ETV Bharat / state

ಮಹಾರಾಷ್ಟ್ರದ ಮಾರುಕಟ್ಟೆಗೆ ಕೆಎಂಎಫ್​​ನ ನಂದಿನಿ ಉತ್ಪನ್ನಗಳು ಎಂಟ್ರಿ!

author img

By

Published : Aug 3, 2021, 1:35 PM IST

Nandini milk brand
ಕೆಎಂಎಫ್​​ನ ನಂದಿನಿ ಉತ್ಪನ್ನ

ಕರ್ನಾಟಕ ಹಾಲು ಒಕ್ಕೂಟವು ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಇದೀಗ ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಹಾಲು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೆಎಂಎಫ್ ಮುಂದಾಗಿದೆ.

ಮುಂಬೈ/ಬೆಂಗಳೂರು: ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬ್ರಾಂಡ್ ಹೊಂದಿರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಸೋಮವಾರ ಮಹಾರಾಷ್ಟ್ರದ ವಿದರ್ಭ ಮಾರುಕಟ್ಟೆಗೆ ಪದಾರ್ಪಣೆ ಮಾಡಿದೆ. 1,000 ಕೋಟಿ ರೂಪಾಯಿ ವೆಚ್ಚದಲ್ಲಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಹಾಲು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೆಎಂಎಫ್ ಮುಂದಾಗಿದೆ.

ಕೆಎಂಎಫ್ ಭಾನುವಾರ ತನ್ನ ನಂದಿನಿ ಬ್ರಾಂಡ್‌ನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿದರ್ಭ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ನಾಗ್ಪುರ, ವಾರ್ಧಾ, ಯಾವತ್ಮಲ್ ಮತ್ತು ಚಂದ್ರಪುರದಲ್ಲಿ ಮಾರುಕಟ್ಟೆಗಳಿಗೂ ವಿಸ್ತರಿಸಲು ಯೋಜಿಸುತ್ತಿದೆ. ಇದರೊಂದಿಗೆ, ಕರ್ನಾಟಕದ ವಿಜಯಪುರದ ಡೈರಿಯಲ್ಲಿ ಸಂಸ್ಕರಿಸಿದ ಹಾಲು ಸುಮಾರು 650 ಕಿ.ಮೀ. ಸಾಗಿ ನಂತರ ಚಂದ್ರಪುರವನ್ನು ತಲುಪುತ್ತದೆ. ಅಲ್ಲಿ ಅದನ್ನು ಸ್ಥಳೀಯ ಡೈರಿ ಬ್ರಾಂಡ್ ಸ್ವಪ್ನ ಪೂರ್ತಿಯ ಸಹಯೋಗದೊಂದಿಗೆ ಪ್ಯಾಕ್ ಮಾಡಲಾಗುತ್ತದೆ.

ನಾವು ಮುಂಬೈನಲ್ಲಿ ಎರಡು ಮತ್ತು ಗೋವಾ, ಪುಣೆಯಲ್ಲಿ ತಲಾ ಒಂದು ಪ್ಲಾಂಟ್ ಖರೀದಿಸಲು ಯೋಜಿಸುತ್ತಿದ್ದೇವೆ. ಡೈರಿ ಸಂಸ್ಕರಣಾ ಘಟಕಗಳನ್ನು ಸ್ವಾಧೀನಪಡಿಸಿಕೊಂಡು ನಾವು ₹1,000 ಕೋಟಿ ವೆಚ್ಚದಲ್ಲಿ ವಿಸ್ತರಣಾ ಯೋಜನೆಯನ್ನು ರೂಪಿಸಿದ್ದೇವೆ ಎಂದು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಹೇಳಿದ್ದಾರೆ.

ಸದ್ಯ, ಕೆಎಂಎಫ್ ಕರ್ನಾಟಕ, ಗೋವಾ ಮತ್ತು ಮುಂಬೈ, ಪುಣೆ, ಸೊಲ್ಲಾಪುರ, ಚೆನ್ನೈ, ಹೈದರಾಬಾದ್, ವಿಜಯವಾಡ ಸೇರಿದಂತೆ ದೇಶದ ಇತರ ನಗರಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಇದನ್ನೂ ಓದಿ: ನೆಚ್ಚಿನ ನಾಯಕರಿಗೆ ಸಚಿವಸ್ಥಾನ ನೀಡುವಂತೆ ಅಭಿಮಾನಿಗಳಿಂದ ದೀರ್ಘದಂಡ ನಮಸ್ಕಾರ

23,600 ಗ್ರಾಮಗಳು, 14,500 ಹಾಲು ಉತ್ಪಾದಕ ಸಹಕಾರ ಸಂಘಗಳು, 14 ಜಿಲ್ಲಾ ಹಾಲು ಒಕ್ಕೂಟಗಳು, 25 ಲಕ್ಷ ಹಾಲು ಉತ್ಪಾದಕ ಸದಸ್ಯರು 90.62 ಲಕ್ಷ ಲೀಟರ್ ಹಾಲು ಸಂಗ್ರಹಣೆಯೊಂದಿಗೆ ಪ್ರತಿದಿನ ರೈತರಿಗೆ ₹ 24 ಕೋಟಿಗಳನ್ನು ಕೆಎಂಎಫ್ ಪಾವತಿಸುತ್ತದೆ. ಕೆಎಂಎಫ್ 140ಕ್ಕೂ ಹೆಚ್ಚು ಹಾಲಿನ ಉತ್ಪನ್ನಗಳನ್ನು ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.