ETV Bharat / state

ಗೃಹ ಲಕ್ಷ್ಮಿ ಯೋಜನೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಚಾಲನೆ.. ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

author img

By ETV Bharat Karnataka Team

Published : Aug 30, 2023, 1:47 PM IST

Updated : Aug 30, 2023, 2:01 PM IST

ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆನ್​ಲೈನ್​ ಬಟನ್​ ಒತ್ತುವ ಮೂಲಕ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿದರು.

Gruha Lakshmi scheme launched
ಗೃಹ ಲಕ್ಷ್ಮಿ ಯೋಜನೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಚಾಲನೆ

ಮೈಸೂರು: ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ನಗರದಲ್ಲಿ ಬುಧವಾರ ಅದ್ಧೂರಿ ಚಾಲನೆ ನೀಡಲಾಯಿತು. ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆನ್​ಲೈನ್​ ಬಟನ್​ ಒತ್ತುವ ಮೂಲಕ ಗೃಹಲಕ್ಷ್ಮಿ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

  • LIVE : 'ಗೃಹಲಕ್ಷ್ಮಿ ಯೋಜನೆ'ಯ ಸೌಲಭ್ಯ ವಿತರಣೆ ಕಾರ್ಯಕ್ರಮ, ಮಹಾರಾಜ ಕಾಲೇಜು ಅವರಣ, ಮೈಸೂರು. https://t.co/eajo40IS2F

    — Karnataka Congress (@INCKarnataka) August 30, 2023 " class="align-text-top noRightClick twitterSection" data=" ">

ಸಾಕೇಂತಿಕವಾಗಿ 10 ಮಂದಿ ಫಲಾನುಭವಿಗಳಿಗೆ ಚಕ್​​​​ ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಲಾಯಿತು. ಇದೇ ವೇಳೆ ಸಾಂಕೇತಿಕವಾಗಿ ಇವರಿಗೆ ಕ್ಯೂ ಆರ್​ ಕೋಡ್​ ಇರುವ ಡಿಜಿಟಲ್​ ಕಾರ್ಡ್​ ವಿತರಣೆ ಸಹ ಮಾಡಲಾಯಿತು. ಎಲ್ಲ 1ಕೋಟಿ 10 ಲಕ್ಷ ಫಲಾನುಭವಿಗೆ ಈ ಡಿಜಿಟಲ್ ಕಾರ್ಡ್​ ನೀಡಲು ಸರ್ಕಾರ ನಿರ್ಧರಿಸಿದೆ. ಈ ಕ್ಯೂ ಆರ್​ ಕೋಡ್​​ ಸ್ಕ್ಯಾನ್ ಮಾಡಿದರೆ, ಸರ್ಕಾರದ ಯೋಜನೆಗಳು, ಸಾಧನೆಗಳ ಬಗ್ಗೆ ತಿಳಿದುಕೊಳ್ಳಬಹುದು.

ಗೃಹ ಲಕ್ಷ್ಮಿ ಯೋಜನೆಯಡಿ ಮನೆಯ ಮಹಿಳಾ ಮುಖ್ಯಸ್ಥರಿಗೆ 2 ಸಾವಿರ ರೂ. ಸಹಾಯಧನ ಒದಗಿಸಲಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ಶೇಕಡಾ 86ರಷ್ಟು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. 1.28 ಕೋಟಿ ಕುಟುಂಬದ ಯಜಮಾನಿಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಜುಲೈ 19ರಿಂದ ಪ್ರಾರಂಭಗೊಂಡಿದೆ. ಈವರೆಗೆ 1.11 ಕೋಟಿಗೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಸಿಕೊಡಿದ್ದಾರೆ. ಡಿಬಿಟಿ ಮೂಲಕ ಹಣ ಪಾವತಿ ಮಾಡಲಾಗುತ್ತದೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಸುಮಾರು 80 ಅಡಿ ಉದ್ದದ ಹಾಗೂ 60 ಅಡಿ ಅಗಲ, 8 ಅಡಿ ಎತ್ತರದಲ್ಲಿ ವೇದಿಕೆಯನ್ನು ನಿರ್ಮಿಸಲಾಗಿದೆ. ಸುಮಾರು 1 ಲಕ್ಷಕ್ಕೂ ಜನರು ಕಾರ್ಯಕ್ರಮ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮವು ರಾಜ್ಯಾದ್ಯಂತ ಸುಮಾರು 12,600 ಕಡೆಗಳಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ರಾಜ್ಯ ಸರ್ಕಾರದ ಯೋಜನೆಗಳನ್ನ ಹೊಗಳಿದ ರಾಹುಲ್​: ಇದೀಗ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ನಾವು ನುಡಿದಂತೆ ನಡೆದಿದ್ದೇವೆ. ಯುವನಿಧಿ ಯೋಜನೆಯನ್ನು ಹೊರತುಪಡಿಸಿ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ಕೊಟ್ಟ ಮಾತು ನಡೆಸಿಕೊಟ್ಟಿದ್ದೇವೆ. ಮಹಿಳಾ ಸಬಲೀಕರಣ ಯೋಜನೆ ಜಾರಿ ಮಾಡುವ ಮೂಲಕ ನಾವು ನಮ್ಮ ಭರವಸೆ ಉಳಿಸಿಕೊಂಡಿದ್ದೇವೆ ಎಂದು ಹೇಳಿದರು.

ನಮಗೆ ಕರ್ನಾಟಕ ಶಕ್ತಿ ನೀಡಿದೆ. ಮನೆಯಲ್ಲಿರುವ ಹೆಣ್ಣುಮಕ್ಕಳು ನಮಗೆ ಶಕ್ತಿ ನೀಡಿದ್ದಾರೆ. ರಾಜ್ಯ ವಿವಿಧ ಭಾಗಗಳ ಸಹೋದರ ಸಹೋದರಿಯರು ಕರ್ನಾಟಕದ ಶಕ್ತಿ, ಬುಡ ಆಗಿದ್ದಾರೆ. ಏರುತ್ತಿರುವ ಬೆಲೆಗಳ ಹೊರೆ ಕಡಿಮೆ ಮಾಡಲು ನಾವು ಈ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ ಎಂದು ರಾಹುಲ್​ ಗಾಂಧಿ ಹೇಳಿದರು.

ದೇಶಕ್ಕೆ ದಿಕ್ಸೂಚಿ ಯೋಜನೆಗಳು: ಕರ್ನಾಟಕದ ಐದು ಯೋಜನಗಳು ದೇಶದ ಯೋಜನೆಗಳ ನೀಲಿ ನಕ್ಷೆ ಆಗಿದೆ. ನುಡಿದಂತೆ ನಡೆದಿದ್ದೇವೆ. ಯಾವುದೇ ಧರ್ಮ, ಜಾತಿ, ಯಾವುದೇ ಭಾಷೆ ನೋಡದೇ ಎಲ್ಲರನ್ನು ಒಗ್ಗೂಡಿಸಿಕೊಂಡು ನಮ್ಮ ರಾಜ್ಯ ಸರ್ಕಾರ ಮುನ್ನಡೆಯುತ್ತಿದೆ. ನಾವು ಕೊಟ್ಟ ಐದು ಯೋಜನೆಗಳು ಇಡೀ ದೇಶಕ್ಕೆ ಮಾದರಿ ಯಾಗಿದೆ. ಅಷ್ಟೇ ಅಲ್ಲ ಇದು ಮುಂಬರುವ ದಿನಗಳ ದಿಕ್ಸೂಚಿ ಆಗಿದೆ.

ಕೇಂದ್ರ ಸರ್ಕಾರದ ವಿರುದ್ಧ ರಾಹುಲ್​ ಟೀಕಾ ಪ್ರಹಾರ: ಕೇಂದ್ರ ಸರ್ಕಾರ ನಮ್ಮ ಗ್ಯಾರಂಟಿಗಳನ್ನು ಹಿಯಾಳಿಸಿದರು. ಆದರೆ ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮುನ್ನುಗ್ಗಿದೆವು. ಕೊಟ್ಟ ಮಾತನ್ನು ಈಡೇರಿಸಿದ್ದೇವೆ. ಆದರೆ ದಿಲ್ಲಿಯಲ್ಲಿರುವ ಸರ್ಕಾರ ಕೋಟ್ಯಧಿಪತಿಗಳಿಗೆ ಅಷ್ಟೇ ಲಾಭಕರ ಯೋಜನೆಗಳನ್ನು ಘೋಷಣೆ ಮಾಡುತ್ತದೆ. ಒಂದಿಬ್ಬರು ಉದ್ಯಮಿಪತಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಚಾಲನೆ: ರಾಜ್ಯಕ್ಕೆ ಆಗಮಿಸಿದ ರಾಹುಲ್​ ಗಾಂಧಿ, ಸ್ವಾಗತಿಸಿದ ಡಿಕೆಶಿ

Last Updated : Aug 30, 2023, 2:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.