ETV Bharat / sports

ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಿಂದ ಹಿಂದೆ ಸರಿದ ರೋಜರ್ ಫೆಡರರ್

author img

By

Published : Jun 7, 2021, 8:47 AM IST

Roger Federer
ರೋಜರ್ ಫೆಡರರ್

ನಿನ್ನೆ ನಡೆದ ಪಂದ್ಯದಲ್ಲಿ ಫೆಡರರ್ ಡೊಮಿನಿಕ್ ಕೂಫರ್ ವಿರುದ್ಧ 7-6(5) 6-7(3) 7-6(4) 7-5ರ ಅಂತರದಲ್ಲಿ ಪ್ರಯಾಸದ ಗೆಲುವು ದಾಖಲಿಸಿದರು.

ಪ್ಯಾರಿಸ್: ದಾಖಲೆಯ 20 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಪ್ರಸಕ್ತ ಸಾಲಿನ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಪ್ರಸಕ್ತ ಸಾಲಿನ ಪಂದ್ಯಾವಳಿಯಲ್ಲಿ ಅವರು ನಾಲ್ಕನೇ ಸುತ್ತಿಗೆ ಪ್ರವೇಶಿಸಿರುವ ಹೊರತಾಗಿಯೂ ಅಚ್ಚರಿಯ ಬೆಳವಣಿಗೆ ನಡೆದಿದೆ.

ನಿನ್ನೆ ನಡೆದ ಪಂದ್ಯದಲ್ಲಿ ಫೆಡರರ್ ಜರ್ಮನಿಯ ಡೊಮಿನಿಕ್ ಕೂಫರ್ ವಿರುದ್ಧ ಬರೊಬ್ಬರಿ 3 ಗಂಟೆ 36 ನಿಮಿಷ ಸೆಣಸಾಟ ನಡೆಸಿದರು. ಬರೋಬ್ಬರಿ 3 ಗಂಟೆ 36 ನಿಮಿಷ ನಡೆದ ಪಂದ್ಯದಲ್ಲಿ ಫೆಡರರ್, ಕೂಫರ್ ವಿರುದ್ಧ 7-6(5) 6-7(3) 7-6(4) 7-5ರ ಅಂತರದಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದರು. ಈ ಪಂದ್ಯವೂ ಕೂಡ ಫೆಡರರ್ ಅವರ ಕಾಲಿನ ಗಾಯದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

ಮೊಣಕಾಲಿನ ಶಸ್ತ್ರಚಿಕಿತ್ಸೆಯ ಬಳಿಕ ಕಳೆದ ಮೂರು ವರ್ಷಗಳಲ್ಲಿ ಫೆಡರರ್ ಆರು ಪಂದ್ಯಗಳನ್ನಾಡಿದ್ದಾರೆ.

"ನನ್ನ ತಂಡದೊಂದಿಗೆ ಚರ್ಚಿಸಿದ ನಂತರ ಇಂದು ಫ್ರೆಂಚ್ ಓಪನ್‌ನಿಂದ ಹೊರಬರಲು ನಿರ್ಧರಿಸಿದ್ದೇನೆ. ಎರಡು ಮೊಣಕಾಲು ಶಸ್ತ್ರಚಿಕಿತ್ಸೆಗಳ ಬಳಿಕ ಮತ್ತು ಒಂದು ವರ್ಷದ ರಿ-ಹ್ಯಾಬ್ (ಪುನಶ್ಚೇತನ ಕೇಂದ್ರ) ನಂತರ ನನ್ನ ದೇಹದ ಆರೋಗ್ಯದ ಕಡೆಗೆ ಗಮನ ನೀಡಬೇಕಿದೆ. ಈಗಾಗಲೇ ಬೆಲ್ಟ್ ಧರಿಸಿ 3 ಪಂದ್ಯಗಳನ್ನು ಆಡಿದ್ದು ನನಗೆ ರೋಮಾಂಚನ ಅನುಭವ ನೀಡಿದೆ".

- ರೋಜರ್‌ ಫೆಡರರ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.