ETV Bharat / state

ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ವಿಶ್ವೇಶ್ವರಯ್ಯ ಪಿಕ್​ಅಪ್ ಡ್ಯಾಮ್

author img

By

Published : Sep 5, 2022, 6:11 PM IST

kn_bng_02_ghaty_av_KA10057
ನೀರಿನ ರಭಸಕ್ಕೆ ಕೊಚ್ಚಿಹೋದ ಸೇತುವೆ

ಭಾರಿ ಮಳೆಯಿಂದಾಗಿ ವಿಶ್ವೇಶ್ವರಯ್ಯ ಪಿಕ್​ ಅಪ್ ಡ್ಯಾಮ್​ ತುಂಬಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಘಾಟಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದೆ.

ದೊಡ್ಡಬಳ್ಳಾಪುರ: ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದ ಘಾಟಿ ಸುಬ್ರಮಣ್ಯ ಬಳಿಯ ವಿಶ್ವೇಶ್ವರಯ್ಯ ಪಿಕ್​ಅಪ್ ಡ್ಯಾಮ್ ತುಂಬಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಘಾಟಿ ಕ್ಷೇತ್ರದ ಸಂಪರ್ಕ ಸೇತುವೆ ಕೊಚ್ಚಿ ಹೋಗಿದೆ.

ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಿಶ್ವೇಶ್ವರಯ್ಯ ಪಿಕ್​ ಅಪ್ ಡ್ಯಾಮ್​ಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇನ್ನು ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಬರುವ ಭಕ್ತರು ಡ್ಯಾಮ್​ಗೆ ಭೇಟಿ ನೀಡದಂತೆ ಎಚ್ಚರಿಕೆ ನೀಡಲಾಗಿದೆ.

ನೀರಿನ ರಭಸಕ್ಕೆ ಕೊಚ್ಚಿಹೋದ ಸೇತುವೆ

ಕೊಚ್ಚಿ ಹೋದ ಸೇತುವೆ: ಡ್ಯಾಮ್ ನಿಂದ ಹೊರ ಬರುವ ನೀರು ಉತ್ತರ ಪಿನಾಕಿನಿ ನದಿ ಸೇರುತ್ತೆ. ಇದರ ಮಧ್ಯದಲ್ಲಿ ಘಾಟಿ ಕ್ಷೇತ್ರಕ್ಕೆ ಸಂಪರ್ಕಿಸುವ ಸೇತುವೆ ಇದ್ದು, ಡ್ಯಾಮ್​ನಿಂದ ಹರಿದು ಬಂದ ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದೆ, ಇದರಿಂದ ಗೌರಿಬಿದನೂರು ಮತ್ತು ಘಾಟಿ ಸಂಪರ್ಕ ಕಡಿತಗೊಂಡಿದೆ. ಭಾರಿ ಮಳೆಯಾದಾಗ ಸೇತುವೆ ಕೊಚ್ಚಿ ಹೋಗುವುದು ಸಾಮಾನ್ಯವಾಗಿದೆ

ಕಲ್ಯಾಣ ಮಂಟಪಕ್ಕೆ ನುಗ್ಗಿದ ನೀರು: ಘಾಟಿ ಕ್ಷೇತ್ರ ಸುಬ್ರಮಣ್ಯ ದೇವಸ್ಥಾನ ಮುಂಭಾಗದಲ್ಲಿದ ವಿಎಸ್​​​​ವಿಎಸ್​​​​ವಿ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದ್ದು, ನೆಲ ಮಹಡಿಯಲ್ಲಿ ಇರುವ ಊಟದ ಕೋಣೆ ಸಂಪೂರ್ಣ ಜಲಾವೃತವಾಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ಮಂಟಪಕ್ಕೆ ನುಗ್ಗಿವೆ. ನೀರನ್ನು ಮೋಟರ್ ಪಂಪ್ ಅಳವಡಿಸಿ ಹೊರ ಹಾಕಲಾಗಿದೆ.

ಇದನ್ನೂ ಓದಿ: ಮಳೆಯ ಆರ್ಭಟಕ್ಕೆ ಸಾಲು ಸಾಲು ಅವಾಂತರ.. ಬೆಂಗಳೂರಲ್ಲಿ ಅಪಾರ್ಟ್​ಮೆಂಟ್​ಗಳು ಜಲಾವೃತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.