ETV Bharat / sports

'ನನಗೆ ಕ್ರೀಡೆಯಲ್ಲಿ ಯಶಸ್ವಿಯಾಗಲು ಪೋಷಕರು ನೀಡಿದ್ದು ಕೇವಲ 2 ವರ್ಷ ಅವಕಾಶ'

author img

By

Published : Jul 12, 2020, 2:11 PM IST

ಪೋಷಕರು ನನ್ನ ಟೆನ್ನಿಸ್​ ತರಬೇತಿಗೆ ಒಂದು ವರ್ಷಕ್ಕೆ 30,000 ಸ್ವಿಸ್​ ಹಣ ನೀಡುತ್ತಿದ್ದರು. ಇಷ್ಟು ಹಣ ವ್ಯಯಿಸಿ ತರಭೇತಿ ಪಡೆಯುತ್ತಿದ್ದರೂ ನಾನೊಬ್ಬ ವೃತ್ತಿಪರ ಟೆನ್ನಿಸ್​ ಆಟಗಾರನಾಗುತ್ತೇನೆ ಎಂಬುವುದರಲ್ಲಿ ಅವರಿಗೆ ಸಂಶಯವಿತ್ತು ಎಂದು 38 ವರ್ಷದ ವಿಶ್ವ ಚಾಂಪಿಯನ್‌ ಟೆನ್ನಿಸ್ ಆಟಗಾರ ರೋಜರ್ ಫೆಡರರ್‌ ಹೇಳಿಕೊಂಡಿದ್ದಾರೆ.

Roger Federer
ರೋಜರ್​ ಫೆಡರರ್​

ಜೂರಿಚ್​: ಅತಿ ಹೆಚ್ಚು ಗ್ರ್ಯಾಂಡ್​ ಸ್ಲಾಮ್​ ಪ್ರಶಸ್ತಿಗಳನ್ನು ಗೆದ್ದಿರುವ ಸ್ವಿಟ್ಜರ್ಲೆಂಡ್‌ನ ರೋಜರ್​ ಫೆಡರರ್​ಗೆ ಅವರ ಪೋಷಕರು ಸಾಕಷ್ಟು ಹಣಕಾಸು ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಆದರೆ ಕ್ರೀಡೆಯಲ್ಲಿ ಯಶಸ್ಸು ಅವರು ನೀಡಿದ್ದು ಕೇವಲ 2 ವರ್ಷ ಕಾಲಾವಕಾಶ. ಈ ಅಲ್ಪ ಕಾಲಾವಧಿಯಲ್ಲೇನಾದ್ರೂ ವಿಫಲರಾದರೆ ಮತ್ತೆ ಶಾಲೆಗೆ ಹೋಗಬೇಕೆಂದು ಹೇಳಿದ್ದರು ಎಂಬ ವಿಚಾರವನ್ನು ವಿಶ್ವದ ಶ್ರೀಮಂತ ಕ್ರೀಡಾಪಟು ರೋಜರ್‌ ಪೆಡರರ್​ ಹೇಳಿದ್ದಾರೆ.


ರೋಜರ್​ ಫೆಡರರ್​
ರೋಜರ್​ ಫೆಡರರ್​

"ನಾನು 16 ವರ್ಷದವನಾಗಿದ್ದಾಗ ಶಾಲೆ ತ್ಯಜಿಸಿ ಟೆನ್ನಿಸ್ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಪೋಷಕರಿಗೆ ತಿಳಿಸಿದ್ದೆ. ಅದಕ್ಕೆ ನನ್ನ ತಂದೆ ನನಗೆ 2 ವರ್ಷ ಕಾಲಾವಕಾಶ ನೀಡಿದ್ದರು. ಆ ಸಮಯದಲ್ಲಿ ನಾನು ವೃತ್ತಿಪರ ಟೆನ್ನಿಸಿಗನಾಗಲು ವಿಫಲನಾದರೆ, ಮತ್ತೆ ಶಾಲೆಗೆ ಹೋಗಬೇಕು ಎಂದು ಎಚ್ಚರಿಸಿದ್ದರು. ಅದಕ್ಕೆ ನಾನು ನನ್ನನ್ನು ನಂಬಿ ಎಂದು ಹೇಳಿದ್ದೆ. ಅದೃಷ್ಟವಶಾತ್‌ ನಾನು ಆ ವೇಳೆ ಜೂನಿಯರ್ ವಿಶ್ವಚಾಂಪಿಯನ್​ ಆದೆ " ಎಂದು ಅವರು ತಿಳಿಸಿದ್ದಾರೆ.

ವಿಶ್ವದಲ್ಲೇ ಅತ್ಯುತ್ತಮ ಪುರುಷ ಟೆನ್ನಿಸ್ ಆಟಗಾರನಾಗಿರುವ ರೋಜರ್​ 20 ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿ ಗೆದ್ದಿದ್ದಾರೆ. ಟೆನ್ನಿಸ್​ ಶ್ರೇಯಾಂಕದಲ್ಲಿ ರೋಜರ್​ ಸತತ 237 ವಾರ ಸೇರಿದಂತೆ 310 ವಾರಗಳ ಕಾಲ ಮೊದಲ ಶ್ರೇಯಾಂಕದಲ್ಲಿದ್ದ ದಾಖಲೆ ಇದೆ. ಈ ಮೂಲಕ ಅತಿಹೆಚ್ಚು ವಾರಗಳ ಕಾಲ ಅಗ್ರ​ ಸ್ಥಾನದಲ್ಲಿದ್ದ ಆಟಗಾರ ಎಂಬ ದಾಖಲೆಗೂ ಅವರು ಪಾತ್ರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.