ETV Bharat / state

ಸ್ಯಾಂಟ್ರನೋ ಹುಂಡೈಯೋ.. ಯಾವ ಬ್ರಾಂಡ್​ಗಳು ಎಲ್ಲಿಲ್ಲೆವೆಯೋ ನಂಗೆ ಗೊತ್ತಿಲ್ಲ: ಸಚಿವ ಅಶ್ವತ್ಥನಾರಾಯಣ

author img

By

Published : Jan 8, 2023, 9:32 PM IST

minister-aswath-narayan-reaction-on-santro-ravi-case
ಸ್ಯಾಂಟ್ರನೋ ಹುಂಡೈ.. ಯಾವ ಬ್ರಾಂಡೋಗಳು ಎಲ್ಲಿಲ್ಲೆವೆಯೋ ನಂಗೆ ಗೊತ್ತಿಲ್ಲ: ಅಶ್ವತ್ಥ​ ನಾರಾಯಣ

ಸ್ಯಾಂಟ್ರೋ ರವಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಅಶ್ವತ್ಥ​ನಾರಾಯಣ- ಹೆಚ್​ಡಿಕೆ ಹೇಳಿಕೆಗೆ ತಿರುಗೇಟು- ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದ ಸಚಿವರು

ದೊಡ್ಡಬಳ್ಳಾಪುರ: ಸ್ಯಾಂಟ್ರೋ ರವಿ ಪ್ರಕರಣ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಅಶ್ವತ್ಥ​ ನಾರಾಯಣ ನನಗೆ ಯಾವ ಸ್ಯಾಂಟ್ರೋನು ಗೊತ್ತಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಯುವ ಮುಖಂಡ ಧೀರಜ್ ಮುನಿರಾಜು ಜನ್ಮದಿನದಲ್ಲಿ ಭಾಗವಹಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ​ನಾರಾಯಣ ಯಾವ ಸ್ಯಾಂಟ್ರನೋ ಹುಂಡೈಯೋ.. ಯಾವ ಬ್ರಾಂಡ್​ಗಳು ಎಲ್ಲಿಲ್ಲೆವೆಯೋ ನಂಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

ಆದರೆ ಇಂತಹ ಬ್ರಾಂಡ್ ಇದ್ದರೆ ಕ್ಲೀನ್ ಮಾಡೋಕೆ ನಾವ್ ರೆಡಿ ಇದ್ದೇವೆ, ಜತೆಗೆ ಇಂತಹ ಬ್ರಾಂಡ್​ಗಳನ್ನ ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಕಳಿಸ್ತೀವಿ. ಯಾವ ಬ್ರಾಂಡ್ ಗಳಿಗೂ ಕಿಂಚಿತ್ತೂ ಗೌರವ ಅಲ್ಲ. ಸಮಾಜದಲ್ಲಿ ದುರಪಯೋಗ ಪಡಿಸಿಕೊಳ್ಳವವರನ್ನು ಕ್ಷಮಿಸಬಾರದು ಎಂದು ಉತ್ತರಿಸಿದರು. ಇನ್ನು ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಹೆಚ್​ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥ​ನಾರಾಯಣ ತಿರುಗೇಟು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್​ಡಿಕೆ ಅವರು ಯಾರ ಯಾರ ಜೊತೆ ಇದ್ದರು ನಾವ್ ನೋಡಿಲ್ವಾ..? ಹಾಗಂತ ನಾವು ಅವರ ಜೊತೆ ಸಂಬಂಧ ಇದ್ಯಾ ಅಂತ ಹೇಳೋಕೆ ಆಗುತ್ತಾ..? ಕಾನೂನು ಉಲ್ಲಂಘನೆ ಮಾಡುವ ವ್ಯಕ್ತಿಯನ್ನು ಗೌರವಿಸಲು ಸಾಧ್ಯವಿಲ್ಲ. ನಾವು ಯಾವ ನಾಯಕನನ್ನು ಉಳಿಸಿಕೊಳ್ಳಲು ಬಂದಿಲ್ಲ ಎಂದಿದ್ದಾರೆ. ಜತೆಗೆ ಯಾರೇ ಭ್ರಷ್ಟಾಚಾರಿಗಳಿದ್ರೂ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಬೇಕು ಎಂದು ಅಶ್ವತ್ಥ​ ನಾರಾಯಣ ಹೇಳಿದ್ದಾರೆ.

ಯಾರಿದು ಸ್ಯಾಂಟ್ರೋ ರವಿ?: ಯುವತಿಗೆ ಕೆಲಸ ನೀಡುವುದಾಗಿ ಭರವಸೆ ನೀಡಿ, ಅತ್ಯಾಚಾರ ಎಸಗಿದ ಆರೋಪಿ ಸ್ಯಾಂಟ್ರೂ ರವಿ. ಈ ಆರೋಪಿಯು ತನ್ನ ದುಷ್ಕೃತ್ಯದ ಕುರಿತು ಯಾರಿಗೂ ಹೇಳದಂತೆ ಜೀವ ಬೆದರಿಕೆಯೊಡ್ಡಿ ನಂತರ ಬಲವಂತವಾಗಿ ಮದುವೆಯಾಗಿದ್ದಾನೆ, ಮದುವೆಯಾದ ನಂತರ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದಾನೆ ಎಂದು ಯುವತಿಯೊಬ್ಬರು ಮೈಸೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದರು.

ಸಮ್ಮಿಶ್ರ ಸರ್ಕಾರದ ಸರ್ಕಾರದ ಶಾಸಕರು ಸರ್ಕಾರ ಉರುಳಿಸುವ ಸಮಯದಲ್ಲಿ ಮುಂಬೈನಲ್ಲಿದ್ದ ಸಮಯದಲ್ಲಿ ಮನರಂಜನೆಗಾಗಿ ಸ್ಯಾಂಟ್ರೋ ರವಿ ಹುಡುಗಿಯರನ್ನು ಸಪ್ಲೈ ಮಾಡಿದ್ದ ಎಂದು ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ಮಾಧ್ಯಮಗೋಷ್ಟಿ ನಡೆಸಿ ಗಂಭೀರ ಆರೋಪ ಮಾಡಿದ್ದರು. ಇದರ ಜೊತೆ ವರ್ಗಾವಣೆ ವಿಚಾರವಾಗಿ ಡಿವೈಎಸ್​ಪಿ ಜೊತೆಗೆ ಸ್ಯಾಂಟ್ರೋ ರವಿ ಫೋನ್​ನಲ್ಲಿ ಮಾತನಾಡಿದ ಆಡಿಯೋ ಸೋರಿಕೆ ಆಗಿತ್ತು.

ಈ ಆಡಿಯೋ ಬೆನ್ನಲ್ಲೇ ಸ್ಯಾಂಟ್ರೋ ರವಿಗೆ ದೊಡ್ಡ ರಾಜಕಾರಣಿಗಳ ಜೊತೆ ನಂಟಿದ್ದು, ಜೊತೆಗಿರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ವಿಷಯವನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷವು ಬಿಜೆಪಿ ಸರ್ಕಾರದ ಮೇಲೆ ಆರೋಪಗಳ ಸುರಿಮಳೆ ಸುರಿಸುತ್ತಿದೆ. ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಸ್ಯಾಂಟ್ರೋ ರವಿ ಮೇಲೆ ಯಾವುದಾದರು ದೂರುಗಳು ಆರೋಪಗಳಿದ್ದರೆ, ಅವನ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದರು.

ಬಿಜೆಪಿ ನಾಯಕರ ಜೊತೆ ಸ್ಯಾಂಟ್ರೋ ರವಿಗೆ ಸಂಪರ್ಕ ಇದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಅವನು ಯಾರೆಂದು ಗೊತ್ತಿಲ್ಲ, ಅವನ ಜೊತೆ ಚಾಟಿಂಗ್ ಮಾಡಿದ್ದೇನೆ ಎನ್ನುವುದು ಸುಳ್ಳು, ಕುಮಾರಸ್ವಾಮಿ ಅವರೇ ಸ್ಯಾಂಟ್ರೋ ರವಿ ಯಾರು ಎಂಬುದರ ಬಗ್ಗೆ ಹೇಳಬೇಕು ಮತ್ತು ಅವರ ಬಗ್ಗೆ ವಿವರಗಳನ್ನು ನೀಡಬೇಕು ಎಂದು ತಮ್ಮ ಮೇಲಿನ ಆರೋಪಗಳನ್ನು ಸಿಎಂ ಅಲ್ಲಗಳೆದಿದ್ದರು.

ಕ್ರಮ ತೆಗೆದುಕೊಳ್ಳುವಂತೆ ಆಗ್ರಹ: ಸ್ಯಾಂಟ್ರೋ ರವಿ ಪ್ರಕರಣಗಳು ಮುನ್ನಲೆಗೆ ಬರುತ್ತಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅವನ ವಿರುದ್ಧ ಯಾವುದೇ ದೂರಿದ್ದರು ತನಿಖೆ ನಡೆಸಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಅವರಿಗೆ ಪ್ರಧಾನಿ ಹುದ್ದೆ ಸಿಗಲು ಅಂಬೇಡ್ಕರ್ ಕಾರಣ: ನಳಿನ್ ಕುಮಾರ್ ಕಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.