :Feb 23, 2023, 6:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.