ETV Bharat / state

ಬಿಬಿಎಂಪಿ ಕಚೇರಿಗಳ ಮೇಲೆ ಮುಂದುವರಿದ ಎಸಿಬಿ ದಾಳಿ: ವಿಭಾಗೀಯ ಕಚೇರಿಗಳಲ್ಲಿ ಪರಿಶೀಲನೆ

author img

By

Published : Mar 2, 2022, 10:18 AM IST

ಬಿಬಿಎಂಪಿಯ ಹಲವು ಕಚೇರ ಮೇಲೆ ಬುಧವಾರವೂ ಕೂಡ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ದಾಳಿ ಮುಂದುವರಿದಿದೆ.

acb-raid-continues-on-bbmp-offices-in-bengaluru
ಬಿಬಿಎಂಪಿ ಕಚೇರಿಗಳ ಮೇಲೆ ಮುಂದುವರೆದ ಎಸಿಬಿ ದಾಳಿ

ಬೆಂಗಳೂರು: ಬಿಬಿಎಂಪಿಯ ಹಲವು ಕಚೇರಿಗಳಿಗೆ ಬುಧವಾರವೂ ಕೂಡ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ದಾಳಿ ಮುಂದುವರಿದಿದೆ. ಕೇಂದ್ರ ಕಚೇರಿ ಸೇರಿ ಇತರ ವಿಭಾಗಗಳಲ್ಲಿಯೂ ಕೂಡ ಕಡತಗಳ ಪರಿಶೀಲನೆ ನಡೆಯುತ್ತಿದೆ.

ಬೆಂಗಳೂರಿನ ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ ಸೇರಿದಂತೆ ವಿವಿಧ ವಲಯ ಕಚೇರಿಗಳಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಂಟು ವಲಯಗಳಲ್ಲೂ ಎಸಿಬಿಯ 10 ತಂಡಗಳು ದಾಳಿಗಿಳಿದಿವೆ. ಕಂದಾಯ, ಇಂಜಿನಿಯರಿಂಗ್, ಟಿಡಿಆರ್ ವಿಭಾಗಕ್ಕೆ‌ ಸೇರಿದ ಆಕ್ರಮ ಕಡತಗಳ ಹುಡುಕಾಟ ಮುಂದುವರಿದಿದೆ. ಫೀಲ್ಡ್ ವಿಸಿಟ್ ಮೂಲಕ ಮಾಹಿತಿ ಕಲೆ ಹಾಕಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನ್​​: ತಂದೆಗೆ ವಿದಾಯ ಹೇಳಿ ಕಣ್ಣೀರು ಹಾಕಿದ ಪುಟ್ಟ ಹುಡುಗಿ.. ಈ ಫೋಟೋ ನೋಡಿದರೆ ಮನ ಕಲಕದಿರದು!!

ಕೆರೆ ಒತ್ತುವರಿ ಪರಿಶೀಲನೆ: ಮಡಿವಾಳ, ಯಲಹಂಕ, ಹೆಚ್ಎಸ್​ಆರ್ ಲೇಔಟ್, ಬೆಳ್ಳಂದೂರು ಸೇರಿದರೆ ಹಲವೆಡೆ ಫೀಲ್ಡ್ ವಿಸಿಟ್​ ನಡೆದಿದೆ. ಅಕ್ರಮ ಕಟ್ಟಡ, ಕಸ, ಟಿಡಿಆರ್​ ಟೆಂಡರ್​ ಅಕ್ರಮದ ದಾಖಲೆ ಪರಿಶೀಲಿಸುತ್ತಿದ್ದಾರೆ. ದೊಡ್ಡ ದೊಡ್ಡ ಖಾಸಗಿ ಬಿಲ್ಡರ್​​ಗಳಿಗೆ ಟಿಡಿಆರ್ ಮಾರಾಟ ಮಾಡಿರುವುದು ಈಗಾಗಲೇ ಬೆಳಕಿಗೆ ಬಂದಿದೆ. ಮಡಿವಾಳ, ಬೆಳ್ಳಂದೂರು ಕೆರೆ ಒತ್ತುವರಿಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.