ETV Bharat / sports

Tokyo Olympics: 10 ಮೀ ಏರ್ ರೈಫಲ್​​​ ಮಿಶ್ರ ಆವೃತ್ತಿಯಿಂದ ಹೊರಬಿದ್ದ ಚೌಧರಿ-ಭಾಕರ್​

author img

By

Published : Jul 27, 2021, 6:54 AM IST

Updated : Jul 27, 2021, 7:24 AM IST

10 ಮೀಟರ್ ಏರ್​ ರೈಫಲ್ ಮಿಶ್ರ ತಂಡದ ಮೊದಲ ಹಂತದ ಅರ್ಹತಾ ಪಂದ್ಯದಲ್ಲಿ ಮೊದಲ ಸ್ಥಾನಗಳಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದರು. ಆದರೆ ಮುಂದಿನ ಸುತ್ತಿನಲ್ಲಿ ಹೊರಬಿದ್ದಿದ್ದಾರೆ.

Saurabh Chaudhary, Manu Bhaker
ಚೌಧರಿ, ಭಾಕರ್

ಟೋಕಿಯೊ (ಜಪಾನ್​​): ಟೋಕಿಯೊ ಒಲಿಂಪಿಕ್ಸ್ 5ನೇ ದಿನವಾದ ಇಂದು ಶೂಟರ್​ ಸೌರಭ್ ಚೌಧರಿ ಮತ್ತು ಮನು ಭಾಕರ್​ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದರು. 10 ಮೀಟರ್ ಏರ್​ ರೈಫಲ್ ಮಿಶ್ರ ತಂಡದ ಮೊದಲ ಹಂತದ ಅರ್ಹತಾ ಪಂದ್ಯದಲ್ಲಿ ಮೊದಲ ಸ್ಥಾನಗಳಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದರು. ಆದರೆ ಅರ್ಹತಾ ಸುತ್ತಿನಾ 2ನೇ ಹಂತದಲ್ಲಿ ಹೊರಬಿದ್ದಿದ್ದಾರೆ. ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕಿಳಿದು ಡಬಲ್ಸ್​ನಲ್ಲಿ ಪದಕ ಪಡೆಯುವ ಕನಸು ಹುಸಿಯಾಗಿದೆ.

ಇತ್ತ ಮಿಶ್ರ ತಂಡದ ಈವೆಂಟ್​ನಲ್ಲಿ ಅಭಿಷೇಕ್ ವರ್ಮಾ ಮತ್ತು ಯಶಸ್ವಿನಿ ದೇಸ್ವಾಲ್​​ ಹೊರಬಿದ್ದಿದ್ದಾರೆ. 10 ಮೀಟರ್ ಏರ್ ರೈಫಲ್ ವಿಭಾಗದ ಮಿಶ್ರ ತಂಡ ವಿಭಾಗದಲ್ಲಿ ಆಡಿದ್ದ ಜೋಡಿ ಅಂಕ ಪಟ್ಟಿಯಲ್ಲಿ 17ನೇ ಸ್ಥಾನ ಪಡೆದು ಒಲಿಂಪಿಕ್ಸ್​ನಿಂದ ಹೊರಬಿದ್ದಿದ್ದಾರೆ.

4ನೇ ದಿನವಾದ ನಿನ್ನೆ ಭಾರತ ಹಲವು ವಿಭಾಗಗಳಲ್ಲಿ ಸ್ಪರ್ಧಿಸಿದ್ದರೂ ಪದಕ ಗೆಲ್ಲುವಲ್ಲಿ ವಿಫಲವಾಗಿತ್ತು. ಬ್ಯಾಡ್ಮಿಂಟನ್​, ಕುಸ್ತಿ, ಬಾಕ್ಸಿಂಗ್​ ಹಾಗೂ ಹಾಕಿಗಳಲ್ಲಿ ಮಾತ್ರ ಪದಕ ಗೆಲ್ಲುವ ಗುರಿ ಇಟ್ಟುಕೊಂಡಿದೆ.

Last Updated :Jul 27, 2021, 7:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.