ETV Bharat / state

ಶನಿವಾರ, ಭಾನುವಾರ, ಸಾರ್ವತ್ರಿಕ ರಜಾ ದಿನದಂದು ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ನಿಷೇಧ

author img

By

Published : Aug 11, 2021, 6:25 PM IST

Banned on entry of devotees to temple on Saturday, Sunday, and universal holiday
ಶನಿವಾರ, ಭಾನುವಾರ, ಸಾರ್ವತ್ರಿಕ ರಜಾ ದಿನದಂದು ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ನಿಷೇಧ

ಪಕ್ಕದ ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೊನಾ ವೇಗವಾಗಿ ಹರಡುತ್ತಿದೆ. ಇದರಿಂದ ನಮ್ಮ ರಾಜ್ಯದಲ್ಲಿ ಕೋವಿಡ್​ ನಿಯಂತ್ರಣ ಮಾಡುವ ಹಿನ್ನೆಲೆ ಬೆಂಗಳೂರು ಜಿಲ್ಲಾ ವ್ಯಾಪ್ತಿಗೆ ಒಳಪಡುವ ಮುಜರಾಯಿ ಇಲಾಖೆ ಹಾಗೂ ಖಾಸಗಿ ದೇವಾಲಯಗಳಲ್ಲಿ ಶ್ರಾವಣ ಮಾಸದ ವಾರಾಂತ್ಯ ದಿನಗಳು ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ಸಾರ್ವಜನಿಕರ ದೇವಾಲಯ ಪ್ರವೇಶಕ್ಕೆ ನಿಷೇಧ ಹೇರಿ ಜಿಲ್ಲಾಡಳಿತ ಆದೇಶಿಸಿದೆ..

ಬೆಂಗಳೂರು : ಕೋವಿಡ್ ಮೂರನೇ ಅಲೆಯ ಭೀತಿ ಹಿನ್ನೆಲೆ ಬೆಂಗಳೂರು ಜಿಲ್ಲಾ ವ್ಯಾಪ್ತಿಗೆ ಒಳಪಡುವ ಮುಜರಾಯಿ ಇಲಾಖೆ ಹಾಗೂ ಖಾಸಗಿ ದೇವಾಲಯಗಳಲ್ಲಿ ಶ್ರಾವಣ ಮಾಸದ ವಾರಾಂತ್ಯ ದಿನಗಳು ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ಸಾರ್ವಜನಿಕರ ದೇವಾಲಯ ಪ್ರವೇಶಕ್ಕೆ ನಿಷೇಧ ಹೇರಿ ಜಿಲ್ಲಾಡಳಿತ ಆದೇಶಿಸಿದೆ.

order copy
ಆದೇಶದ ಪ್ರತಿ

ಈ ಹಿಂದೆ ಜುಲೈ 27ರಂದು ದೇವಸ್ಥಾನಗಳಲ್ಲಿ ನಿತ್ಯದ ಸೇವೆ, ಪೂಜೆಗಳನ್ನು ನಡೆಸಲು ಸೂಚಿಸಿ ಹಬ್ಬ, ಮೆರವಣಿಗೆ, ಧಾರ್ಮಿಕ ಸಭೆಗಳಿಗೆ ಮಾತ್ರ ನಿಷೇಧ ಹೇರಲಾಗಿತ್ತು.

ಓದಿ: ಅರೇ ಬಾಪ್ ರೇ! ಹೆಲ್ಮೆಟ್​ ಹಾಕಿಲ್ಲವೆಂದು ಕಾರ್ ಡ್ರೈವರ್​ಗೆ ಸಾವಿರ ರೂ. ದಂಡ!

ಆ.09 ರಿಂದ ಸೆ.07ರವರೆಗೆ ಶ್ರಾವಣ ಮಾಸದ ಹಿನ್ನೆಲೆ ವಿವಿಧ ಜಿಲ್ಲೆ, ರಾಜ್ಯಗಳಿಂದ ಭಕ್ತರು ಆಗಮಿಸಲಿದ್ದು, ಕೋವಿಡ್ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ದೇವಾಲಯಗಳಲ್ಲಿ ದೈನಂದಿನ ಪೂಜೆ, ಸೇವೆ ಹೊರತುಪಡಿಸಿ ಶ್ರಾವಣ ಮಾಸದ ಶನಿವಾರ, ಭಾನುವಾರ, ಸಾರ್ವತ್ರಿಕ ರಜಾ ದಿನಗಳಂದು ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.