ETV Bharat / state

ರಂಗೇರುತ್ತಿದೆ ಚುನಾವಣಾ ಕಣ: ಹೆಲಿಕಾಪ್ಟರ್​​ಗಳಿಗೆ ಭಾರಿ ಬೇಡಿಕೆ

author img

By

Published : Apr 17, 2023, 7:00 PM IST

huge-demand-for-helicopters-for-election-purpose
ಚುನಾವಣಾ ಕಣ ರಂಗೇರುತ್ತಿದ್ದಂತೆ ಹೆಲಿಕಾಪ್ಟರ್​​ಗಳಿಗೆ ಭಾರೀ ಬೇಡಿಕೆ

ಚುನಾವಣೆಯ ಪ್ರಚಾರಕ್ಕಾಗಿ ರಾಜಕಾರಣಿಗಳು 150 ಹೆಲಿಕಾಪ್ಟರ್​ಗಳು ಹಾಗೂ ಮಿನಿ ವಿಮಾನಗಳನ್ನು ರಾಜಕಾರಣಿಗಳು ಬುಕ್ಕಿಂಗ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದಂತೆ ಹೆಲಿಕಾಪ್ಟರ್​​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ​ನಾಯಕರುಗಳು ತುರ್ತು ಪ್ರಚಾರ, ಪ್ರವಾಸಕ್ಕೆ ಹೆಲಿಕಾಪ್ಟರ್​ಗಳತ್ತ ಮುಖ ಮಾಡಲಾರಂಭಿಸಿದ್ದಾರೆ.

ರಾಜ್ಯದಲ್ಲಿ 100ಕ್ಕೂ ಅಧಿಕ ಹೆಲಿಕಾಪ್ಟರ್​ಗಳು ಹಾಗೂ ಮಿನಿ ವಿಮಾನಗಳಿವೆ. ಚುನಾವಣೆ ಪ್ರಚಾರ ಮತ್ತು ಸ್ಟಾರ್ ಪ್ರಚಾರಕರಿಗಾಗಿ ಹೆಲಿಕಾಪ್ಟರ್​ಗಳಿಗೆ ಬೇಡಿಕೆ ಬಂದಿದ್ದು, ರಾಜಕಾರಣಿಗಳು ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಹೆಲಿಕಾಪ್ಟರ್​ಗಳನ್ನು ತರಿಸಲಾರಂಭಿಸಿದ್ದಾರೆ. ನೆರೆಯ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜೈಪುರ, ದೆಹಲಿ, ಕೋಲ್ಕತಾ ಹಾಗೂ ಕೊಚ್ಚಿಯಿಂದ ಹೆಲಿಕಾಪ್ಟರ್​ಗಳನ್ನು ತರಿಸಿಕೊಳ್ಳಲಾಗ್ತಿದೆ. ಈಗಾಗಲೇ ಸರಿಸುಮಾರು 150 ಹೆಲಿಕಾಪ್ಟರ್​ಗಳು ಹಾಗೂ ಮಿನಿ ವಿಮಾನಗಳನ್ನ ರಾಜಕಾರಣಿಗಳು ಬುಕ್ಕಿಂಗ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹೆಲಿಕಾಪ್ಟರ್​​ ಮತ್ತು ಮಿನಿ ವಿಮಾನಗಳ ದರ (ಗಂಟೆಗೆ): ಎರಡು ಆಸನದ ಹೆಲಿಕಾಪ್ಟರ್‌ಗೆ ಗಂಟೆಗೆ 2 ಲಕ್ಷದ 10 ಸಾವಿರ, 4 ಆಸನದ ಹೆಲಿಕಾಪ್ಟರ್​ಗೆ ಗಂಟೆಗೆ 2 ಲಕ್ಷ 30 ಸಾವಿರ ರೂಪಾಯಿ ದರವಿದ್ದು, ಇನ್ನು 6 ಆಸನದ ಮಿನಿ ವಿಮಾನಕ್ಕೆ 2 ಲಕ್ಷ 60 ಸಾವಿರ ರೂ, 8 ಆಸನದ ಮಿನಿ ವಿಮಾನಕ್ಕಾಗಿ ಗಂಟೆಗೆ ಮೂರುವರೆ ಲಕ್ಷ ರೂಪಾಯಿ ನಿಗದಿಯಾಗಿದೆ. ಇನ್ನು 13 ಆಸನದ ಮಿನಿ ವಿಮಾನಕ್ಕಾಗಿ ಗಂಟೆಗೆ 4 ಲಕ್ಷ ರೂಪಾಯಿ ವ್ಯಯಿಸಬೇಕಿದೆ.

ಲ್ಯಾಂಡಿಂಗ್ ವ್ಯವಸ್ಥೆ: ಬೆಂಗಳೂರಿನ ಜಕ್ಕೂರು, ಹೆಚ್​ಎಎಲ್, ವೈಟ್ ಫೀಲ್ಡ್​​​ನಲ್ಲಿ ಹೆಲಿಕಾಪ್ಟರ್​ಗಳ ನಿಲ್ದಾಣವಿದೆ. ಹುಬ್ಬಳ್ಳಿ, ಬೆಳಗಾವಿ, ಬೀದರ್, ಬಳ್ಳಾರಿ, ಕಲಬುರಗಿ ಸೇರಿದಂತೆ ರಾಜ್ಯದ ಹಲೆವೆಡೆ ಹೆಲಿಕಾಪ್ಟರ್​ಗಳ ನಿಲ್ದಾಣಕ್ಕೆ ಜಾಗ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಸಂಪರ್ಕ ಕೊರತೆ, 20 ನಿಮಿಷ ಆಗಸದಲ್ಲೇ ಹಾರಾಡಿದ ಹೆಚ್‌ಡಿಕೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.