ETV Bharat / state

ನಮ್ಮ ಅವಧಿಯಲ್ಲಿ ತಮಿಳುನಾಡಿಗೆ ಬಿಟ್ಟ ನೀರಿನ ದಾಖಲೆ ಬಿಡುಗಡೆ ಮಾಡಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

author img

By ETV Bharat Karnataka Team

Published : Aug 31, 2023, 1:59 PM IST

BJP leaders spark on Congress government  Kaveri water release to TamilNadu  BJP leaders spark on Congress  Kaveri water issue  ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ  ತಮಿಳುನಾಡಿಗೆ ಬಿಟ್ಟ ನೀರಿನ ದಾಖಲೆ ಬಿಡುಗಡೆ ಮಾಡಿ  ಕಾವೇರಿ ನೀರು ವಿಚಾರಕ್ಕೆ ಸಂಬಂಧ  ಮಾಜಿ ನೀರಾವರಿ ಸಚಿವ ಗೋವಿಂದ ಕಾರಜೋಳ  ಮಾಜಿ ಸಿಎಂ ಬಸವರಾಜ ಬೊಮ್ಮಾಯಿ  ಕಾಂಗ್ರೆಸ್​ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ  ಬಿಜೆಪಿ ಸರ್ಕಾರವೂ ನೀರು ಬಿಟ್ಟಿತ್ತು ಎಂದು ಆರೋಪ  ತಮಿಳುನಾಡಿಗೆ ಬಿಟ್ಟ ನೀರಿನ ದಾಖಲೆ ಬಿಡುಗಡೆ ಮಾಡಲಿ  ಡಿಸಿಎಂ ಡಿಕೆ ಶಿವಕುಮಾರ್​ಗೆ ಗೋವಿಂದ ಕಾರಜೋಳ ತಿರುಗೇಟು
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಕಾವೇರಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ನೀರಾವರಿ ಸಚಿವ ಗೋವಿಂದ ಕಾರಜೋಳ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ಬಿಜೆಪಿ ಸರ್ಕಾರವೂ ನೀರು ಬಿಟ್ಟಿತ್ತು ಎಂದು ಆರೋಪ ಮಾಡುವ ಮುನ್ನ ನಮ್ಮ ಕಾಲದಲ್ಲಿ ತಮಿಳುನಾಡಿಗೆ ಬಿಟ್ಟ ನೀರಿನ ದಾಖಲೆ ಬಿಡುಗಡೆ ಮಾಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್​ಗೆ ಮಾಜಿ ನೀರಾವರಿ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ಇನ್ನು ಮಾಜಿ ಸಿಎಂ ಬೊಮ್ಮಾಯಿ ಅವರೂ ಕಾಂಗ್ರೆಸ್​ ಸರ್ಕಾರ ವಿರುದ್ಧ ಹರಿಹಾಯ್ದಿದ್ದಾರೆ.

  • ಈಗ ನೀರು ಬಿಡುತ್ತಿರುವುದರಿಂದ ಕಾನೂನು ಹೋರಾಟಕ್ಕೆ ಅರ್ಥವಿಲ್ಲ. ಕೂಡಲೇ ನೀರು ನಿಲ್ಲಿಸಿ‌ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ತೀವ್ರವಾದಂತಹ ಮನವರಿಕೆ ಮಾಡುವ ಮೂಲಕ ಕಾನೂನು ಹೋರಾಟ ಮಾಡಬೇಕೆಂದು ಆಗ್ರಹ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯದ ಕುಡಿಯುವ ನೀರು ಹಾಗೂ ರೈತರ ಹಿತಾಸಕ್ತಿ ಕಾಪಾಡಲು ವಿಫಲವಾಗಿದೆ.
    3/3

    — Basavaraj S Bommai (@BSBommai) August 31, 2023 " class="align-text-top noRightClick twitterSection" data=" ">

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಗೋವಿಂದ ಕಾರಜೋಳ ಅವರು, ನಮ್ಮ ಕಾಲದಲ್ಲಿ ರೈತರಿಗೆ ನೀರು ಇಟ್ಟುಕೊಂಡೇ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ. ನಾವು ಅಧಿಕಾರದಲ್ಲಿದ್ದಾಗ ರೈತರು ಏನು ಪ್ರತಿಭಟನೆ ಮಾಡಿದ್ದರಾ..?. ಸುಮ್ಮನೆ ರಾಜಕೀಯಕ್ಕಾಗಿ ಏನೋ ಮಾತನಾಡುವುದು ಸರಿಯಲ್ಲ. ಡಿಕೆ ಶಿವಕುಮಾರ್ ಅದೇನೋ ಬಿಚ್ಚಿಡ್ತಾರೋ ಬಿಚ್ಚಿಡಲಿ. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಬಗ್ಗೆ,‌ ಅಭಿವೃದ್ದಿ‌ ಬಗ್ಗೆ ಗಮನ‌ ಕೊಡುತ್ತಿಲ್ಲ. ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ ಎಂದು ಟೀಕಿಸಿದರು.

ಮುಂಗಾರು ಮಳೆ ಕೊರತೆಯಾದಾಗಲೇ‌ ಸರ್ಕಾರ ತಮಿಳುನಾಡಿಗೆ ಎಷ್ಟು‌ ನೀರು ಬಿಡಬೇಕು ಎಂದು‌ ಎಚ್ಚೆತ್ತುಕೊಳ್ಳಬೇಕಿತ್ತು. ಸಿಡಬ್ಲ್ಯೂಎಂಎ ಮತ್ತು ಸಿಡಬ್ಲ್ಯೂಆರ್​ಸಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಈಗಾಗಲೇ ಸರ್ಕಾರ ತಮಿಳುನಾಡಿಗೆ ನೀರು ಹರಿದಿದೆ. ಮೊದಲು 10 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದೇ ತಪ್ಪು. ಆಗಲೇ ಎಚ್ಚೆತ್ತು‌ ಕಾನೂನು ಹೋರಾಟಕ್ಕೆ ಸಿದ್ದವಾಗಬೇಕಿತ್ತು. ಕಾವೇರಿ ಜಲಾನಯದ ಹಲವು ಹಳ್ಳಿಗಳು, ಬೆಂಗಳೂರು ನಗರ ಕಾವೇರಿ ಮೇಲೆಯೇ ಅವಲಂಬಿತವಾಗಿವೆ. ಈಗಲೂ ರಾಜ್ಯ ಸರ್ಕಾರ ತಮ್ಮ ಕಾನೂನು ತಂಡವನ್ನು ಸಿದ್ದಮಾಡಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ನೀರು ಹರಿಸುವುದನ್ನ ನಿಲ್ಲಿಸಲಿ ಎಂದು ಆಗ್ರಹಿಸಿದರು.

  • ಸರ್ಕಾರ ಕಾವೇರಿ ವಿಷಯದಲ್ಲಿ ಮೊದಲಿನಿಂದಲೂ ಎಡವುತ್ತ ಬಂದಿದೆ. ಈಗಾಗಲೇ ಸಿಡಬ್ಲುಎಂಎ ಆದೇಶದಂತೆ 10 ಸಾವಿರ ಕ್ಯೂಸೆಕ್ಸ್ ನಂತೆ ಸುಮಾರು 15 ಟಿಎಂಸಿ ನೀರು ಬಿಟ್ಟಿದೆ ಆದರೂ ಅದರ ವಿರುದ್ದ ಯಾವುದೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಿಲ್ಲ.
    1/3

    — Basavaraj S Bommai (@BSBommai) August 31, 2023 " class="align-text-top noRightClick twitterSection" data=" ">

ಕಾವೇರಿ ನೀರಿನ ರೈತರ ಹೋರಾಟಕ್ಕೆ ಬಿಜೆಪಿಯ ಬೆಂಬಲ ಇರಲಿದೆ. ಕಾಂಗ್ರೆಸ್ ಸರ್ಕಾರದ್ದು ಇಬ್ಬಗೆಯ ನೀತಿ ಪ್ರತಿಪಕ್ಷದಲ್ಲಿ ಇದ್ದಾಗ ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಈಗ ರಾಜಕೀಯ ಲಾಭಕ್ಕಾಗಿ ತಮಿಳುನಾಡಿಗೆ ಸಹಾಯ ಮಾಡಿದ್ದಾರೆ. ಪ್ರತಿಪಕ್ಷದಲ್ಲಿ ಇದ್ದಾಗ ರಾಜ್ಯದ ರೈತರ ಪರವಾಗಿ ವೀರಾವೇಷದಲ್ಲಿ ಮಾತನಾಡಿ, ಅಧಿಕಾರಕ್ಕೆ ಬಂದ ನಂತರ ಜನರಿಗೆ ಮೋಸ ಮಾಡುತ್ತಿರುವುದು ಇಬ್ಬಗೆಯ ನೀತಿಯಲ್ಲದೇ ಮತ್ತೇನು ಅಲ್ಲ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ, ಮಳೆ ಕೊರತೆಯಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ವಿದ್ಯುತ್ ಕೂಡ ಸಮರ್ಪಕವಾಗಿ ಕೊಡುತ್ತಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಇವರಿಗೆ ಕಾಳಜಿ ಇಲ್ಲ. ನಿರಂತರವಾಗಿ ಜನರಿಗೆ ಮೋಸ ಮಾಡಿ ಇವರು ಜನರಿಂದ ಮತ ಹಾಕಿಸಿಕೊಳ್ಳೋದು ಬಿಟ್ಟರೆ ಬೇರ ಏನು ಮಾಡುತ್ತಿಲ್ಲ ಎಂದು ಹರಿಹಾಯ್ದರು.

ರೈತರಿಗೆ‌ ಕೇವಲ 3 ತಾಸು ವಿದ್ಯುತ್ ಕೊಡುತ್ತಿದ್ದಾರೆ. ಅದೂ ಗುಣಮಟ್ಟದ ‌ವಿದ್ಯುತ್ ಅಲ್ಲ. ಬರಗಾಲ ಇದೆ. ಮುಂಗಾರು ಬರಲಿಲ್ಲ. ಹಾಗಾಗಿ ಗೋಶಾಲೆ,‌‌ ಮೇವು‌ ಬ್ಯಾಂಕ್ ನಿರ್ಮಿಸಬೇಕು. ಜನರು ಗುಳೆ‌ ಹೋಗದಂತೆ ನೋಡಿಕೊಳ್ಳಬೇಕು ಎಂದು ಕಾರಜೋಳ ಆಗ್ರಹಿಸಿದರು.

ಸರ್ಕಾರದ ವಿರುದ್ಧ ಬೊಮ್ಮಾಯಿ ವಾಗ್ದಾಳಿ: ರಾಜ್ಯ ಸರ್ಕಾರ ಕೂಡಲೇ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಿ‌ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬೇಕು. ತೀವ್ರವಾದಂತಹ ಮನವರಿಕೆ ಮಾಡುವ ಮೂಲಕ ಕಾನೂನು ಹೋರಾಟ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರ ಕಾವೇರಿ ವಿಷಯದಲ್ಲಿ ಮೊದಲಿನಿಂದಲೂ ಎಡವುತ್ತ ಬಂದಿದೆ. ಈಗಾಗಲೇ ಸಿಡಬ್ಲ್ಯೂಎಂಎ ಆದೇಶದಂತೆ 10 ಸಾವಿರ ಕ್ಯೂಸೆಕ್​​ ​​ನಂತೆ ಸುಮಾರು 15 ಟಿಎಂಸಿ ನೀರು ಬಿಟ್ಟಿದೆ. ಆದರೂ, ಅದರ ವಿರುದ್ಧ ಯಾವುದೇ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಿಲ್ಲ. ಈಗ ಸಿಡಬ್ಲ್ಯೂಎಂಎ ಸೂಚನೆ ಮೇರೆಗೆ 5000 ಕ್ಯೂಸೆಕ್​ ನೀರು ಬಿಡಲು ಪ್ರಾರಂಭ ಮಾಡಿದ ಮೇಲೆ ಡಿಸಿಎಂ ಅವರು ಕಾನೂನು ತಜ್ಞರ ಜೊತೆ ಚರ್ಚೆ ಮಾಡುವುದರಲ್ಲಿ ಯಾವ ಅರ್ಥ ಇದೆ ಎಂದು ಪ್ರಶ್ನಿಸಿದ್ದಾರೆ.

ಓದಿ: ಕಾವೇರಿ ನೀರು ಬಿಡುವ ವಿಚಾರ: ನಾಳೆ ದೆಹಲಿಗೆ ಹೋಗಿ ವಾಸ್ತವಾಂಶದ ಬಗ್ಗೆ ಚರ್ಚಿಸುತ್ತೇನೆ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.