ETV Bharat / state

ಕಾವೇರಿ ನೀರು ಬಿಡುವ ವಿಚಾರ: ನಾಳೆ ದೆಹಲಿಗೆ ಹೋಗಿ ವಾಸ್ತವಾಂಶದ ಬಗ್ಗೆ ಚರ್ಚಿಸುತ್ತೇನೆ: ಡಿಕೆಶಿ

author img

By ETV Bharat Karnataka Team

Published : Aug 30, 2023, 2:33 PM IST

Issue of releasing Cauvery water to Tamil Nadu: ''ನಾಳೆ ದೆಹಲಿಗೆ ಹೋಗುತ್ತೇನೆ, ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದ ಹಿನ್ನೆಲೆ ವಾಸ್ತವಾಂಶದ ಕುರಿತು ಚರ್ಚೆ ಮಾಡುತ್ತೇನೆ'' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Issue of releasing Cauvery water to Tamil Nadu
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ''ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ನಮ್ಮ ವಕೀಲರ ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಲಾಗುವುದು ' ಎಂದು ಹೇಳಿದರು.

ಸದಾಶಿವ ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತಮಾಡಿದ ಅವರು, ''ಅಫೀಶಿಯಲ್ ಆಗಿ ಭೇಟಿ ಮಾಡಲಿದ್ದೇನೆ. ತಮಿಳುನಾಡಿನವರು 24 ಟಿಎಂಸಿ ನೀರು ಕೇಳಿದ್ರು. ನಮ್ಮ ವಕೀಲರು ಬಹಳ ಚೆನ್ನಾಗಿ ವಾದ ಮಾಡಿದ್ದಾರೆ. ನಾವು 3 ಸಾವಿರ ಕ್ಯೂಸೆಕ್ಸ್ ನೀರು ಬಿಡೋದಾಗಿ ಹೇಳಿದ್ದೇವೆ. ಆದರೆ, 5 ಸಾವಿರ ಕ್ಯೂಸೆಕ್ಸ್ ಬಿಡುವಂತೆ ಕಾವೇರಿ ನದಿ ನೀರು ಪ್ರಾಧಿಕಾರ ಹೇಳಿದೆ. ನಾಳೆ ವಾಸ್ತವಾಂಶ ಬಗ್ಗೆ ಚರ್ಚೆ ಮಾಡುತ್ತೇವೆ'' ಎಂದರು.

''ನೀರು ಬಿಡುವ ವಿಚಾರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ,
ಬಸವರಾಜ ಬೊಮ್ಮಾಯಿ ಅವರು ಏನು ಬೇಕಾದ್ರೂ ಸಲಹೆ ನೀಡಲಿ, ಲೆಕ್ಕಾಚಾರದ ಬೀಗ ನಮ್ಮ ಬಳಿ ಇದೆ.
ಬೇರೆ ಯಾರಿಗೂ ಬೀಗ ಕೊಟ್ಟಿಲ್ಲ. ನಮ್ಮ ರೈತರನ್ನು ಕಷ್ಟಕಾಲದಲ್ಲೂ ರಕ್ಷಣೆ ಮಾಡಬೇಕು. ನಾವು ಮೊನ್ನೆ ನಮ್ಮ ರೈತರಿಗೆ ನೀರು ಬಿಟ್ಟಿದ್ದೆವು. ಬೊಮ್ಮಾಯಿ ಅವರು ರಾಜಕಾರಣ ಮಾಡ್ತಾ ಇದ್ದಾರೆ ಮಾಡಲಿ. ನಾಗೇಗೌಡ ಕಾಲದಲ್ಲಿ ಏನು ಮಾಡಿದ್ರು. ಎಲ್ಲಾ ರಾಜಕೀಯ ಮಾಡಬಾರದು'' ಎಂದು ಬೊಮ್ಮಾಯಿ ಆರೋಪಕ್ಕೆ ತಿರುಗೇಟು ನೀಡಿದರು.

ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು: ''ಬಿಜೆಪಿಯಿಂದ ಕಾಂಗ್ರೆಸ್ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ವಿಚಾರದಲ್ಲಿ ಮಾತನಾಡಿದ ಅವರು, ಏನಿದೆ ಆ ಚಾರ್ಜ್ ಶೀಟ್ ನಲ್ಲಿ? ಅವರ ಆರೋಪ ಯಾವುದು ಸಾಬೀತು ಮಾಡಲಿ. ಇವರದ್ದೂ ಬಿಚ್ಚೋ ಕಾಲ ಬರುತ್ತದೆ. ಆಗ ಬಿಚ್ಚಿತ್ತೇವೆ ಎಂದು ಗುಡುಗಿದರು. ಇವರಿಗೆ ನಾಯಕನನ್ನೇ ಆಯ್ಕೆ ಮಾಡಲಾಗಿಲ್ಲ. ಗುತ್ತಿಗೆದಾರರ ಬಗ್ಗೆ ಹೇಳಿ ನನ್ನ ವಿರುದ್ಧ ಆರೋಪ ಮಾಡಿದ್ರು. ಒತ್ತಡ ಹಾಕಿ ಬಿಜೆಪಿ, ಜೆಡಿಎಸ್​ನವರು ದೂರು ಕೊಡಿಸಿದ್ರು ಅಂತ ಹೇಳಿದ್ರು. ನಾನು ಹೇಳಿದೆ ಅಂತ ಹೇಳಲಿ ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಸವಾಲು ಹಾಕಿದ್ದೇನೆ. ನನ್ನ ಮೇಲಿನ ಆರೋಪ ಸಾಬೀತು ಮಾಡಲಿ. ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದೇನೆ. ಇದಕ್ಕಿಂತ ಇನ್ನೇನು ಬೇಕು'' ಎಂದರು.

''ನೂರು ದಿನದಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ. ಮೊದಲ ಕ್ಯಾಬಿನೆಟ್​ನಲ್ಲೇ ಎಲ್ಲಾ ಗ್ಯಾರಂಟಿ ಇತ್ಯರ್ಥ ಮಾಡಿದ್ದೇವೆ. ಇದುವರೆಗೂ ಯಾರಾದ್ರೂ ಮಾಡಿದ್ದಾರಾ? ಅವರದ್ದು ಭರವಸೆ, ನಮ್ಮದು ಗ್ಯಾರಂಟಿ ಎಂದರು.
ನಮ್ಮ ಒತ್ತಡಕ್ಕೆ ಮಣಿದಿದ್ದಾರೆ ಪ್ರಧಾನಿ ಮೋದಿ. ನಾವು 500 ರೂ. ಸಬ್ಸಿಡಿ ಕೊಡಬೇಕು ಅಂತ ಎರಡು ಸಾವಿರ ಪ್ಯಾಕೇಜ್ ಕೊಡ್ತಾ ಇದ್ದೀವಿ. ಎರಡು ಸಾವಿರ ರೂಪಾಯಿ, ಬಸ್​ನಲ್ಲಿ ಉಚಿತ ಪ್ರಯಾಣ, ಅಕ್ಕಿ, ಕರೆಂಟ್ ಬಿಲ್ ಇವೆಲ್ಲ ಕೊಟ್ಟಿದ್ದೀವಿ. ನಾಲ್ಕು ಗ್ಯಾರಂಟಿ ಅನುಷ್ಠಾನ ಆಗಿದೆ. ಇವತ್ತು ನೂರು ದಿನದ ಸಂಭ್ರಮ ಆಚರಣೆ ಮಾಡ್ತಾ ಇದ್ದೀವಿ. ಇದು ಕಾಂಗ್ರೆಸ್ ಸರ್ಕಾರದ ಹಬ್ಬ. ನಾಡಿನ ಎಲ್ಲ ಹೆಣ್ಣು ಮಕ್ಕಳ ಮನೆಗೆ ಹಣ ತಲುಪುತ್ತಿದೆ. ಸಿಎಂ ಸಿದ್ದರಾಮಯ್ಯ, ನಾನು ಚೆಕ್‌ಗೆ ಸಹಿ ಹಾಕಿದ್ದೆವು. ಪ್ರಿಯಾಂಕಾ ಗಾಂಧಿ ಸಾಕ್ಷಿ ಆಗಿದ್ರು'' ಎಂದು ಡಿಕೆಶಿ ನೆನೆಪು ಮಾಡಿಕೊಟ್ಟರು.

''ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರುತ್ತಿದ್ದಾರೆ. ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. 1 ಲಕ್ಷ ಮಹಿಳೆಯರು ಸೇರುತ್ತಿದ್ದಾರೆ. 12 ಲಕ್ಷಕ್ಕೂ ಹೆಚ್ಚು ಕಡೆ ಜೂಮ್ ಮೀಟಿಂಗ್ ನಡೆಯಲಿದೆ. 1.10 ಕೋಟಿ ಹೆಣ್ಣು ಮಕ್ಕಳು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಹಣ ಇವತ್ತಿಂದ ಬಿಡುಗಡೆ ಆಗುತ್ತದೆ'' ಎಂದು ಹೇಳಿದರು.

ಗ್ಯಾಸ್ ಬೆಲೆ ಕಡಿಮೆ‌ ಮಾಡಿದ ವಿಚಾರ: ಕಾಂಗ್ರೆಸ್ ಗ್ಯಾರಂಟಿಗಳಿಗೆ ಹೆದರಿ ಕೇಂದ್ರ ಸರ್ಕಾರವು ಗ್ಯಾಸ್ ಬೆಲೆ ಕಡಿಮೆ‌ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ ಅವರು, ''ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ರು ಉಚಿತ ಯೋಜನೆಯಿಂದ ದಿವಾಳಿ ಆಗುತ್ತೆ ಅಂತ. ಈಗ ಯಾಕೆ ಗ್ಯಾಸ್​ ಸಿಲಿಂಡರ್​ ಬೆಲೆ 200ರೂ ಇಳಿಕೆ ಮಾಡಿದ್ದಾರೆ. ಅವರ ಸರ್ವೆ ರಿಪೋರ್ಟ್ ನಲ್ಲಿ ಜನ ಬೈತಾ ಇದ್ದಾರೆ. ಕಾಂಗ್ರೆಸ್​ನವರು ಕೊಡ್ತಾ ಇದ್ದಾರೆ. ನೀವು ಯಾಕೆ ಕೊಡಲ್ಲ ಎಂದು ಕೇಳ್ತಾ ಇದ್ದಾರೆ. ಹೆಣ್ಣು ಮಕ್ಕಳು ಬೈತಾ ಇದ್ದಾರೆ. ಅದಕ್ಕೆ ಗ್ಯಾಸ್ ಬೆಲೆ 200 ಸಬ್ಸಿಡಿ ಕೊಡ್ತಾ ಇದ್ದಾರೆ ಅಲ್ಲವೇ? ಕರ್ನಾಟಕ ಮಾದರಿಯನ್ನು ಪ್ರಧಾನಿಗಳು ಪಾಲನೆ ಮಾಡ್ತಾ ಇದ್ದಾರೆ'' ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಚಾಲನೆ.. ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.