ETV Bharat / sports

Tokyo Olympics: ಭಾರತದ ಏಕೈಕ ಜುಡೋ ಸ್ಪರ್ಧಿ ಸುಶೀಲಾ ದೇವಿಗೆ ನಿರಾಸೆ

author img

By

Published : Jul 24, 2021, 11:22 AM IST

ಭಾರತೀಯ ಹಾಕಿ ತಂಡಕ್ಕೆ ಟೋಕಿಯೋ ಒಲಿಂಪಿಕ್​ನಲ್ಲಿ ಶುಭಾರಂಭವಾಗಿದ್ದು, ಭಾರತದ ಪರವಾಗಿ ಜುಡೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಶೀಲಾ ದೇವಿ ಲಿಕ್ಮಾಬಮ್​ಗೆ ನಿರಾಸೆಯಾಗಿದೆ.

Tokyo Olympics: India judoka Shushila Devi Likmabam loses to Eva Csernoviczki in Women's 48kg round of 32
Tokyo Olympics: ಭಾರತದ ಏಕೈಕ ಜುಡೋ ಸ್ಪರ್ಧಿ ಸುಶೀಲಾದೇವಿಗೆ ನಿರಾಸೆ

ಟೋಕಿಯೋ(ಜಪಾನ್) : ಭಾರತದ ಪರವಾಗಿ ಟೋಕಿಯೋ ಒಲಿಂಪಿಕ್​ನ ಜುಡೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಏಕೈಕ ಸ್ಪರ್ಧಿ ಸುಶೀಲಾ ದೇವಿ ಲಿಕ್ಮಾಬಮ್​ ಅವರು ಹಂಗೇರಿ ದೇಶದ ಇವಾ ಸೆರೊವಿಜ್ಕಿ ಅವರ ವಿರುದ್ಧ ಸೋಲನುಭವಿಸಿದ್ದಾರೆ.

ಮಹಿಳೆಯರ 48 ಕೆಜಿ ವಿಭಾಗದಲ್ಲಿ 32ನೇ ಎಲಿಮಿನೇಷನ್​ ರೌಂಡ್​ನಲ್ಲಿ ಸ್ಪರ್ಧಿಸಿದ ಅವರು ಟೋಕಿಯೋ ಕ್ರೀಡಾಗ್ರಾಮದ ನಿಪ್ಪಾನ್ ಬುಡೋಕಾನ್- ಮ್ಯಾಟ್​-1ರಲ್ಲಿ ಸ್ಪರ್ಧೆ ನಡೆದಿದ್ದು, ಇವಾ ಸೆರೊವಿಜ್ಕಿ 10-0 ಅಂತರದಿಂದ ಗೆದ್ದಿದ್ದಾರೆ.

ಇವಾ ಸೆರೊವಿಜ್ಕಿ 2012ರ ಒಲಿಂಪಿಕ್ಸ್​ನಲ್ಲಿ ಜುಡೋದಲ್ಲಿ ಕಂಚಿನ ಪದಕ ಗೆದ್ದಿದ್ದು, ಈ ಬಾರಿ ಚಿನ್ನದ ಪದಕ ಗೆಲ್ಲುವ ಉತ್ಸಾಹದೊಂದಿಗೆ ಒಲಿಂಪಿಕ್​ಗೆ ಆಗಮಿಸಿದ್ದರು. ಸುಶೀಲಾ ದೇವಿ ವಿರುದ್ಧ 2.40ರಲ್ಲಿ ಇವಾ ಸೆರೊವಿಜ್ಕಿ ಅವರು ಇಪ್ಪೋನ್ (ಜುಡೋದಲ್ಲಿ ಒಂದು ಪೂರ್ಣ ಅಂಕ, ಇದನ್ನು ಪಡೆದವರು ಗೆದ್ದಂತೆ) ಪಡೆದರು.

ಮಂಗೋಲಿಯಾದ ಎನ್‌ಖ್‌ಸೆಟ್ಸೆಗ್​ ಟರ್ಬತ್ ರೆಫರಿ ಇದ್ದು, ಇವಾ ಸೆರೊವಿಜ್ಕಿ ಅವರನ್ನು ವಿಜಯಶಾಲಿ ಎಂದು ಘೋಷಿಸಿದ್ದರು. ಹಂಗೇರಿಯಾದ ಇವಾ ಸೆರೊವಿಜ್ಕಿ ವಿಶ್ವ ಜುಡೋದಲ್ಲಿ 24ನೇ ರ್ಯಾಂಕ್ ಇದ್ದರೆ, ಸುಶೀಲಾ ದೇವಿ 46ನೇ ರ್ಯಾಂಕ್​​​ನಲ್ಲಿದ್ದಾರೆ.

ಇದನ್ನೂ ಓದಿ: Tokyo Olympics: ಭಾರತೀಯ ಹಾಕಿ ತಂಡದ ಶುಭಾರಂಭ, ನ್ಯೂಜಿಲ್ಯಾಂಡ್​ ವಿರುದ್ಧ ರೋಚಕ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.